newsfirstkannada.com

ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

Share :

Published April 10, 2024 at 9:16am

    ರಾಯಲ್ ಚಾಲೆಂಜರ್ಸ್​ ಮುಂದಿದೆ ಬಿಗ್ ಚಾಲೆಂಜ್..!

    ಹೋಮ್​​ಗ್ರೌಂಡ್​ನಲ್ಲೇ ಆರ್​​ಸಿಬಿಯ ಪರದಾಟ..!

    ತವರಲ್ಲೂ ಪರದಾಟ.. ತವರಿನ ಹೊರಗೂ ಇಲ್ಲ ಗೆಲುವು

ತವರಿನಲ್ಲಿ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಸೋತ ರಾಯಲ್​ ಚಾಲೆಂಜರ್ಸ್, ತವರಿನ ಹೊರಗೂ ಸೋಲಿನ ಸುಳಿಗೆ ಸಿಲುಕಿದೆ. ಜೈಪುರದಲ್ಲಿ ಪರದಾಡಿದ ಫಾಫ್​ ಪಡೆಯ ಮುಂದೆ ಇದೀಗ ಸಾಲು ಸಾಲು ಅಗ್ನಿಪರೀಕ್ಷೆಗಳಿವೆ. ಆ ಸವಾಲನ್ನ ಗೆದ್ದರಷ್ಟೇ ಆರ್​ಸಿಬಿಗೆ ಉಳಿಗಾಲ.

ಸೋಲು.. ಸೋಲು.. ಸೋಲು. ಹೋಮ್​​ಗ್ರೌಂಡ್​ನಲ್ಲೇ ಜಯದ ಭಾವುಟ ಹಾರಿಸುವಲ್ಲಿ ಎಡವಿದ್ದ ರಾಯಲ್ ಚಾಲೆಂಜರ್ಸ್, ಇದೀಗ ತವರಿನ ಹೊರಗೂ ಮುಗ್ಗರಿಸಿದೆ. ಜೈಪುರದಲ್ಲೂ ಜಯ ಆರ್​​ಸಿಬಿಗೆ ದಕ್ಕಿಲ್ಲ. ಹ್ಯಾಟ್ರಿಕ್​ ಸೋಲುಂಡಿರುವ ಆರ್​ಸಿಬಿ ಅಳಿವು ಉಳಿವಿನ ಸ್ಥಿತಿ ತಲುಪಿದೆ. ಪ್ಲೇ ಆಫ್​​ ಕನಸು ಜೀವಂತವಾಗಿರಬೇಕಾದ್ರೆ, ಇದೀಗ ಅವೇ ಮ್ಯಾಚಸ್ ಎಂಬ ಅಗ್ನಿಪರೀಕ್ಷೆಯನ್ನ ಪಾಸ್ ಮಾಡಲೇಬೇಕಾದ ಸಂಕಷ್ಟಕ್ಕೆ ಸಿಲುಕಿದೆ.

ತವರಿನಾಚೆಯ ಅಗ್ನಿಪರೀಕ್ಷೆಯಲ್ಲೂ ಆರ್​ಸಿಬಿಗೆ ಮುಖಭಂಗ..!
ಸದ್ಯ ಟೂರ್ನಿಯಲ್ಲಿ ಆಡಿರೋ 5ರಲ್ಲಿ 4 ಪಂದ್ಯಗಳನ್ನ ಕೈಚೆಲ್ಲಿರುವ ಆರ್​ಸಿಬಿಗೆ, ಮುಂದಿನ 9 ಪಂದ್ಯಗಳೂ ಡು ಆರ್ ಡೈ.. ಪ್ಲೇ ಆಫ್​ ದೃಷ್ಟಿಯಿಂದ ಗೆಲ್ಲಲೇಬೇಕಾದ ಓತ್ತಡಕ್ಕೆ ಸಿಲುಕಿದೆ. ತವರಿನ ಹೊರಗೆ ನಡೆದ ಎರಡು ಪಂದ್ಯಗಳನ್ನ ಕೈಚೆಲ್ಲಿರುವ ತಂಡಕ್ಕೆ ಮುಂದಿನ 5 ಅವೇ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.

ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್​ ವಾರ್​​ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!

ಉಳಿದ 9 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಎದುರಾಳಿ ತಂಡದ ಹೋಮ್​ ಗ್ರೌಂಡ್​ನಲ್ಲೇ ಆರ್​​ಸಿಬಿ ಆಡಲಿದೆ. ಅಲ್ಲಿ ಗೆಲ್ಲೋದು ಸುಲಭದ ಮಾತಲ್ಲ. ಈಗಾಗಲೇ ಚೆನ್ನೈ ಹಾಗೂ ರಾಜಸ್ಥಾನ್ ತವರಿನ ಅಂಗಳದಲ್ಲಿ ಆರ್​ಸಿಬಿ ಮಕಾಡೆ ಮಲಗಿದೆ. ಇನ್ಮುಂದೆ, ಬಲಿಷ್ಠ ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್​ ಹೈದ್ರಾಬಾದ್, ಗುಜರಾತ್ ಟೈಟನ್ಸ್, ಪಂಜಾಬ್ ಕಿಂಗ್ಸ್ ತಂಡಗಳನ್ನ ಎದುರಿಸಲಿದೆ. ತವರಲ್ಲಿ ಸಖತ್ ಸ್ಟ್ರಾಂಗ್ ಆಗಿರುವ ಈ ತಂಡಗಳ ಎದುರು ಗೆಲ್ಲೋದು ಕಷ್ಟದ ವಿಚಾರವೇ.! ಆದ್ರೂ ಪ್ಲೇ ಆಫ್​ ದೃಷ್ಟಿಯಿಂದ ಕನಿಷ್ಠ ನಾಲ್ಕು ಪಂದ್ಯ ಗೆಲ್ಲಬೇಕು. ಇಲ್ಲ ಗಂಟೂಮೂಟೆ ಫಿಕ್ಸ್.!

ಇದನ್ನೂ ಓದಿ:  ಯುಗಾದಿ ಹೊಸ ತೊಡಕು! ಬೆಳಗಿನ ಜಾವ 3 ಗಂಟೆಯಿಂದಲೇ ಕ್ಯೂ, 1 ಕೆಜಿ ಕುರಿ ಮಾಂಸಕ್ಕೆ ಎಷ್ಟು ರೂಪಾಯಿ?

ಚಿನ್ನಸ್ವಾಮಿಯಲ್ಲಿ ಉಳಿದಿರೋದು ಜಸ್ಟ್​ ನಾಲ್ಕೇ ಪಂದ್ಯ
ಈ ಸೀಸನ್​ನಲ್ಲಿ ಇನ್ನು, 4 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲಿ ಆರ್​​ಸಿಬಿ ಆಡಲಿದೆ. ಆದ್ರೆ, ಈ ನಾಲ್ಕು ಪಂದ್ಯಗಳು ಗೆಲ್ಲೋದು ಸುಲಭವಲ್ಲ. ಇದೇ 15ರಂದು ಬಲಿಷ್ಠ ಸನ್​​ ರೈಸರ್ಸ್ ಸವಾಲು ಎದುರಾಗಲಿದೆ. ಇನ್ನುಳಿದಂತೆ ಗುಜರಾತ್ ಟೈಟನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಗಳನ್ನ ಫ್ಲೇ-ಆಫ್ ಅಂಚಿನಲ್ಲಿ ಆಡಲಿದೆ. ಈ ಎದುರಾಳಿ ತಂಡಗಳ ಬ್ಯಾಟಿಂಗ್​ ಲೈನ್​ ಅಪ್​ ಬಲಿಷ್ಟವಾಗಿದ್ರೆ, ನಮ್ಮ ಬೌಲಿಂಗ್​ ತೀವ್ರ ಕಳಪೆಯಾಗಿದೆ.

ಹೋಮ್​ ಅಡ್ವಾಂಟೇಜ್​ ತೆಗೆದುಕೊಂಡು ಅಂಕಪಟ್ಟಿಯಲ್ಲಿ ಏರಿಕೆ ಕಾಣಬೇಕಿದ್ದ ಆರ್​ಸಿಬಿ, ತವರಿನಾಚೆಯೂ ಪರದಾಡಿದೆ. ಹೀಗಾಗಿ ಈ ಅಗ್ನಿಪರೀಕ್ಷೆಯನ್ನ ಹೇಗೆ ಮೆಟ್ಟಿ ನಿಲ್ಲುತ್ತೆ ಅನ್ನೋದು ಭಾರೀ ಕುತೂಹಲ ಹುಟ್ಟಿಹಾಕಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ, ಆಕೆ ವಿರುದ್ಧವೇ ಕೇಸ್ ದಾಖಲಿಸಿದ BMTC ಕಂಡಕ್ಟರ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ತವರಲ್ಲೂ, ತವರಿನಾಚೆಯೂ ಮುಖಭಂಗ.. RCBಗೆ ಇರೋ ಮುಂದಿನ ಸವಾಲುಗಳು ಏನು?

https://newsfirstlive.com/wp-content/uploads/2024/04/RCB-20.jpg

Load More