/newsfirstlive-kannada/media/post_attachments/wp-content/uploads/2025/04/Salt_KOHLI.jpg)
ತವರಿನ ಅಂಗಳದಲ್ಲಿ ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ್ ರಾಯಲ್ಸ್​ ತಂಡವನ್ನು ರಾಯಲ್ ಚಾಲೆಂಜರ್ಸ್​ ಬೆಂಗಳೂರು 9 ವಿಕೆಟ್​ಗಳಿಂದ ಬಗ್ಗು ಬಡಿದಿದೆ. ಫಿಲಿಪ್ ಸಾಲ್ಟ್ ಹಾಗೂ ಕಿಂಗ್ ಕೊಹ್ಲಿ ಈ ಇಬ್ಬರ ಭರ್ಜರಿ ಹಾಫ್​ ಸೆಂಚುರಿಯಿಂದ ಆರ್​ಸಿಬಿ ಗೆಲುವು ಪಡೆಯಿತು.
/newsfirstlive-kannada/media/post_attachments/wp-content/uploads/2025/04/Yashasvi_Jaiswal-1.jpg)
ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿ, ರಾಜಸ್ಥಾನ್​ ರಾಯಲ್ಸ್​ ಆಟಗಾರರನ್ನು ಬ್ಯಾಟಿಂಗ್​ ಮಾಡಲು ಆಹ್ವಾನ ಮಾಡಿದರು. ಆರ್​ಆರ್​ ಪರ ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಕ್ಯಾಪ್ಟನ್​ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಸಂಜು 15 ರನ್​ಗೆ ವಿಕೆಟ್​ ಒಪ್ಪಿಸಿದರು.
ಆದರೆ ಓಪನರ್ ಯಶಸ್ವಿ ಜೈಸ್ವಾಲ್ ಅಮೋಘವಾದ ಅರ್ಧಶತಕ ಸಿಡಿಸಿದರು. ಕೇವಲ 35 ಎಸೆತದಲ್ಲಿ 1 ಸಿಕ್ಸರ್​ ಹಾಗೂ 7 ಭರ್ಜರಿ ಬೌಂಡರಿ ಇಂದ ಹಾಫ್​ಸೆಂಚುರಿ ಗಳಿಸಿದರು. ಒಟ್ಟು 47 ಎಸೆತಗಳಲ್ಲಿ ಜೈಸ್ವಾಲ್​ 10 ಫೋರ್, 2 ಸಿಕ್ಸರ್​ನಿಂದ 75 ರನ್​ಗೆ ಎಲ್​​​ಬಿಗೆ ಬಲಿಯಾದರು. ಹೆಟ್ಮರ್​ 9, ಧೃವ್ ಜುರೆಲ್ 35 ರನ್​ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ಗೆ 174 ರನ್​ಗಳ ಸಾಧಾರಣ ಟಾರ್ಗೆಟ್​ ಅನ್ನು ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ಆರ್​ಸಿಬಿ ಆರಂಭದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿತು. ಓಪನರ್ ಆಗಿ ಕ್ರೀಸ್​ಗೆ ಬಂದ ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಾಯಲ್​ ಬೌಲರ್​ಗಳಿಗೆ ಬೆಂಡೆತ್ತಿದರು. ಹೀಗಾಗಿಯೇ ಸಾಲ್ಟ್​ ಕೇವಲ 28 ಎಸೆತಗಳಲ್ಲಿ 50 ರನ್​ ಗಳಿಸಿದರು. ಬ್ಯಾಟಿಂಗ್ ಮುಂದುವರೆಸಿದ್ದ ಸಾಲ್ಟ್, ಒಟ್ಟು 5 ಬೌಂಡರಿ ಹಾಗೂ 6 ಸಿಕ್ಸರ್​ಗಳಿಂದ ಕೇವಲ 33 ಎಸೆತದಲ್ಲಿ 65 ರನ್​ಗೆ ಔಟ್​ ಆದರು.
ಇದನ್ನೂ ಓದಿ: Video- ಬಿಗ್ ಕ್ಯಾಚ್ ಮಿಸ್ ಮಾಡಿದ RCB ವಿಸ್ಫೋಟಕ ಬ್ಯಾಟರ್​ ಫಿಲಿಪ್ ಸಾಲ್ಟ್​.. ಹೇಗೆ?
/newsfirstlive-kannada/media/post_attachments/wp-content/uploads/2025/04/KOHLI_RCB-1.jpg)
ಇವರ ನಂತರ ಕ್ರೀಸ್​ಗೆ ಆಗಮಿಸಿದ ದೇವದತ್​ ಪಡಿಕ್ಕಲ್, ವಿರಾಟ್ ಕೊಹ್ಲಿ ಒಳ್ಳೆಯ ಸಾಥ್ ಕೊಟ್ಟರು. ಇದರಿಂದ ಕಿಂಗ್ ಕೊಹ್ಲಿ 42 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್​ನಿಂದ ಅರ್ಧಶತಕ ಪೂರೈಸಿದರು. ಇದು ಈ ಟೂರ್ನಿಯಲ್ಲಿ ಕೊಹ್ಲಿಯ 3ನೇ ಅರ್ಧಶತಕವಾದರೆ, ಅವರ ಐಪಿಎಲ್ ವೃತ್ತಿ ಜೀವನದ 59ನೇ ಹಾಫ್​ಸೆಂಚುರಿ ಆಗಿದೆ. ಕೊನೆಗೆ ವಿರಾಟ್ ಕೊಹ್ಲಿ ಅಜೇಯ 62 ರನ್​ ಹಾಗೂ ದೇವದತ್ ಪಡಿಕ್ಕಲ್ ಅಜೇಯ 40 ರನ್​ಗಳಿಂದ ಆರ್​ಸಿಬಿ, ಆರ್​ಆರ್​ ವಿರುದ್ಧ ಜಯಭೇರಿ ಬಾರಿಸಿತು. 17.3 ಓವರ್​ಗಳಲ್ಲಿ 1 ವಿಕೆಟ್​ಗೆ 175 ರನ್​ ಗಳಿಸಿ ಗೆಲುವು ಪಡೆದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us