/newsfirstlive-kannada/media/post_attachments/wp-content/uploads/2024/04/Kohli_Andy-Flower.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೇಗಾದ್ರೂ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೆಗಾ ಹರಾಜಿನಲ್ಲಿ ಹಣದ ಹೊಳೆಯನ್ನೇ ಹರಿಸಿದೆ. ಬರೋಬ್ಬರಿ 19 ಮಂದಿಯನ್ನು ಖರೀದಿಸಿ 22 ಆಟಗಾರರ ಬಲಿಷ್ಠ ತಂಡವನ್ನು ಆರ್‌ಸಿಬಿ ಕಟ್ಟಿದೆ. ಅದರಲ್ಲೂ ಆರ್‌ಸಿಬಿ ಬಿಡ್ ಮಾಡಿದ ದುಬಾರಿ ಆಟಗಾರರು ಯಾರು ಎಂಬ ಲಿಸ್ಟ್ ಹೀಗಿದೆ.
ಜೋಶ್ ಹೇಜಲ್ವುಡ್
ಆಸ್ಟ್ರೇಲಿಯಾ ವೇಗಿ ಜೋಶ್ ಹೇಜಲ್ವುಡ್ ಮತ್ತೆ ಆರ್ಸಿಬಿಗೆ ವಾಪಾಸ್ಸಾಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಜೊತೆಗೆ ಬಿಡ್ಡಿಂಗ್ ವಾರ್ ನಡೆಸಿದ ಆರ್‌ಸಿಬಿ 12.50 ಕೋಟಿ ನೀಡಿ ಖರೀದಿ ಮಾಡಿತು. T20 ಕ್ರಿಕೆಟ್ನಲ್ಲಿ ಡಿಸೆಂಟ್ ರೆಕಾರ್ಡ್ ಹೊಂದಿರೋ ಅನುಭವಿ ವೇಗಿ ಜೋಶ್ ಹೇಜಲ್ವುಡ್ಯ ಖರೀದಿ ಆರ್‌ಸಿಬಿ ಬಲ ಹೆಚ್ಚಿಸಿದೆ ಅನ್ನೋದು ಸುಳ್ಳಲ್ಲ.
ಫಿಲ್ ಸಾಲ್ಟ್
ಕಳೆದ ಐಪಿಎಲ್ನಲ್ಲಿ ಕೆಕೆಆರ್ ಪರ ಧೂಳೆಬ್ಬಿಸಿದ್ದ ಫಿಲ್ ಸಾಲ್ಟ್ನ ಆರ್‌ಸಿಬಿ, ಪಟ್ಟು ಹಿಡಿದು ಖರೀದಿಸಿತು. ಕೆಕೆಆರ್ ಜೊತೆಗೆ ಜಿದ್ದಿಗೆ ಬಿದ್ದು ಫೈಟ್ ನಡೆಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 11.50 ಕೋಟಿ ಬೆಲೆಗೆ ಸ್ಪೋಟಕ ಬ್ಯಾಟ್ಸ್ಮನ್ ವಿಕೆಟ್ ಕೀಪರ್ ಖರೀದಿಸುವಲ್ಲಿ ಯಶಸ್ವಿಯಾಯ್ತು.
ಜಿತೇಶ್ ಶರ್ಮಾ
ಆರ್‌ಸಿಬಿ ಖರೀದಿಸಿದ್ರಲ್ಲೇ ದುಬಾರಿ ಅನಿಸಿದ ಪಿಕ್ ಇದು. ಕಳೆದ ಸೀಸನ್ನಲ್ಲಿ ಪಂಜಾಬ್ ಪರ ಡಿಸೆಂಟ್ ಪರ್ಫಾಮೆನ್ಸ್ ನೀಡಿದ್ದ ಯಂಗ್ ಸ್ಟರ್ ಖರೀದಿಗೆ ಚೆನ್ನೈ, ಲಕ್ನೋ ತಂಡಗಳು ಪೈಪೋಟಿಗೆ ಬಿದ್ದುದ್ವು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಬಿಡ್ಡಿಂಗ್ ವಾರ್ಗೆ ಬಂದು ಹೋಯ್ತು. ಅಂತಿಮವಾಗಿ ಕಹಾನಿ ಮೆ ಟ್ವಿಸ್ಟ್ ಎಂಬಂತೆ ಪಂಜಾಬ್ ಆರ್ಟಿಎಮ್ ದಾಳ ಉರುಳಿಸಿತು. ಅಂತಿಮವಾಗಿ 11 ಕೋಟಿ ಫೈನಲ್ ಬಿಡ್ ಮಾಡಿ ಜಿತೇಶ್ ಶರ್ಮಾನ ಆರ್‌ಸಿಬಿ ಖರೀದಿಸಿತು.
ಭುವನೇಶ್ವರ್ ಕುಮಾರ್
ಸ್ವಿಂಗ್ ಬೌಲರ್ ಭಾರತದ ಭುವನೇಶ್ವರ್ ಕುಮಾರ್ ಅವರಿಗೆ ಆರ್‌ಸಿಬಿ ಹಣ ಹೂಡಿದೆ. ಇವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಹಲವು ವರ್ಷ ಆಡಿದ್ರು. ಅಲ್ಲದೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ. ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಒತ್ತಡವನ್ನು ಮೆಟ್ಟಿನಿಂತು ಬೌಲಿಂಗ್ ನಡೆಸುವುದು ಇವರ ಸ್ಟ್ರೆಂತ್. ಇವರಿಗೆ 10.75 ಕೋಟಿ ನೀಡಿ ಖರೀದಿ ಮಾಡಿದೆ.
ಲಿಯಾಮ್ ಲಿವಿಂಗ್‌ಸ್ಟೋನ್
ಇಂಗ್ಲೆಂಡ್ನ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ಖರೀದಿಸಿದ ಆಟಗಾರರ ಪೈಕಿ ಇರೋದ್ರಲ್ಲಿ ಬೆಟರ್.! ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಲಿವಿಂಗ್ಸ್ಟೋನ್ನ 8.75 ಕೋಟಿ ನೀಡಿ ಆರ್‌ಸಿಬಿ ಖರೀದಿಸಿತು. ಬಿಗ್ ಹಿಟ್ಟರ್ ಲಿವಿಂಗ್‌ಸ್ಟೋನ್ ಚಿನ್ನಸ್ವಾಮಿಯಂತ ಚಿಕ್ಕ ಮೈದಾನದಲ್ಲಿ ತಂಡಕ್ಕೆ ನೆರವಾಗಬಲ್ಲರು.
ದುಬಾರಿ ಆಟಗಾರರು
ಜೋಶ್ ಹೇಜಲ್ವುಡ್ - 12.50 ಕೋಟಿ
ಫಿಲ್ ಸಾಲ್ಟ್ - 11.50 ಕೋಟಿ ರೂ.
ಜಿತೇಶ್ ಶರ್ಮಾ - 11.00 ಕೋಟಿ ರೂ.
ಭುವನೇಶ್ವರ್ ಕುಮಾರ್ - 10.75 ಕೋಟಿ ರೂ.
ಲಿಯಾಮ್ ಲಿವಿಂಗ್‌ಸ್ಟೋನ್ - 8.75 ಕೋಟಿ ರೂ.
ಇದನ್ನೂ ಓದಿ:ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನೇ ಖರೀದಿಸಿದ ಬೆಂಗಳೂರು; ಆರ್‌ಸಿಬಿ ತಂಡದ ಫೈನಲ್ ಲಿಸ್ಟ್ ಹೀಗಿದೆ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ