ಆರ್​ಸಿಬಿಗೆ ಬಂತು ನೂರಾನೆ ಬಲ.. ಆಟಗಾರರ ಆತ್ಮವಿಶ್ವಾಸಕ್ಕೆ ಸಿಗಲಿದೆ ಇವತ್ತು ಅಸಲಿ ಶಕ್ತಿ..!

author-image
Ganesh
Updated On
ಗಿಲ್​ಗೆ ಒಲಿದ ಟಾಸ್​.. ರಜತ್​ ನೇತೃತ್ವದ RCB ತಂಡದ ಪ್ಲೇಯಿಂಗ್​- 11ರಲ್ಲಿ ಯಾರಿಗೆಲ್ಲಾ ಸ್ಥಾನ?
Advertisment
  • ಗುಜರಾತ್ ಟೈಟನ್ಸ್​ಗೆ ಗುನ್ನಾ ಕೊಡಲು RCB ರೆಡಿ
  • ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ IPL ಪಂದ್ಯ
  • ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ RCB

ಐಪಿಎಲ್​ ಸೀಸನ್​ 18 ಆರಂಭವಾಗಿ 10 ದಿನ ಕಳೆದಿದೆ. ಕಲರ್​​ಫುಲ್​ ಕ್ರಿಕೆಟ್​ ಲೀಗ್​​​ನ ಕಾವು​ ಇಡೀ ಭಾರತವನ್ನ ಆವರಿಸಿದೆ. ಗಾರ್ಡನ್​ ಸಿಟಿ ಬೆಂಗಳೂರಿನಲ್ಲಿ ಇವತ್ತಿನಿಂದ ಅಸಲಿ ಫೀವರ್​​ ಶುರುವಾಗಲಿದೆ. ಹೋಮ್​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ ಸೀಸನ್​​ 18ರ ಮೊದಲ ಪಂದ್ಯವನ್ನಾಡಲು ಪ್ಲೇ ಬೋಲ್ಡ್​ ಆರ್ಮಿ ರೆಡಿಯಾಗಿದ್ದು, ಆರ್​ಸಿಬಿಗೆ ಅಭಿಮಾನಿಗಳ ನೂರಾನೆ ಬಲ ಸಿಕ್ಕಿದೆ.

ಇದನ್ನೂ ಓದಿ: ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!

publive-image

ಈಗಾಗಲೇ ಕೊಲ್ಕತ್ತಾ, ಚೆನ್ನೈನಲ್ಲಿ ಗೆದ್ದು ಬೀಗಿರುವ ಆರ್​ಸಿಬಿಗೆ ಇಂದು ಮತ್ತಷ್ಟು ಬಲ ಬಂದಿದೆ. ಮೊದಲ ಕಾರಣ, ತವರು ಅಂಗಳದಲ್ಲಿ ಪಂದ್ಯ ನಡೆಯುತ್ತಿರೋದು. ಮೈದಾನ ಹಾಗೂ ಪಿಚ್​​ನ ಗುಣಲಕ್ಷಣದ ಬಗ್ಗೆ ಇರುವ ಹಿಂಚಿಂಚು ಮಾಹಿತಿಯೇ ಆರ್​ಸಿಬಿಗೆ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಇದನ್ನೂ ಓದಿ: ಲಕ್ಕಿ ಕ್ಯಾಪ್ಟನ್ ರಜತ್..! ಪಾಟೀದಾರ್ ನಾಯಕತ್ವದಲ್ಲಿ RCB ವಾತಾವರಣ ಫುಲ್ ಚೆಂಜ್..!

publive-image

ಕಳೆದ ಎರಡೂ ಪಂದ್ಯಗಳು ಔಟ್ ಸೈಡ್ ನಡೆದಿದ್ದವು. ಮೊದಲ ಪಂದ್ಯ ಕೋಲ್ಕತ್ತದಲ್ಲಿ ನಡೆದಿತ್ತು. ಈ ವೇಳೆ ಆರ್​ಸಿಬಿ ಆಟಗಾರರಿಗೆ ಮೈದಾನದ ಗ್ಯಾಲರಿಯಲ್ಲಿ ಅಭಿಮಾನಿಗಳ ಕೊರತೆ ಕಾಡಿತ್ತು. ಕೋಲ್ಕತ್ತ ಅಭಿಮಾನಿಗಳೇ ಹೆಚ್ಚಿದ್ದರು. ಅದೇ ರೀತಿ ಸಿಎಸ್​ಕೆ ವಿರುದ್ಧ ಆಡುವಾಗಲೂ ಚೆನ್ನೈ ಸೂಪರ್​ ಕಿಂಗ್ಸ್​ನ ಅಭಿಮಾನಿಗಳ ಬಳಗವೇ ದೊಡ್ಡದಿತ್ತು. ಆದರೆ ಇಂದು ಹಾಗೆ ಅಲ್ಲ.

ಇದನ್ನೂ ಓದಿ: GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!

publive-image

ಆರ್​ಸಿಬಿಗೆ ಬೆನ್ನೆಲುಬಾಗಿ ನಿಂತಿರುವ ಅಭಿಮಾನಿಗಳ ಸಾಗರ ಇಂದು ಚಿನ್ನಸ್ವಾಮಿಯಲ್ಲಿ ಇರಲಿದೆ. ಅಭಿಮಾನಿಗಳ ಅಭಿಮಾನ, ಬೆಂಬಲವೇ ಆರ್​ಸಿಬಿ ಆಟಗಾರರಿಗೆ ಸ್ಫೂರ್ತಿ ಆಗಲಿದೆ. ಹೀಗಾಗಿ ಇವತ್ತು ನಡೆಯವ ಪಂದ್ಯಕ್ಕೆ ಆರ್​​ಸಿಬಿ ಆತ್ಮವಿಶ್ವಾಸಕ್ಕೆ, ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಅಭಿಮಾನಿಗಳ ನೂರಾನೆ ಬಲ ಸಿಗಲಿದೆ. ಅಂತೆಯೇ ಎದುರಾಳಿ ಗುಜರಾತ್​ಗೆ ಗುನ್ನಾ ಕೊಟ್ಟು ಹ್ಯಾಟ್ರಿಕ್​​ ಗೆಲುವು ಸಾಧಿಸಲು ತುದಿಗಾಲಲ್ಲಿ ನಿಂತಿದೆ ನಮ್ಮ ಆರ್​ಸಿಬಿ.

ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ದತ್ತು ಪುತ್ರನದ್ದೇ ಕಿಂಗ್​ಡಮ್; ಶತಕ ಸರದಾರನ ದಾಖಲೆಗಳೇ ಅದ್ಭುತ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment