ಅವಕಾಶ ಇದ್ರೂ ವಿಲ್​ ಜಾಕ್ಸ್​ ಖರೀದಿ ಮಾಡದ ಆರ್​​ಸಿಬಿ; ಕಾರಣವೇನು?

author-image
Ganesh Nachikethu
Updated On
‘ನಮ್ ಜನ ಗೊತ್ತಲ್ವಾ..?’ ಆರ್​ಸಿಬಿ ಅಭಿಮಾನಿಗಳ ಹೃದಯಕ್ಕೆ ಟಚ್ ಮಾಡಿದ ವಿಲ್​ ಜಾಕ್ಸ್​.. Video
Advertisment
  • 2ನೇ ದಿನದ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜು
  • ಫ್ಯಾನ್ಸ್​ಗೆ ಶಾಕ್​ ಕೊಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು!
  • ಸ್ಟಾರ್​ ಆಲ್​ರೌಂಡರ್​ ವಿಲ್​ ಜಾಕ್ಸ್​ ಕೈ ಬಿಟ್ಟ ಆರ್​​ಸಿಬಿ ಟೀಮ್​​

ಸದ್ಯ ನಡೆಯುತ್ತಿರೋ ಐಪಿಎಲ್‌ 2025ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಹೆಚ್ಚು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​ ಅವರಿಗೆ ಮಣೆ ಹಾಕಿದೆ. ಆರ್​​ಸಿಬಿ ಆಟಗಾರನಿಗೆ ಬರೋಬ್ಬರಿ 5.25 ಕೋಟಿ ನೀಡಿ ಖರೀದಿ ಮಾಡಿದೆ.

ವಿಲ್​ ಜಾಕ್ಸ್​ ಕೈ ಬಿಟ್ಟ ಆರ್​​ಸಿಬಿ

ಕಳೆದ ಸೀಸನ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಸ್ಟಾರ್​ ಆಲ್​ರೌಂಡರ್​ ವಿಲ್​ ಜಾಕ್ಸ್​ ಮಿಂಚಿದ್ರು. ಆರ್​​ಸಿಬಿ ತಂಡ ಪ್ಲೇ ಆಫ್​​ಗೆ ಹೋಗಲು ತಂಡದಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮೆಗಾ ಹರಾಜಿಗೆ ಮುನ್ನ ಆರ್​ಸಿಬಿ ಇವರನ್ನು ತಂಡದಿಂದ ರಿಲೀಸ್​ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್​ಟಿಎಂ ಕಾರ್ಡ್​ ಬಳಸಬಹುದು ಎಂದು ಹೇಳಲಾಗಿತ್ತು. ಆದರೆ, ಆರ್​​ಸಿಬಿ ಫ್ಯಾನ್ಸ್​ ಕನಸಿಗೆ ತಣ್ಣೀರೆರಚಿದ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ಗೆ ವಿಲ್​ ಜಾಕ್ಸ್​ ಅವರನ್ನು ಆರ್​ಟಿಎಂ ಕಾರ್ಡ್​ ಬಳಸದೆ ಬಿಟ್ಟುಕೊಟ್ಟಿದೆ.

ಈಗಾಗಲೇ ಸ್ಟಾರ್ ಆಟಗಾರರನ್ನು ಮುಂಬೈ ಉಳಿಸಿಕೊಂಡಿದೆ. ಸ್ಟಾರ್‌ ಆಟಗಾರರೊಂದಿಗೆ ಆಡುವ ಕೆಲವೇ ಆಟಗಾರರನ್ನು ಮಾತ್ರ ಹುಡುಕಿ ಮುಂಬೈ ಬಿಡ್ ಮಾಡಿದೆ. ಇದರಲ್ಲಿ ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಅವರಿಗೆ 12.50 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಬಳಿಕ ಆರ್‌ಸಿಬಿ ಬಿಡುಗಡೆ ಮಾಡಿದ ವಿಲ್ ಜ್ಯಾಕ್ ಅವರಿಗೆ 5.25 ಕೋಟಿ ರೂಗೆ ಮುಂಬೈ ಗಾಳ ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment