/newsfirstlive-kannada/media/post_attachments/wp-content/uploads/2024/08/RCB_TEAM-3.jpg)
ಎಲ್ಲರೂ ಭಾರೀ ಕುತೂಹಲದಿಂದ ಕಾಯುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ರೀಟೆನ್ಷನ್ ಲಿಸ್ಟ್ ಹೊರಬಿದ್ದಿದೆ. ಮೆಗಾ ಹರಾಜಿಗೆ ಮುನ್ನವೇ ಐಪಿಎಲ್ ತಂಡಗಳ ಮಾಲೀಕರು ತಮಗೆ ಅಗತ್ಯ ಇರೋ ಆಟಗಾರರನ್ನು ಉಳಿಸಿಕೊಂಡಿದ್ದಾರೆ. ನಿನ್ನೆಯೇ ಬಿಸಿಸಿಐಗೆ ಎಲ್ಲಾ ಫ್ರಾಂಚೈಸಿಗಳು ರೀಟೈನ್ ಮತ್ತು ರಿಲೀಸ್ ಲಿಸ್ಟ್ ಸಲ್ಲಿಕೆ ಮಾಡಿವೆ.
ಬಿಸಿಸಿಐ ರೀಟೈನ್ ಮಾಡಿಕೊಳ್ಳುವಾಗ ಐಪಿಎಲ್ ತಂಡಗಳಿಗೆ ಕೆಲವು ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿತ್ತು. ಅದರಂತೆ ನಾಲ್ವರು ಕ್ಯಾಪ್ಡ್ ಹಾಗೂ ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್ಸ್ ಉಳಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಒಂದು ತಂಡ ಗರಿಷ್ಠ ಇಬ್ಬರು ವಿದೇಶಿ ಆಟಗಾರರಿಗೆ ಮಣೆ ಹಾಕಬಹುದಿತ್ತು. ಬಿಸಿಸಿಐ ಕೊಟ್ಟ ನಿಯಮಗಳನ್ನು ಪಾಲನೆ ಮಾಡಿರೋ ಐಪಿಎಲ್ ತಂಡಗಳು ಕೊನೆಗೂ ಲಿಸ್ಟ್ ರಿಲೀಸ್ ಮಾಡಿವೆ.
ರೈಟ್ ಟು ಮ್ಯಾಚ್ ಕಾರ್ಡ್ ಆಪ್ಷನ್
ಗರಿಷ್ಠ ಆರು ಆಟಗಾರರ ರೀಟೈನ್ಗೆ ಅವಕಾಶ ಇತ್ತು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ ಮಾಡಬಹುದಾಗಿ ಸಹ ತಿಳಿಸಿತ್ತು. ಯಾವ ಟೀಮ್ ಎಷ್ಟು ಜನರನ್ನು ರೀಟೈನ್ ಮಾಡಿಕೊಂಡಿದೆ ಅನ್ನೋದರ ಮೇಲೆ ಆರ್‌ಟಿಎಂ ಕಾರ್ಡ್ ಸಂಖ್ಯೆ ಇರಲಿದೆ. ಆರ್‌ಸಿಬಿ ಕೇವಲ ಮೂವರು ಆಟಗಾರರಿಗೆ ಮಾತ್ರ ಮಣೆ ಹಾಕಿದ್ದು, ಇನ್ನೂ ಐಪಿಎಲ್ ಮೆಗಾ ಹರಾಜಿನಲ್ಲಿ 3 ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶ ಹೊಂದಿದೆ.
ಯಾವ ತಂಡದ ಬಳಿ ಎಷ್ಟು ಆರ್‌ಟಿಎಂ ಕಾರ್ಡ್?
ಮೆಗಾ ಹರಾಜಿಗೆ ಮುನ್ನ ಐದು ತಂಡಗಳು ಐವರು ಆಟಗಾರರನ್ನು ಉಳಿಸಿಕೊಂಡಿದ್ದು, ಇವರ ಬಳಿ ಒಂದು ಆರ್‌ಟಿಎಂ ಕಾರ್ಡ್ ಇದೆ. ಈ ಐದು ತಂಡಗಳು ಕೇವಲ ಒಂದು ಆರ್‌ಟಿಎಂ ಕಾರ್ಡ್ ಬಳಕೆ ಮಾಡಬಹುದು. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಕ್ನೋ ಸೂಪರ್ ಜೈಂಟ್ಸ್, ಸನ್‌ರೈಸರ್ಸ್ ಹೈದರಾಬಾದ್ ಕೇವಲ ಒಬ್ಬ ಆಟಗಾರನಿಗೆ ಮಾತ್ರ ಆರ್‌ಟಿಎಂ ಕಾರ್ಡ್ ಬಳಸಬಹುದು.
ಆರ್‌ಸಿಬಿ ಮತ್ತು ಪಂಜಾಬ್ ಬಳಿ ಹೆಚ್ಚು ಆರ್‌ಟಿಎಂ
ಪಂಜಾಬ್ ಕೇವಲ ಇಬ್ಬರನ್ನು ರೀಟೈನ್ ಮಾಡಿಕೊಂಡಿದೆ. ಹಾಗಾಗಿ ಈ ತಂಡದ ಬಳಿ ಅತೀ ಹೆಚ್ಚು ಎಂದರೆ 4 ಆರ್‌ಟಿಎಂ ಕಾರ್ಡ್ಗಳು ಇವೆ. ಡೆಲ್ಲಿ ಕ್ಯಾಪಿಟಲ್ಸ್ ಬಳಿ 2, ಆರ್‌ಸಿಬಿ ಬಳಿ 3 ಇದೆ. ಆರ್‌ಸಿಬಿ ಈಗ ಮೂವರು ಆಟಗಾರರಿಗೆ ಆರ್‌ಟಿಎಂ ಕಾರ್ಡ್ ಬಳಸಬಹುದು. ಇದು ಮೆಗಾ ಹರಾಜಿಗೆ ದೊಡ್ಡ ಬ್ರಹ್ಮಾಸ್ತ್ರ ಆಗಿದೆ.
ಇನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಗರಿಷ್ಠ 6 ಆಟಗಾರರನ್ನು ಉಳಿಸಿಕೊಂಡಿವೆ. ಹಾಗಾಗಿ ಈ ತಂಡಗಳು ಬಳಿ ಯಾವುದೇ ಆರ್‌ಟಿಎಂ ಕಾರ್ಡ್ ಇಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೈ ಬಿಟ್ಟ ಬೆನ್ನಲ್ಲೇ KL ರಾಹುಲ್ ವಿರುದ್ಧ ಆಕ್ರೋಶ ಹೊರಹಾಕಿದ LSG ಮಾಲೀಕ; ಏನಂದ್ರು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ