newsfirstkannada.com

×

ಮೆಗಾ ಆಕ್ಷನ್​ಗೆ ಮುನ್ನ ಸ್ಟಾರ್​ ಆಟಗಾರನ ಆಫರ್​ ಬೇಡ ಎಂದ ಆರ್​​​ಸಿಬಿ; ಅಸಲಿಗೆ ಆಗಿದ್ದೇನು?

Share :

Published October 2, 2024 at 3:50pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹರಾಜು!

    ಬಿಸಿಸಿಐನಿಂದ ಅಧಿಕೃತವಾಗಿ ಹೊಸ ರಿಟೆನ್ಷನ್​ ನಿಯಮಗಳು ಪ್ರಕಟ

    ಈ ಮಧ್ಯೆ ಆರ್​​​ಸಿಬಿಯಿಂದಲೇ ಹೊರಬಿತ್ತು ಒಂದು ಬಿಗ್​ ಅಪ್ಡೇಟ್​

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ಈ ಮುನ್ನವೇ ಬಿಸಿಸಿಐ ರಿಟೆನ್ಷನ್​ ನಿಯಮಗಳನ್ನು ಪ್ರಕಟ ಮಾಡಿದೆ. ಕಳೆದ ಸೀಸನ್​​ಗಿಂತಲೂ ಭಿನ್ನವಾಗಿ ಈ ಬಾರಿ ಬಿಸಿಸಿಐ ಐಪಿಎಲ್​​ ನಿಯಮಗಳು ರೂಪಿಸಿದೆ. ಆರ್​ಟಿಎಂ ಕಾರ್ಡ್ (RTM) ಬಳಕೆ ನಿಯಮ ಮತ್ತೆ ಜಾರಿ ಮಾಡಲಾಗಿದೆ. 5 ವರ್ಷಗಳ ಕಾಲ ನಿವೃತ್ತಿ ಘೋಷಿಸಿದ ಆಟಗಾರನನ್ನು ಅನ್‌ಕ್ಯಾಪ್ಡ್ ಆಟಗಾರ ಎಂದು ಪರಿಗಣಿಸಲಾಗುತ್ತದೆ.

ಹೊಸ ರಿಟೈನ್ ನಿಯಮದ ಪ್ರಕಾರ ಪ್ರತಿ ಐಪಿಎಲ್​ ತಂಡಕ್ಕೆ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿದೆ. ರಿಟೈನ್​ ಮೂಲಕ ಫ್ರಾಂಚೈಸಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಆಟಗಾರರು ಮುಂದಿನ ವರ್ಷಗಳ ಕಾಲ ಆಡಲಿದ್ದಾರೆ. ಇದರ ಮಧ್ಯೆ ಆರ್​​ಸಿಬಿ ತಂಡದಿಂದ ಬಿಗ್​ ಅಪ್ಡೇಟ್​ ಹೊರಬಿದ್ದಿದೆ.

ಆರ್​​​ಸಿಬಿಯಿಂದ ಸ್ಟಾರ್​ ಆಟಗಾರನ ಆಫರ್​ ರಿಜೆಕ್ಟ್​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​. ಇವರಿಗೆ 40 ವರ್ಷ ಆಗಿದ್ದು, ಇನ್ನೂ ಮೂರು ಸೀಸನ್​ ಆಡೋದು ಡೌಟ್​ ಆಗಿದೆ. ಹಾಗಾಗಿ ಆರ್​​ಸಿಬಿ ಹೊಸ ಕ್ಯಾಪ್ಟನ್​ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹೊತ್ತಲ್ಲೇ ರಿಷಬ್​ ಪಂತ್ ತಮ್ಮ ಮ್ಯಾನೇಜರ್​ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಸಂಪರ್ಕಿಸಿ ತಂಡಕ್ಕೆ ಸೇರಲು ಬಯಸಿದ್ದರು ಎನ್ನಲಾಗಿದೆ. ಆದರೆ ಆರ್​ಸಿಬಿ ನಿರಾಕರಣೆ ಮಾಡಿದೆ. ಆರ್​ಸಿಬಿಗೆ ಪಂತ್ ಬರುವುದು ವಿರಾಟ್​ಗೆ ಇಷ್ಟವಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ವದಂತಿಯನ್ನು ಪಂತ್​ ತಳ್ಳಿ ಹಾಕಿದ್ದಾರೆ.

ಈ ಬಗ್ಗೆ ಗರಂ ಆಗಿ ಪ್ರತಿಕ್ರಿಯೆ ನೀಡಿರೋ ಡೆಲ್ಲಿ ಕ್ಯಾಪ್ಟನ್​ ಪಂತ್, ಸೋಶಿಯಲ್ ಮೀಡಿಯಾದಲ್ಲಿ ಯಾಕೆ ಫೇಕ್ ನ್ಯೂಸ್ ಶೇರ್ ಮಾಡುತ್ತೀರಾ? ಫೇಕ್ ನ್ಯೂಸ್​ನಿಂದ ಬೇರೆ ವಾತಾವರಣ ಸೃಷ್ಟಿ ಮಾಡಬೇಡಿ. ಇದೇ ಫಸ್ಟ್, ಇದೇ ಲಾಸ್ಟ್. ಈ ರೀತಿ ಮತ್ತೊಮ್ಮೆ ಫೇಕ್ ನ್ಯೂಸ್ ಹರಿಬಿಡಬಾರದು ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಗಾ ಆಕ್ಷನ್​ಗೆ ಮುನ್ನ ಸ್ಟಾರ್​ ಆಟಗಾರನ ಆಫರ್​ ಬೇಡ ಎಂದ ಆರ್​​​ಸಿಬಿ; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/03/Faf_Kohli_RCB.jpg

Load More