RCB ನೆಕ್ಸ್ಟ್​ ಮ್ಯಾಚ್ ಯಾವಾಗ, ಎಲ್ಲಿ..? ಬಲಿಷ್ಠ ಟೀಮ್ ಜೊತೆ ಹೋರಾಡಲಿರೋ ರಜತ್ ಸೇನೆ

author-image
Bheemappa
Updated On
RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಕಿಂಗ್ ನ್ಯೂಸ್..!
Advertisment
  • ರಜತ್ ಪಡೆಯ ಮುಂದಿನ ಮ್ಯಾಚ್ ಏನಾಗುತ್ತೋ ಏನೋ..?
  • ಬಲಿಷ್ಠ ಟೀಮ್ ಯಾವುದು, RCBಗೆ ಗೆಲ್ಲುವ ಕ್ಯಾಪಸಿಟಿ ಬೇಕು
  • ಬೆಂಗಳೂರು ತಂಡದ ಮುಂದಿನ ಪಂದ್ಯ ನಡೆಯುವ ಮೈದಾನ?

ಕ್ಯಾಪ್ಟನ್​ ರಜತ್ ಪಾಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಲ್ಲಿ ಮನಮೋಹಕವಾಗಿ ಪ್ರದರ್ಶನ ನೀಡುತ್ತಿದೆ. ರಾಜಸ್ಥಾನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಕಿಂಗ್ ಕೊಹ್ಲಿ ಹಾಗೂ ಫಿಲಿಪ್ ಸಾಲ್ಟ್​ ಬ್ಯಾಟಿಂಗ್​ನಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿ ತಂಡವನ್ನು ಗೆಲ್ಲಿಸಿದ್ದರು. ಸದ್ಯ ಗೆಲುವಿನ ಟ್ರ್ಯಾಕ್​ಗೆ ಮರಳಿದ ಆರ್​ಸಿಬಿಯ ಮುಂದಿನ ಮ್ಯಾಚ್ ಯಾವಾಗ, ಎಲ್ಲಿ ನಡೆಯಲಿದೆ?.

publive-image

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಆರ್​ಸಿಬಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು ಇದರಲ್ಲಿ 4 ಮ್ಯಾಚ್​ಗಳಲ್ಲಿ ರೋಚಕ ಗೆಲುವು ಸಾಧಿಸಿದೆ. ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಸೋಲುಂಡಿದೆ. ಗುಜರಾತ್​ ಟೈಟನ್ಸ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿ ತವರಲ್ಲಿ ಮಕಾಡೆ ಮಲಗಿ ಅಭಿಮಾನಿಗಳಿಗೆ ಭಾರೀ ನಿರಾಸೆ ಮಾಡಿದೆ.

ತವರಿನಲ್ಲಿ ನಿರಾಸೆ ಮೂಡಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಪಂದ್ಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ. ತವರಲ್ಲಿ ನಡೆಯುವ ಪಂದ್ಯದ ಕುರಿತು ಆರ್​​ಸಿಬಿ ಅಭಿಮಾನಿಗಳು ಹೃದಯ ಗಟ್ಟಿ ಮಾಡಿಕೊಳ್ಳಬೇಕು. ಏಕೆಂದರೆ ಹೊರಗೆ ವೀರಾವೇಶದಿಂದ ಹೋರಾಡುವ ರಜತ್ ಪಡೆ, ಮನೆಯಂಗಳದಲ್ಲಿ ನೆಲ ಕಚ್ಚುತ್ತಿರುವುದು ಲಾಯಲ್​​ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

ಮುಂದಿನ ಪಂದ್ಯದ ಫಲಿತಾಂಶ ಆರ್​ಸಿಬಿ ವಿರುದ್ಧ ಬರಬಹುದು ಅಥವಾ ಬಾರದೇ ಇರಬಹುದು. ಏಕೆಂದರೆ ಆರ್​ಸಿಬಿ ಮುಂದಿನ ಮ್ಯಾಚ್ ಅನ್ನು ಏಪ್ರಿಲ್​ 18 ರಂದು ಸಂಜೆ 7:30ಕ್ಕೆ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಬಲಿಷ್ಠ ಪಂಜಾಬ್​ ಕಿಂಗ್ಸ್​ ಅನ್ನು ಎದುರಿಸಲಿದೆ. ಈಗಾಗಲೇ ಆರ್​ಸಿಬಿ ಜೈಪುರದಿಂದ ಬೆಂಗಳೂರಿಗೆ ಬಂದು ಇಳಿದಿದೆ. ಹೈದ್ರಾಬಾದ್​ ತಂಡಕ್ಕೆ ಪಂಜಾಬ್​ ಕಿಂಗ್ಸ್ 246 ರನ್​ಗಳ ಟಾರ್ಗೆಟ್​ ಕೊಟ್ಟಂತಹ ತಂಡ. ಇನ್ನು ಆರ್​​ಸಿಬಿ ವಿರುದ್ಧ ಪಂಜಾಬ್ ಹೇಗೆ ಬ್ಯಾಟ್ ಬೀಸಬಹುದು ಎನ್ನುವುದು ಫ್ಯಾನ್ಸ್​ ಊಹೆಗೆ ಬಿಟ್ಟದ್ದು.

ಇದನ್ನೂ ಓದಿ:ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​ ಅಕ್ಷರ್​ ಪಟೇಲ್​ಗೆ ಬಿಗ್ ಶಾಕ್

publive-image

ಏಪ್ರಿಲ್​ 18 ರಂದು ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ ಮುಗಿದ ನಂತರ ಇನ್ನೊಂದು ಪಂದ್ಯವನ್ನು ಇದೇ ಪಂಜಾಬ್ ಜೊತೆ ಆರ್​ಸಿಬಿ ಆಡಲಿದೆ. ಆದರೆ ಈ ಪಂದ್ಯ ಏಪ್ರಿಲ್​ 20 ರಂದು ಚಂಡೀಗಢದ ಮುಲ್ಲನ್ಪುರ್​ ನಗರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ 3:30ಕ್ಕೆ ನಡೆಯಲಿದೆ. ಮುಂದಿನ ಎರಡು ಪಂದ್ಯಗಳು ಬ್ಯಾಕ್ ಟು ಬ್ಯಾಕ್​ ಪಂಜಾಬ್ ಜೊತೆಯೇ ಆರ್​ಸಿಬಿ ಸೆಣಸಾಟ ನಡೆಸಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment