newsfirstkannada.com

RCBvsDC; ಸ್ಮೃತಿ ಮಂದನಾ vs ಮೆಗ್ ಲ್ಯಾನಿಂಗ್.. ಫೈನಲ್​ ಗೆಲ್ಲುವ ಫೇವರಿಟ್ ಟೀಮ್ ಯಾವುದು?

Share :

Published March 17, 2024 at 9:42am

Update March 17, 2024 at 10:02am

    ಲ್ಯಾನಿಂಗ್ ಹಾಕುವ ತಂತ್ರಗಳಿಗೆ ಪ್ರತಿ ತಂತ್ರಗಳನ್ನ ಹಾಕಬೇಕು

    ಎಲ್ಲಿಸ್ ಪರ್ರಿಯ ನಿರ್ಣಾಯಕ ಆಟವೇ ಆರ್​ಸಿಬಿಗೆ ಮುಖ್ಯನಾ?

    ಡೆಲ್ಲಿ ಟೀಮ್ ಅನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ

WPLನಲ್ಲಿ ಫೈನಲ್​ನಲ್ಲಿ ಸ್ಮೃತಿ ಮಂದನಾ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪೈನಲ್​ ಪಂದ್ಯದಲ್ಲಿಂದು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಅಖಾಡಕ್ಕೆ ಇಳಿಯಲಿದೆ. ಗೆಲ್ಲುವ ಪೇವರಿಟ್ ಟೀಮ್ ಆರ್​ಸಿಬಿ ಆದರು ತವರಿನಲ್ಲಿ ಮೆಗ್​ ಲ್ಯಾನಿಂಗ್​ ಪಡೆಯನ್ನು ಬಗ್ಗೆ ಬಡಿಯುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾದ ಏಕದಿನ ವರ್ಲ್ಡ್​​ಕಪ್​ ಗೆದ್ದಿರುವ ಮೆಗ್​ ಲ್ಯಾನಿಂಗ್ ಐಡಿಯಾಗಳನ್ನು ತಲೆ ಕೆಳಗೆ ಮಾಡಿ​ ಆರ್​ಸಿಬಿ ತಂಡ ಕಪ್ ಗೆಲ್ಲಬೇಕು ಎಂದರೆ ಭಾರೀ ತಂತ್ರಗಳನ್ನು ಮಾಡಬೇಕು. ಆರ್​ಸಿಬಿ ಪರ ಓಪನಿಂಗ್ ಆಗಿ ಕಣಕ್ಕೆ ಇಳಿಯುವ ಸ್ಮೃತಿ ಮಂದನಾ ಮೊದಲ ಪವರ್ ಪ್ಲೇವರೆಗೆ ವಿಕೆಟ್​ ಕಾಯ್ದುಕೊಳ್ಳಬೇಕು. ಅವಾಗ ಮಾತ್ರ ತಂಡದ ಪರ ರನ್​ ವೇಗ ಇರುತ್ತದೆ. ಜೊತೆಗೆ ಹಿಂದೆ ಬರುವ ಬ್ಯಾಟ್ಸ್​ವುಮೆನ್ಸ್​ಗೆ ನಿರಾಳವಾಗಿ ಬ್ಯಾಟ್ ಮಾಡಲು ಅನುಕೂಲವಾಗುತ್ತದೆ.

ಇನ್ನು ಆಲ್​ರೌಂಡರ್​ ಎಲ್ಲಿಸ್ ಪೆರ್ರಿ ಆಕ್ರಮಣಕಾರಿ ಬೌಲಿಂಗ್ ಜೊತೆಗೆ ಬ್ಯಾಟ್ ಬೀಸಿದರೆ ಎಲ್ಲ ರೀತಿಯಿಂದಲೂ ತಂಡಕ್ಕೆ ನೆರವಾಗುತ್ತದೆ. ರಿಚಾ ಘೋಶ್ ಕೂಡ ಹೊಡಿಬಡಿ ಆಟದೊಂದಿಗೆ ತಂಡಕ್ಕೆ ರನ್​ ತೆಗೆದುಕೊಂಡು ಬರಬೇಕಾಗುತ್ತದೆ. ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕ ಪಾಟೀಲ್ ಹಾಗೂ ಆಶಾ ಸೋಭಾನಾ ಒಳ್ಳೆಯ ಪ್ರದರ್ಶನ ನೀಡಿದರೆ ಆರ್​ಸಿಬಿ WPL ಫೈನಲ್​ನಲ್ಲಿ ಗೆಲುವು ಪಡೆಯುವುದು ಪಕ್ಕಾ.

ಅದರಂತೆ ಡೆಲ್ಲಿ ತಂಡವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಮೆಗ್​ ಲ್ಯಾನಿಂಗ್, ತಾನಿಯಾ ಭಾಟಿಯಾ, ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಝನ್ನೆ ಕಪ್, ಜೆಸ್ ಜೊನಾಸೆನ್​ರಂಥ ಬಲಿಷ್ಠ ಆಟಗಾರ್ತಿಯರನ್ನ ಹೊಂದಿದೆ. ಹೀಗಾಗಿ ಆರ್​ಸಿಬಿ ಫೈನಲ್​​ ಪಂದ್ಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ. ಅಭಿಮಾನಿಗಳ ನಿರೀಕ್ಷೆಯಂತೆ ಆರ್​ಸಿಬಿ ಫೈನಲ್​ಗೆ ಹೋಗಿದ್ದು ಕಪ್​ ಗೆಲ್ಲುವ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಇದರ ಜೊತೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಬ್ಯಾಟಿಂಗ್​ಗೆ ಉತ್ತಮವಾದ ಪಿಚ್ ಆಗಿದೆ. ಟಾಸ್​ ಗೆಲ್ಲುವ ತಂಡಕ್ಕೆ ವಿಜಯಲಕ್ಷ್ಮಿ ಒಲಿಯಬಹುದು ಎನ್ನುವುದು ಕ್ರಿಕೆಟ್ ತಜ್ಞರ ಅಭಿಪ್ರಾಯವಾಗಿದೆ.

WPL ಫೈನಲ್ ಪಂದ್ಯ ಇಂದು ಸಂಜೆ 7:30ಕ್ಕೆ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCBvsDC; ಸ್ಮೃತಿ ಮಂದನಾ vs ಮೆಗ್ ಲ್ಯಾನಿಂಗ್.. ಫೈನಲ್​ ಗೆಲ್ಲುವ ಫೇವರಿಟ್ ಟೀಮ್ ಯಾವುದು?

https://newsfirstlive.com/wp-content/uploads/2024/03/WPL_CUP.jpg

Load More