/newsfirstlive-kannada/media/post_attachments/wp-content/uploads/2025/04/KOHLI-IYER.jpg)
ತವರು ಚಿನ್ನಸ್ವಾಮಿಯಲ್ಲಿ ಪಂಜಾಬ್ ಎದುರು ಮುಖಭಂಗ ಅನುಭವಿಸಿದ್ದ ಆರ್ಸಿಬಿ ನಿನ್ನೆ ಅವರದ್ದೇ ಹೋಮ್ಗ್ರೌಂಡ್ನಲ್ಲಿ ಪವರ್ಫುಲ್ ಪಂಚ್ ಕೊಟ್ಟಿದೆ. ಪಕ್ಕಾ ಪ್ಲಾನ್ ಮಾಡಿಕೊಂಡು ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್, ಪಂಜಾಬ್ ಕಿಂಗ್ಸ್ನ ಉಡಾಯಿಸಿದೆ.
ಓಪನರ್ಸ್ಗೆ ಪಂಚ್ ಕೊಟ್ಟ ಪಾಂಡ್ಯ
ಅಬ್ಬರದ ಆಟದೊಂದಿಗೆ ಬಿಗ್ಥ್ರೆಟ್ ಆಗೋ ಸೂಚನೆ ನೀಡಿದ್ದ ಪಂಜಾಬ್ ಓಪನರ್ಸ್ಗೆ ಕೃನಾಲ್ ಪಾಂಡ್ಯ ಪಂಚ್ ನೀಡಿದ್ರು. 5ನೇ ಓವರ್ನಲ್ಲಿ ಪ್ರಿಯಾಂಶ್ ವಿಕೆಟ್ ಉರುಳಿಸಿದ ಕೃನಾಲ್, 7ನೇ ಓವರ್ನಲ್ಲಿ ಪ್ರಭ್ ಸಿಮ್ರನ್ ಆಟಕ್ಕೆ ಫುಲ್ ಸ್ಪಾಫ್ ಇಟ್ರು.
ಇದನ್ನೂ ಓದಿ: ‘I finished monster’ ಕೊಲೆ ಮಾಡಿ ಆ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿದ್ರಂತೆ ಓಂ ಪ್ರಕಾಶ್ ಪತ್ನಿ
ಸುಯಶ್ ಖೆಡ್ಡಾಗೆ ಇಂಗ್ಲಿಸ್, ಸ್ಟೋಯ್ನಿಸ್
2 ಬೌಂಡರಿ, 1 ಸಿಕ್ಸರ್ ಸಿಡಿಸಿದ ಇಂಗ್ಲಿಸ್ ಆರ್ಸಿಬಿ ಬೌಲರ್ಗಳಿಗೆ ಫೈಟ್ ನೀಡಿದ್ರು. ಅಂತಿಮವಾಗಿ ಸುಯಶ್ ಶರ್ಮಾ ಮುಂದೆ ಮಂಡಿಯೂರಿದ್ರು. 17 ಎಸೆತಗಳಲ್ಲಿ 29 ರನ್ಗಳಿಸಿದ ಇಂಗ್ಲಿಸ್ನ ಸುಯಶ್ ಸ್ಪಿನ್ ಖೆಡ್ಡಾಗೆ ಕೆಡವಿದ್ರು. ಅದೇ ಓವರ್ನಲ್ಲಿ ಮಾರ್ಕಸ್ ಸ್ಪೋಯಿನಿಸ್ ಕೂಡ ಸ್ಪಿನ್ ಜಾದೂವಿಗೆ ಬೋಲ್ಡ್ ಆದ್ರು. ಅಂತಿಮ ಹಂತದಲ್ಲಿ ಶಶಾಂಕ್ ಸಿಂಗ್ ಅಜೇಯ 33 ರನ್ಗಳಿಸಿದ್ರೆ, ಯಾನ್ಸೆನ್ ಅಜೇಯ 25 ರನ್ಗಳಿಸಿದ್ರು. 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಪಂಜಾಬ್ ಕಿಂಗ್ಸ್ 157 ರನ್ಗಳಿಸಿತು.
ಕೊಹ್ಲಿ - ಪಡಿಕ್ಕಲ್ ಆರ್ಭಟ
158 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿಗೆ ಒಳ್ಳೆ ಓಪನಿಂಗ್ ಸಿಗಲಿಲ್ಲ. ಫಿಲ್ ಸಾಲ್ಟ್ ಜಸ್ಟ್ 1 ರನ್ಗಳಿಸುವಷ್ಟರಲ್ಲಿ ಸುಸ್ತಾದ್ರು. ಮೊದಲ ಓವರ್ನಲ್ಲೇ ಸಾಲ್ಟ್ ಔಟ್ ಆಗಿದ್ದು ಮ್ಯಾಟರೇ ಆಗಲಿಲ್ಲ. 2ನೇ ವಿಕೆಟ್ಗೆ ಜೊತೆಯಾದ ಕೊಹ್ಲಿ - ಪಡಿಕ್ಕಲ್ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. 4 ಸಿಕ್ಸರ್, 5 ಬೌಂಡರಿ ಚಚ್ಚಿದ ಪಡಿಕ್ಕಲ್ ಪರಾಕ್ರಮದ ಮುಂದೆ ಪಂಜಾಬ್ ಬೌಲರ್ಸ್ ಪರದಾಡಿದ್ರು. 30 ಎಸೆತಕ್ಕೆ ಪಡಿಕ್ಕಲ್ ಹಾಫ್ ಸೆಂಚುರಿ ಸಿಡಿಸಿದ್ರು.
ಇದನ್ನೂ ಓದಿ: ‘ಗೆಲುವಿನ ಕ್ರೆಡಿಟ್ ಯಾರಿಗೆ ಅಂದರೆ..’ ಗೆದ್ದ ಖುಷಿಯಲ್ಲಿ RCB ಕ್ಯಾಪ್ಟನ್ ಹೊಗಳಿದ್ದು ಯಾರನ್ನ..?
ಚೇಸ್ ಮಾಸ್ಟರ್ ‘ಮಾಸ್ಟರ್ ಕ್ಲಾಸ್’
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತೊಂದು ಕ್ಲಾಸಿಕ್ ಇನ್ನಿಂಗ್ಸ್ ಕಟ್ಟಿದ್ರು. ವಿರಾಟ್ 59ನೇ ಐಪಿಎಲ್ ಅರ್ಧಶತಕ ಪೂರೈಸಿದ್ರು. ಐಪಿಎಲ್ನಲ್ಲಿ ಅತಿ ಹೆಚ್ಚು ಬಾರಿ 50+ ರನ್ಗಳಿಸಿದ ಬ್ಯಾಟರ್ ಎಂಬ ಹೆಚ್ಚಳಿಕೆಗೆ ಪಾತ್ರರಾದ್ರು. 67 ಬಾರಿ ಕೊಹ್ಲಿ 50 ರನ್ ಗಡಿ ದಾಟಿದ್ದಾರೆ. ಅಬ್ಬರಿಸಿ ಬೊಬ್ಬಿರಿದು 35 ಎಸೆತಗಳಲ್ಲಿ 61 ರನ್ಗಳಿಸಿದ್ದ ದೇವದತ್ ಪಡಿಕ್ಕಲ್ ಕೊನೆಗೆ ಹರ್ಪಿತ್ ಬ್ರಾರ್ಗೆ ವಿಕೆಟ್ ಒಪ್ಪಿಸಿದ್ರು.
7 ವಿಕೆಟ್ಗಳ ಜಯ..
54 ಎಸೆತಗಳನ್ನ ಎದುರಿಸಿದ ಕೊಹ್ಲಿ 1 ಸಿಕ್ಸರ್, 7 ಆಕರ್ಷಕ ಬೌಂಡರಿ ಸಹಿತ ಅಜೇಯ 73 ರನ್ ಸಿಡಿಸಿದ್ರು. ಅಂತಿಮವಾಗಿ 18ನೇ ಓವರ್ನ 5ನೇ ಎಸೆತವನ್ನ ಸಿಕ್ಸರ್ ಸಿಡಿಸಿದ ಜಿತೇಶ್ ಶರ್ಮಾ ಆರ್ಸಿಬಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. 7 ವಿಕೆಟ್ಗಳ ಗೆಲುವು ಸಾಧಿಸಿದ ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 3ನೇ ಸ್ಥಾನಕ್ಕೆ ಜಂಪ್ ಮಾಡಿದ್ರೆ, ಪಂಜಾಬ್ 4ನೇ ಸ್ಥಾನಕ್ಕೆ ಕುಸಿಯಿತು. ಗೆಲುವಿನ ಜೊತೆಗೆ ಕಿಂಗ್ ಕೊಹ್ಲಿ ಕ್ಲಾಸಿಕ್ ಆಟ ಕಣ್ತುಂಬಿಕೊಂಡ ಫ್ಯಾನ್ಸ್ ಫುಲ್ ಖುಷ್ ಆದ್ರು.
ಇದನ್ನೂ ಓದಿ: 6, 6, 6, 6! ಆರ್ಸಿಬಿ ಗೆಲ್ಲಿಸಿಕೊಟ್ಟ ಕನ್ನಡಿಗ ಪಡಿಕ್ಕಲ್ ಏನಂದ್ರು? ಯಾರ ಸಹಾಯ ನೆನಪಿಗೆ ಬಂತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ