ಮೆಗಾ ಹರಾಜು; RCB ಕಡಿಮೆ ದುಡ್ಡಲ್ಲಿ ಖರೀದಿ ಮಾಡೋ ಮೂವರು ಸ್ಫೋಟಕ ಆಟಗಾರರು ಇವ್ರೇ!

author-image
Ganesh Nachikethu
Updated On
ನಾಯಕನ ಹುಡುಕಾಟದಲ್ಲಿ RCB; ರಾಹುಲ್, ಪಂತ್ ಅಲ್ಲ.. ಕಪ್ ಗೆದ್ದ ಹೀರೋಗೆ ಗಾಳ..!
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಐಪಿಎಲ್​ 2025ರ ಮೆಗಾ ಆ್ಯಕ್ಷನ್​​ನಲ್ಲಿ ಯುವ ಆಟಗಾರರ ಖರೀದಿಗೆ ಪ್ಲ್ಯಾನ್​​
  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಮಾಸ್ಟರ್​ ಪ್ಲ್ಯಾನ್​ ಏನು?

ಇನ್ನೇನು ಕೆಲವೇ ದಿನಗಳಲ್ಲಿ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಮೆಗಾ ಹರಾಜು ನಡೆಯಲಿದೆ. ಈ ಮೆಗಾ ಹರಾಜಿನಲ್ಲಿ ಕೆ.ಎಲ್​ ರಾಹುಲ್​​, ರಿಷಬ್​ ಪಂತ್​​, ಶ್ರೇಯಸ್​ ಅಯ್ಯರ್​ ಸೇರಿದಂತೆ ಸ್ಟಾರ್​ ಆಟಗಾರರೇ ಭಾಗವಹಿಸಲಿದ್ದಾರೆ. ಅದರಲ್ಲೂ ಯುವ ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಳೆದ ಸೀಸನ್​​ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರೋ ಯುವ ಆಟಗಾರರ ಮೇಲೆ ಐಪಿಎಲ್​ ತಂಡಗಳ ಮಾಲೀಕರು ಕಣ್ಣು ನೆಟ್ಟಿದೆ. ಈ ಹರಾಜಿನಲ್ಲಿ ಯುವ ಆಟಗಾರರನ್ನು ತಮ್ಮ ತಂಡದತ್ತ ಸೆಳೆಯಲು ಮಾಲೀಕರು ಕೂಡ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಅಂತೂ ತಂಡದ ದೂರದೃಷ್ಟಿಯಿಂದ ಈ ಯುವ ಆಟಗಾರರಿಗೆ ಮಣೆ ಹಾಕಲಿದೆ.

ಆರ್​​ಸಿಬಿ ಟಾರ್ಗೆಟ್​ ಮಾಡೋ ಯುವ ಆಟಗಾರರು ಇವ್ರೇ!

ನೆಹಾಲ್‌ ವಧೇರಾ

ಪಂಜಾಬ್‌ ಪರ ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರ ನೆಹಾಲ್ ವಧೇರಾ. ಇವರು ದೇಶೀಯ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕಳೆದ ಸೀಸನ್​​ನಲ್ಲಿ ಮುಂಬೈ ಇಂಡಿಯನ್ಸ್​​ ಪರ ಕಡಿಮೆ ಪಂದ್ಯಗಳನ್ನಾಡಿದ್ರೂ ಸೈ ಎನಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್​​ಸಿಬಿ ಗಮನ ಸೆಳೆದಿದ್ದಾರೆ.

ಅಶುತೋಷ್‌ ಶರ್ಮಾ

2024ರ ಐಪಿಎಲ್​ ಸೀಸನ್​​ನಲ್ಲಿ ಅಮೋಘ ಪ್ರದರ್ಶನ ನೀಡಿದ ಯುವ ಆಟಗಾರ ಅಶುತೋಷ್‌ ಶರ್ಮಾ. ಇವರು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರು ಮಾಡಿದವ್ರು. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟ್​ ಬೀಸಬಲ್ಲರು. 17ನೇ ಸೀಸನ್​ನಲ್ಲಿ ತಾನು ಆಡಿದ 10 ಪಂದ್ಯದಲ್ಲಿ 189 ರನ್​ ಚಚ್ಚಿದ್ರು. ಅಶುತೋಷ್‌ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 167.26 ಇದೆ. ಇವರ ಮೇಲೂ ಬೆಂಗಳೂರು ಫ್ರಾಂಚೈಸಿ ಕಣ್ಣಿಟ್ಟಿದೆ.

ಅಂಗ್‌ಕ್ರಿಶ್ ರಘುವಂಶಿ

ಕೆಕೆಆರ್‌ ತಂಡದ 20 ವರ್ಷದ ಯುವ ಬ್ಯಾಟರ್​ ಅಂಗ್‌ಕ್ರಿಶ್ ರಘುವಂಶಿ. ಇವರು ಕೆಕೆಆರ್​ ತಂಡದ ಪರ ತಮಗೆ ಸಿಕ್ಕ ಅವಕಾಶದಲ್ಲಿ 10 ಪಂದ್ಯಗಳನ್ನು ಆಡಿ 163 ರನ್ ಗಳಿಸಿದ್ರು. ಇವರ ಮೂಲ ಬೆಲೆ 20 ಲಕ್ಷ ರೂ. ಆಗಿದ್ದು, ಅಗ್ರೆಸ್ಸಿವ್​ ಆಗಿ ಬ್ಯಾಟ್​​ ಮಾಡಬಲ್ಲರು. ಹಾಗಾಗಿ ಆರ್​​​ಸಿಬಿ ಈತನ ಮೇಲೆ ಹಣದ ಹೊಳೆಯನ್ನೇ ಹರಿಸಬಹುದು.

ಇದನ್ನೂ ಓದಿ: ಮಾಕ್ ಆ್ಯಕ್ಷನ್‌ನಲ್ಲಿ ಬಂಪರ್‌: 10.75 ಕೋಟಿ ಕೊಟ್ಟು ಇಶಾನ್​​ ಕಿಶನ್​ ಖರೀದಿಸಿದ ಆರ್​​ಸಿಬಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment