ಮಾರುಕಟ್ಟೆಗೆ ಬಂತು ಗೆರಿಲ್ಲಾ 450 ಬೈಕ್​.. ಮತ್ತೊಮ್ಮೆ ಧೂಳೆಬ್ಬಿಸಲು ರೆಡಿಯಾಗಿದೆ ರಾಯಲ್​ ಎನ್​ಫೀಲ್ಡ್​

author-image
AS Harshith
Updated On
ಮಾರುಕಟ್ಟೆಗೆ ಬಂತು ಗೆರಿಲ್ಲಾ 450 ಬೈಕ್​.. ಮತ್ತೊಮ್ಮೆ ಧೂಳೆಬ್ಬಿಸಲು ರೆಡಿಯಾಗಿದೆ ರಾಯಲ್​ ಎನ್​ಫೀಲ್ಡ್​
Advertisment
  • ಹೊಸ ಲುಕ್​ನಲ್ಲಿ ಮಾರುಕಟ್ಟೆಗೆ ಬಂತು ಗೆರಿಲ್ಲಾ 450
  • ರಾಯಲ್​​ ಎನ್​​​ಫೀಲ್ಡ್​​ನ ಗೆರಿಲ್ಲಾ 450 ಬೈಕ್​ ಬೆಲೆ ಎಷ್ಟು ಗೊತ್ತಾ?
  • ಇದು ಹಿಮಾಲಯನ್​ ಮತ್ತು ಹಂಟರ್​ ಬೈಕ್​ನ ಪರಿಪೂರ್ಣ ಮಿಶ್ರಣವೇ?

ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ರಾಯಲ್​​ ಎನ್​​​ಫೀಲ್ಡ್ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ​ಗೆರಿಲ್ಲಾ 450 ಹೆಸರಿನ ಹೊಸ ಬೈಕನ್ನು ಪರಿಚಯಿಸಿದೆ. ನೂತನ ಬೈಕನ್ನು 2.39 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದೆ.

ಗೆರಿಲ್ಲಾ 450 ಬೈಕ್​​ ಹಿಮಾಲಯನ್​ ಮತ್ತು ಹಂಟರ್​ ಬೈಕ್​ನ ಪರಿಪೂರ್ಣ ಮಿಶ್ರಣವಾಗಿದೆ. 500ಸಿಸಿ ವಿಭಾಗದಲ್ಲಿ ಇದನ್ನು ಪರಿಚಯಿಸಿದೆ.

ಬಣ್ಣ ಮತ್ತು ರೂಪಾಂತರ

ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ರಾಯಲ್​ ಎನ್​ಫೀಲ್ಡ್​ ಗೆರಿಲ್ಲಾ 450 ಬೈಕನ್ನು ಮೂರು ರೂಪಾಂತರದಲ್ಲಿ ಪರಿಚಯಿಸಿದೆ. ಫ್ಲ್ಯಾಶ್​​​, ಡ್ಯಾಶ್​ ಮತ್ತು ಅನಲಾಗ್​​ ರೂಪಾಂತರದಲ್ಲಿ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಬ್ರೇವಾ ಬ್ಲೂ ಮತ್ತು ಹಂಟರ್​ ಬಣ್ಣದಲ್ಲಿ ಸಿಗುತ್ತಿದೆ. ಕಂಪನಿಯ ಅಧಿಕೃತ ಡೀಲರ್​ ಶಿಪ್​ ಮೂಲಕ ಖರೀದಿಸಬಹುದಾಗಿದೆ​.

ಇದನ್ನೂ ಓದಿ: ಉತ್ತಮ ಗುಣಮಟ್ಟ, 50 ಮಂದಿಯಿಂದ ತಯಾರಾಗುತ್ತೆ ಜೈಲೂಟ.. ದರ್ಶನ್​ಗೆ​ ಇದರಿಂದ್ಯಾಕೆ ಪ್ರಾಣ ಸಂಕಟ?

ಗೆರಿಲ್ಲಾ 450 ಬೈಕ್​​ ಹಿಮಾಲಯನ್​ ಬೈಕ್​​ನ ರೌಂಡ್​ ಹೆಡ್​ಲ್ಯಾಂಪನ್ನು ಹೊಂದಿದೆ. ಸ್ಪ್ಲಿಟ್​​ ಇಂಡಿಕೇಟರ್​​ ಅನ್ನು ಅಳವಡಿಸಿಕೊಂಡಿದೆ. ನೂತನ ಬೈಕ್​ನಲ್ಲಿ 11 ಲೀಟರ್​ನ ಪೆಟ್ರೋಲ್​ ಟ್ಯಾಂಕ್​ ನೀಡಲಾಗಿದ್ದು, ವಿಭಿನ್ನ ಶೈಲಿಯಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ನೂತನ ಬೈಕ್​ 780 ಎಂಎಂ ಸೀಟರ್​ನೊಂದಿಗೆ ಬಂದಿದೆ​​, ಗ್ರಾಬ್​ ಹ್ಯಾಂಡಲ್ ಇದರಲ್ಲಿದೆ​​.

publive-image

ಎಂಜಿನ್​​ ಕಾರ್ಯಕ್ಷಮತೆ

ಗೆರಿಲ್ಲಾ 450 ಬೈಕ್​ 452ಸಿಸಿ ಸಿಂಗಲ್​ ಸಿಲಿಂಡರ್​​, ಲಿಕ್ವಿಡ್​ ಕೂಲ್ಡ್​ ಎಂಜಿನ್​ ಹೊಂದಿದೆ. 8000 ಆರ್​ಪಿಎಂ ಮತ್ತು 39.47 ಬಿಹೆಚ್​ಪಿ ಗರಿಷ್ಠ ಶಕ್ತಿಯನ್ನು ಹೊಂದಿದೆ. 5,500 ಆರ್​ಪಿಯಂನಲ್ಲಿ 40 ಎನ್​ಎಮ್​ನ ಟಾರ್ಕ್​ ಉತ್ಪಾದಿಸುತ್ತದೆ.

ಇದನ್ನೂ ಓದಿ: ಆನೆಗಳು ತಮ್ಮೊಳಗೆ ಹೆಸರು ಇಟ್ಟುಕೊಂಡಿರುತ್ತವೆ! ಮನುಷ್ಯರಂತೆ ಸಂವಹನ ಭಾಷೆಯನ್ನು ಹೊಂದಿವೆಯಂತೆ

ಇದಲ್ಲದೆ, ಸಿಕ್ಸ್​​​ ಸ್ಟೀಡ್​ ಗೇರ್​​ ಬಾಕ್ಸ್​, ಮುಂಭಾಗ 43ಎಂಎಂ ಟೆಲಿಸ್ಕೋಪಿಕ್​​ ಫೋರ್ಕ್​​ ​ಮತ್ತು ಹಿಂಭಾಗ 140 ಎಂಎಂ ಮತ್ತು ಲಿಂಕೇಜ್​​ ಟೈಪ್​ ಮೊನೊ ಶಾಕ್​ನೊಂದಿಗೆ ಮಾರುಕಟ್ಟೆಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment