newsfirstkannada.com

ಕೊಹ್ಲಿ, ರಜತ್​ ಪಾಟಿದಾರ್​ ಭರ್ಜರಿ ಬ್ಯಾಟಿಂಗ್​​.. ಹೈದರಾಬಾದ್​ಗೆ ಆರ್​​ಸಿಬಿ 207 ರನ್​ ಟಾರ್ಗೆಟ್​

Share :

Published April 25, 2024 at 9:17pm

    ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ 17ನೇ ಸೀಸನ್​​

    ಇಂದು ಆರ್​​ಸಿಬಿ, ಸನ್​ರೈಸರ್ಸ್​​​ ಹೈದರಾಬಾದ್​​ ಮಧ್ಯೆ ರೋಚಕ ಪಂದ್ಯ

    ಹೈದರಾಬಾದ್​​ಗೆ ಬರೋಬ್ಬರಿ 207 ರನ್​ ಟಾರ್ಗೆಟ್​ ಕೊಟ್ಟ ಆರ್​​ಸಿಬಿ

ಸದ್ಯ ರಾಜೀವ್​ ಗಾಂಧಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ಯಾಟ್​ ಕಮಿನ್ಸ್​ ನಾಯಕತ್ವದ ಸನ್​ರೈಸರ್ಸ್​ ಹೈದರಾಬಾದ್​ ಟೀಮ್​​ ಬೌಲಿಂಗ್​ ಮಾಡುತ್ತಿದೆ.

ಇನ್ನು, ಆರ್​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 12 ಬಾಲ್​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 25 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ ಬರೋಬ್ಬರಿ 200ಕ್ಕೂ ಹೆಚ್ಚು ಇತ್ತು. ಆದ್ರೆ, ಟಿ ನಟರಾಜನ್​ ಬೌಲಿಂಗ್​ನಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಫಾಫ್​ ಕ್ಯಾಚ್​​ ಕೊಟ್ಟರು.

ಫಾಫ್​ ಡುಪ್ಲೆಸಿಸ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಹೈದರಾಬಾದ್​​ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 20 ಬಾಲ್​ನಲ್ಲಿ ಬರೋಬ್ಬರಿ 50 ರನ್​ ಸಿಡಿಸಿದ್ರು. ಬರೋಬ್ಬರಿ 5 ಸಿಕ್ಸರ್​​, 2 ಫೋರ್​​ ಮೂಲಕ ಅರ್ಧಶತಕ ಚಚ್ಚಿದ್ರು.

ಆರಂಭದಿಂದಲೂ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. 43 ಬಾಲ್​ನಲ್ಲಿ 51 ಸಿಡಿಸಿದ್ರು. ಬರೋಬ್ಬರಿ 1 ಸಿಕ್ಸರ್​​, 4 ಭರ್ಜರಿ ಫೋರ್​​ ಬಾರಿಸಿದ್ರು.

ಇವರಿಗೆ ಸಾಥ್​ ಕೊಟ್ಟ ಕ್ಯಾಮರಾನ್​ ಗ್ರೀನ್​​ ಕೇವಲ 20 ಬಾಲ್​ನಲ್ಲಿ 5 ಫೋರ್​ ಸಮೇತ 37 ರನ್​ ಚಚ್ಚಿದ್ರು. ಸ್ವಪ್ನಿಲ್​ ಸಿಂಗ್​ 12, ಲೋಮ್ರೋರ್​ 7 ರನ್​ ಗಳಿಸಿದ್ರು. ಆರ್​​ಸಿಬಿ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 206 ರನ್​​ ಗಳಿಸಿದೆ. ಈ ಮೂಲಕ ಹೈದರಾಬಾದ್​ಗೆ 207 ರನ್​ ಟಾರ್ಗೆಟ್​ ಕೊಟ್ಟಿದೆ.

ಇದನ್ನೂ ಓದಿ: 6,6,6,6,6,4,4; ಕೇವಲ 19 ಬಾಲ್​ನಲ್ಲಿ 50 ರನ್​ ಚಚ್ಚಿದ ರಜತ್​ ಪಾಟಿದಾರ್​ ಬ್ಯಾಟಿಂಗ್​ ಹೇಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರಜತ್​ ಪಾಟಿದಾರ್​ ಭರ್ಜರಿ ಬ್ಯಾಟಿಂಗ್​​.. ಹೈದರಾಬಾದ್​ಗೆ ಆರ್​​ಸಿಬಿ 207 ರನ್​ ಟಾರ್ಗೆಟ್​

https://newsfirstlive.com/wp-content/uploads/2024/04/Kohli_Rajat.jpg

Load More