/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಎಲ್ಲಾ ಐಪಿಎಲ್ ತಂಡಗಳು ಬಿಸಿಸಿಐಗೆ ರಿಟೆನ್ಷನ್ ಲೀಸ್ಟ್ ನೀಡಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಾಗಿ ಆರ್ಸಿಬಿ ಸೇರಿದಂತೆ ಎಲ್ಲಾ ತಂಡಗಳ ಮಾಲೀಕರು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ. ಇದರ ಮಧ್ಯೆ ಗುಜರಾತ್ ಟೈಟನ್ಸ್ ತಂಡದಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
ಗುಜರಾತ್ ಟೈಟನ್ಸ್ ತಂಡವು ಕ್ಯಾಪ್ಟನ್ ಶುಭ್ಮನ್ ಗಿಲ್ ಸೇರಿದಂತೆ ಇಬ್ಬರು ಸ್ಟಾರ್ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಮುಂದಾಗಿದೆ. ಅಚ್ಚರಿ ಎಂದರೆ ಗುಜರಾತ್ ಟೈಟನ್ಸ್ ತಂಡದ ರೀಟೈನ್ ಲಿಸ್ಟ್ನಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೆಸರು ಇಲ್ಲದಿರುವುದು. ಹಾಗಾಗಿ ಶಮಿ ಐಪಿಎಲ್ ಮೆಗಾ ಆಕ್ಷನ್ಗೆ ಬರೋದು ಪಕ್ಕಾ ಆಗಿದೆ.
ರೀಟೈನ್ ಲಿಸ್ಟ್ನಲ್ಲಿ ಯಾರಿಗೆ ಮಣೆ?
ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಗುಜರಾತ್ ತಂಡದ ಮೊದಲ ಆಯ್ಕೆ ಕ್ಯಾಪ್ಟನ್ ಶುಭ್ಮನ್ ಗಿಲ್. ಇವರ 2ನೇ ಆಯ್ಕೆ ರಶೀದ್ ಖಾನ್ ಮತ್ತು 3ನೇ ಆದ್ಯತೆ ಯುವ ಬ್ಯಾಟರ್ ಸಾಯಿ ಸುದರ್ಶನ್ ಎಂದು ತಿಳಿದು ಬಂದಿದೆ. ಈ ಲಿಸ್ಟ್ನಲ್ಲಿ ಶಮಿ ಹೆಸರು ಇಲ್ಲ ಎನ್ನುವುದು ಖಾತ್ರಿಯಾಗಿದೆ.
ಶಮಿ ಮೇಲೆ ಆರ್ಸಿಬಿ ಕಣ್ಣು
ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಬೌಲರ್ಗಳ ಮೇಲೆ ಕಣ್ಣಿಟ್ಟಿದೆ. ಶಮಿ ಹರಾಜಿಗೆ ಬಂದರೆ ಆರ್ಸಿಬಿ ಬಿಡ್ ಮಾಡೋದು ಪಕ್ಕಾ. ಇದಕ್ಕೆ ಕಾರಣ ಆರ್ಸಿಬಿ ಟಾರ್ಗೆಟ್ ಲಿಸ್ಟ್ನಲ್ಲಿ ಶಮಿ ಹೆಸರಿದೆ ಎನ್ನುವ ಮಾಹಿತಿ ಇದೆ. ಶಮಿ ಆರ್ಸಿಬಿಗೆ ಬಂದರೆ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ದೊಡ್ಡ ಸ್ಟ್ರೆಂಥ್ ಆಗಲಿದ್ದಾರೆ.
ಕಮ್ಬ್ಯಾಕ್ ಮಾಡಲು ಶಮಿ ಸರ್ಕಸ್
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಶಮಿ. ಇವರು ಇತ್ತೀಚೆಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು, ಸದ್ಯದಲ್ಲೇ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸರ್ಕಸ್ ಮಾಡುತ್ತಿದ್ದಾರೆ. ಶಮಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೊನೆ ಬಾರಿಗೆ ಟೀಮ್ ಇಂಡಿಯಾ ಪರ ಆಡಿದ್ರು. ಇವರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲೂ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಫ್ರಾಂಚೈಸಿ ಇವರನ್ನು ಕೈ ಬಿಡುವ ಸಾಧ್ಯತೆ ಇದೆ.
ಶಮಿ ಐಪಿಎಲ್ ಸಾಧನೆ
ಕಳೆದ 11 ವರ್ಷಗಳ ಹಿಂದೆ ಶಮಿ ಐಪಿಎಲ್ಗೆ ಡೆಬ್ಯೂ ಮಾಡಿದ್ರು. 2013ರಲ್ಲಿ ಪಾದಾರ್ಪಣೆ ಮಾಡಿರೋ ಇವರು ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 110 ಪಂದ್ಯಗಳಲ್ಲಿ 127 ವಿಕೆಟ್ ಪಡೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ