/newsfirstlive-kannada/media/post_attachments/wp-content/uploads/2025/06/VIRAT-KOHLI-1.jpg)
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಬೃಹತ್ ಮೊತ್ತ ಕಲೆ ಹಾಕುವಲ್ಲಿ ವಿಫಲವಾಗಿದೆ. ಎದುರಾಳಿ ಪಂಜಾಬ್ ಕಿಂಗ್ಸ್ಗೆ, 191 ರನ್ಗಳ ಸವಾಲಿನ ಗುರಿ ನೀಡಿದೆ. ನಿಗದಿತ 20 ಓವರ್ನಲ್ಲಿ ಆರ್ಸಿಬಿ 9 ವಿಕೆಟ್ ಕಳೆದುಕೊಂಡು 190 ರನ್ಗಳಿಸಿದೆ.
ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ಗೆ ಬಂದಿತ್ತು. ಆರಂಭದಲ್ಲೇ ಕೈಲ್ ಜೇಮಿಸನ್ ಅವರು ಆರ್ಸಿಬಿಗೆ ಆಘಾತ ನೀಡಿದರು. ಆರ್ಸಿಬಿ 18 ರನ್ಗಳಿಸಿ ಆಡ್ತಿದ್ದಾಗ 1.4ನೇ ಓವರ್ನಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಸಾಲ್ಟ್ 9 ಬಾಲ್ನಲ್ಲಿ 16 ರನ್ಗಳಿಸಿ ಕ್ರೀಸ್ನಿಂದ ನಿರ್ಗಮಿಸಿದರು.
ಇದನ್ನೂ ಓದಿ: ಫೈನಲ್ನಲ್ಲಿ ಕೈಕೊಟ್ಟ ಇಬ್ಬರು ಸ್ಟಾರ್ ಬ್ಯಾಟ್ಸಮನ್.. ಕೊಹ್ಲಿಯೇ ಆರ್ಸಿಬಿಗೆ ಆಧಾರ..!
ನಂತರ ಬಂದ ಮಯಾಂಕ್ ಅಗರ್ವಾಲ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಸ್ಫೋಟಕ ಬ್ಯಾಟಿಂಗ್ ಸುಳಿವು ನೀಡಿದ ಅವರನ್ನು ಚಹಾಲ್ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 18 ಬಾಲ್ನಲ್ಲಿ 24 ರನ್ಗಳಿಸಿ ಮಯಾಂಕ್ ಔಟ್ ಆದರು. ಕ್ಯಾಪ್ಟನ್ ರಜತ್ ಪಾಟೀದಾರ್, ಕೂಡ ಬೃಹತ್ ರನ್ ಕಲೆ ಹಾಕುವಲ್ಲಿ ವಿಫಲರಾದರು.
ಕೊಹ್ಲಿ ಜವಾಬ್ದಾರಿಯುತ ಆಟ..
16 ಬಾಲ್ನಲ್ಲಿ 26 ರನ್ಗಳಿಸಿ ಹೊರನಡೆದರು. ವಿಕೆಟ್ ಮೇಲೆ ವಿಕೆಟ್ ಬೀಳುತ್ತಿದ್ದರೂ ವಿರಾಟ್ ಕೊಹ್ಲಿ ಕ್ರೀಸ್ ಕಚ್ಚಿ ನಿಂತಿದ್ದರು. 35 ಬಾಲ್ ಎದುರಿಸಿದ ವಿರಾಟ್ 43 ರನ್ಗಳಿಸಿ ಒಮರ್ ಜಾಯ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಲಿಯಾಮ್ ಲಿವಿಂಗ್ಸ್ಟೋನ್ 2 ಸಿಕ್ಸರ್ನೊಂದಿಗೆ 25 ರನ್ಗಳ ಕಾಣಿಕೆ ನೀಡಿದರು. ಉಪನಾಯಕ 240 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬಿಸಿ 10 ಬಾಲ್ನಲ್ಲಿ 24 ರನ್ಗಳ ಕಾಣಿಕೆ ನೀಡಿದರು. ಶೆಫಾರ್ಡ್ 17 ರನ್ಗಳಿಸಿ ಔಟ್ ಆದರೆ, ಕೃನಾಲ್ ಪಾಂಡ್ಯ 4 ರನ್ಗಳಿಸಿ ಔಟ್ ಆದರು.
ಪಂಜಾಬ್ ಕಿಂಗ್ಸ್ ಪರ.. ಅರ್ಷದೀಪ್ ಸಿಂಗ್ ಮೂರು, ಕೈಲ್ ಜೆಮಿಸನ್ 3, ಓಮರ್ಜಾಯ್ 1, ಚಹಾಲ್ 1, ವೈಶಾಕ್ ವಿಜಯಕುಮಾರ್ 1 ವಿಕೆಟ್ ಪಡೆದುಕೊಂಡರು. ಪಂಜಾಬ್ ಕಿಂಗ್ಸ್ ಗೆಲ್ಲಲು 20 ಓವರ್ನಲ್ಲಿ 191 ರನ್ಗಳಿಸುವ ಅಗತ್ಯ ಇದೆ.
ಇದನ್ನೂ ಓದಿ: ಆರ್ಬಿಐನಿಂದ ನಾಳೆ ಮಹತ್ವದ ನಿರ್ಧಾರ.. ದೇಶದ ಜನರಿಗೆ ಗುಡ್ನ್ಯೂಸ್ ನಿರೀಕ್ಷೆ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ