/newsfirstlive-kannada/media/post_attachments/wp-content/uploads/2025/06/RCB-IPL.jpg)
ಐಪಿಎಲ್-2025 ಟ್ರೋಫಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಮುತ್ತಿಟ್ಟಿದೆ. ಅಹ್ಮದಾಬಾದ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಗೆಲ್ಲುವ ಮೂಲಕ ಪಾಟೀದಾರ್ ನಾಯಕತ್ವದ ಆರ್ಸಿಬಿ, ಕಪ್ ಗೆದ್ದುಕೊಂಡಿದೆ. ಸತತ 18 ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಚೊಚ್ಚಲ ಟ್ರೋಫಿಯನ್ನ ತನ್ನದಾಗಿಸಿಕೊಂಡಿದೆ.
18 ವರ್ಷಗಳ ಸತತ ಕನಸು.. ‘ಈ ಸಲ ಕಪ್ ನಮ್ದೇ’ ಎಂಬ ಘೋಷಣೆ.. ಆರ್ಸಿಬಿ ಮ್ಯಾನೇಜ್ಮೆಂಟ್ ಪರಿಶ್ರಮ, ಆಟಗಾರರ ನಿರಂತರ ಪ್ರಯತ್ನ, ಅಭಿಮಾನಿಗಳ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ. ಸತತ ವರ್ಷಗಳ ಕಾಯುವಿಕೆಯ ನಂತರ ಆರ್ಸಿಬಿ ಟ್ರೋಫಿಗೆ ಮುತ್ತಿಟ್ಟಿದೆ. ಕೋಟ್ಯಾಂತರ ಅಭಿಮಾನಿಗಳ ಕನಸು ನನಸಾಗಿದೆ. ಆರ್ಸಿಬಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದಾರೆ. ಗೆಲುವು ಸಾಧಿಸುತ್ತಿದ್ದಂತೆಯೇ ಆರ್ಸಿಬಿ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಒಬ್ಬರಿಂದಲೇ ಹೃದಯಗೆದ್ದ ಇನ್ನಿಂಗ್ಸ್.. ಪಂಜಾಬ್ ಕಿಂಗ್ಸ್ಗೆ 191 ರನ್ಗಳ ಟಾರ್ಗೆಟ್..!
ಪಂಜಾಬ್ ಕನಸು ಭಗ್ನ..!
ಪಂಜಾಬ್ ಕಿಂಗ್ಸ್ ಕೂಡ 18 ವರ್ಷಗಳಿಂದ ಟ್ರೋಫಿ ಗೆಲ್ಲಲು ಪ್ರಯತ್ನಿಸ್ತಿದೆ. ಈ ಬಾರಿ ಕಪ್ ಗೆಲ್ಲಬೇಕು ಎಂಬ ಕನಸು ನುಚ್ಚು ನೂರಾಗಿದೆ. ಆ ಮೂಲಕ ಪಂಜಾಬ್ ಕಿಂಗ್ಸ್ ಟ್ರೋಫಿ ಕನಸು ಜೀವಂತವಾಗಿಯೇ ಉಳಿದಿದ್ದು, ಮುಂದಿನ ಸೀಸನ್ವರೆಗೆ ಕಾಯಬೇಕಿದೆ. ಫೈನಲ್ವರೆಗೆ ಬಂದಿದ್ದ ಪಂಜಾಬ್ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆರ್ಸಿಬಿ ಗೆಲುವಿನೊಂದಿಗೆ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದೆ. ಮೇ 17 ರಂದು ಐಪಿಎಲ್ ಟೂರ್ನಿ ಆರಂಭವಾಗಿ, ಜೂನ್ 3 ರಂದು ಅಂತ್ಯಗೊಂಡಿದೆ.
ಇದನ್ನೂ ಓದಿ: ಬೆಂಗಳೂರು ಹುಡುಗಿ ಮದುವೆಯಾಗಿರೋದು.. ನನ್ನ ಟೀಮ್ RCB ಅಂದ್ರು ಇಂಗ್ಲೆಂಡ್ ಮಾಜಿ ಪ್ರಧಾನಿ ರಿಷಿ ಸುನಕ್
191 ರನ್ಗಳ ಟಾರ್ಗೆಟ್..!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ, ಕೊಹ್ಲಿ ಅವರ ಅಮೂಲ್ಯ 43 ರನ್ಗಳ ಕಾಣಿಕೆಯೊಂದಿಗೆ 190 ರನ್ಗಳಿಸಿತ್ತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆಲುವಿಗೆ 191 ರನ್ಗಳು ಬೇಕಾಗಿತ್ತು. ಆದರೆ ಆರ್ಸಿಬಿ ಬೌಲರ್ಗಳ ಮುಂದೆ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳ ಆಟ ನಡೆಯಲಿಲ್ಲ. ಕೊನೆಯದಾಗಿ 20 ಓವರ್ಗೆ 7 ವಿಕೆಟ್ ಕಳೆದುಕೊಂಡು 184 ರನ್ಗಳಿಸಿ ಶ್ರೇಯಸ್ ಅಯ್ಯರ್ ಪಡೆ ಸೋಲಿಗೆ ಶರಣಾಯ್ತು. ಕಿಂಗ್ ವಿರಾಟ್ ಕೊಹ್ಲಿ ಬಳಗ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ