/newsfirstlive-kannada/media/post_attachments/wp-content/uploads/2024/11/Kohli_Dinesh-Karthik.jpg)
ಭಾರೀ ಕುತೂಹಲ ಮೂಡಿಸಿರೋ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಆಕ್ಷನ್ಗೆ ಬಿಸಿಸಿಐ ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದೆ. ಮೆಗಾ ಹರಾಜು ಪ್ರಕ್ರಿಯೆಗೆ ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೇ ನವೆಂಬರ್ 24 ಮತ್ತು 25ನೇ ತಾರೀಕು ಸೌದಿ ಅರೇಬಿಯಾದಲ್ಲಿ ನಡೆಯೋ ಈ ಹರಾಜಿನಲ್ಲಿ ಎಲ್ಲರೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟಲು ಎಲ್ಲಾ ಫ್ರಾಂಚೈಸಿಗಳು ರಣತಂತ್ರ ರೂಪಿಸಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತೆರೆಮರೆಯಲ್ಲಿ ಮೆಗಾ ಹರಾಜಿಗಾಗಿ ಸಿದ್ದತೆ ಮಾಡಿಕೊಂಡಿದೆ. ಹೇಗಾದ್ರೂ ಮಾಡಿ ಕಪ್ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದು ಭಾರೀ ಪ್ಲ್ಯಾನ್ ಹಾಕಿಕೊಂಡಿದೆ. ಇದರ ಭಾಗವಾಗಿ ಹರಾಜಿಗೆ ಮುನ್ನ ಮಹತ್ವದ ಹೆಜ್ಜೆ ಇಟ್ಟಿದೆ.
ಆರ್‌ಸಿಬಿ ಮೆಗಾ ಪ್ಲ್ಯಾನ್?
ಕಳೆದ 18 ಸೀಸನ್ಗಳಲ್ಲೂ ಆರ್‌ಸಿಬಿ ಮಾಡಿದ ಮಹಾ ಎಡವಟ್ಟು ಎಂದರೆ ಉತ್ತಮ ಬೌಲರ್ಸ್ ಮತ್ತು ಆಲ್ರೌಂಡರ್ಗಳನ್ನು ಖರೀದಿ ಮಾಡದೇ ಇರುವುದು. ಇದರ ಪರಿಣಾಮ ಟೂರ್ನಿಯಲ್ಲಿ ಏರಿಳಿತಗಳನ್ನು ಕಂಡಿದೆ. ಆರ್‌ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ರೂ ಬೌಲಿಂಗ್ ವಿಭಾಗ ಯಾವಾಗಲೂ ವೀಕ್ ಇರುತ್ತಿತ್ತು. ಈಗ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲು ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಮತ್ತು ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ದಿನೇಶ್ ಕಾರ್ತಿಕ್ ಮುಂದಾಗಿದ್ದಾರೆ. ಮಾಸ್ಟರ್ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹರಾಜಿಗೆ ಮಹತ್ವದ ಹೆಜ್ಜೆ
ಮೆಗಾ ಹರಾಜಿಗೆ ಮುನ್ನವೇ ಆರ್‌ಸಿಬಿ ದೇಶೀಯ ಯುವ ಆಟಗಾರರನ್ನು ಟ್ರಯಲ್‌ಗೆ ಕರೆದಿತ್ತು. ಈ ಆರ್‌ಸಿಬಿ ಟ್ರಯಲ್ ಪ್ರಕ್ರಿಯೆಯಲ್ಲಿ ಸಾಕಷ್ಟು ಯುವ ಆಟಗಾರರು ಭಾಗವಹಿಸಿದ್ರು. ಇದರ ಹಿಂದಿನ ಮಾಸ್ಟರ್ ಮೈಂಡ್ ಬೇರೆ ಯಾರು ಅಲ್ಲ, ಬದಲಿಗೆ ದಿನೇಶ್ ಕಾರ್ತಿಕ್. ತಂಡಕ್ಕೆ ಬೇಕಾದ ಕೌಲಿಟಿ ಸ್ಟಾರ್ ಯುವ ಆಟಗಾರರನ್ನು ಆಯ್ಕೆ ಮಾಡುವುದು ಇವರ ಉದ್ದೇಶವಾಗಿದೆ. ತಮಿಳುನಾಡು ಪ್ರೀಮಿಯರ್ ಲೀಗ್, ಮಹಾರಾಜ ಕಪ್, ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳನ್ನು ಸೂಕ್ಷ್ಮ ಗಮನಿಸಿರೋ ದಿನೇಶ್ ಕಾರ್ತಿಕ್ಗೆ ಯುವ ಆಟಗಾರರ ಬಗ್ಗೆ ಮಾಹಿತಿ ಇದೆ ಎಂಬುದು ವಿಶೇಷ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ರೀಟೈನ್ ಲಿಸ್ಟ್ ರಿಲೀಸ್ ಮಾಡಿದೆ. ಆರ್‌ಸಿಬಿ ಟೀಮ್ ಮೊದಲು ರೀಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ. 2ನೇ ಆಯ್ಕೆ ರಜತ್ ಪಾಟಿದಾರ್ ಮತ್ತು 3ನೇ ಆಯ್ಕೆಯಾಗಿ ಯಶ್ ದಯಾಳ್ ಅವರನ್ನು ಉಳಿಸಿಕೊಂಡಿದೆ.
ಮುಂದಿನ ಸೀಸನ್ ಗೆಲ್ಲಲೇಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಿದ್ದಿಗೆ ಬಿದ್ದಿದೆ. ಹಾಗಾಗಿ ಬಲಿಷ್ಠ ತಂಡವನ್ನು ಕಟ್ಟಲು ಆರ್‌ಸಿಬಿ ಮುಂದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿರೋ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಇದರ ಮಧ್ಯೆ ಆರ್‌ಸಿಬಿ ಟ್ರಯಲ್ಸ್ನಲ್ಲಿ ಯುವ ಆಟಗಾರ ಕಾಣಿಸಿಕೊಂಡಿದ್ದಾರೆ.
366 ಭಾರತೀಯರು ಆ್ಯಕ್ಷನ್ನಲ್ಲಿ!
ಇನ್ನು, ಬಿಸಿಸಿಐ ಕೂಡ ಹರಾಜಿಗೆ ಬಂದಿರೋ ಆಟಗಾರರ ಹೆಸರು ಶಾರ್ಟ್ ಲಿಸ್ಟ್ ಮಾಡಿ ಐಪಿಎಲ್ ತಂಡಗಳ ಮಾಲೀಕರಿಗೆ ಕಳಿಸಲಿದೆ. ಒಟ್ಟು 1500ಕ್ಕೂ ಹೆಚ್ಚು ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈಗ 1574 ಆಟಗಾರರ ಆರಂಭಿಕ ಪಟ್ಟಿಯನ್ನು 574ಕ್ಕೆ ಇಳಿಸಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪೈಕಿ 366 ಭಾರತೀಯರು ಮತ್ತು 208 ವಿದೇಶಿ ಕ್ರಿಕೆಟಿಗರು ಇದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಕ್ಯಾಂಪ್ನಲ್ಲಿ ದಿಢೀರ್ ಕಾಣಿಸಿಕೊಂಡ ಕೆಕೆಆರ್ ಸ್ಟಾರ್; ಸ್ಫೋಟಕ ಸುಳಿವು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ