9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು...!

author-image
Bheemappa
Updated On
ಕೇಂದ್ರ ಸರ್ಕಾರದಡಿ ಉದ್ಯೋಗ ಅವಕಾಶ.. 40 ವರ್ಷದ ಒಳಗಿನವರು ಅರ್ಜಿ ಸಲ್ಲಿಕೆ ಮಾಡಬಹುದು
Advertisment
  • ನಿರುದ್ಯೋಗಿಗಳಿಗೆ ಇಲ್ಲೊಂದು ಅತ್ಯುತ್ತಮ ಅವಕಾಶ
  • 10ನೇ ತರಗತಿ, ITI ಮುಗಿಸಿದ್ರೆ ಅಪ್ಲೇ ಮಾಡಬಹುದು
  • ಬೃಹತ್ ಮಟ್ಟದಲ್ಲಿ ಹುದ್ದೆಗಳನ್ನ ಆಹ್ವಾನ ಮಾಡಿದ RRB

ಉದ್ಯೋಗ ಎನ್ನುವುದು ಎಲ್ಲರಿಗೂ ಅವಶ್ಯಕವಾಗಿದೆ. ಹೇಗಾದರೂ ಮಾಡಿ ಸರ್ಕಾರಿ ಹುದ್ದೆ ಪಡೆಯಬೇಕು ಎಂಬುದು ಉದ್ಯೋಗಾಕಾಂಕ್ಷಿಗಳ ಆಸೆ ಆಗಿರುತ್ತದೆ. ಹೀಗೆ ಆಸೆ ಇರುವ ನಿರುದ್ಯೋಗಿಗಳಿಗೆ ಇಲ್ಲೊಂದು ಅತ್ಯುತ್ತಮ ಅವಕಾಶ ಇದೆ. ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​ಬಿ)ಯು ದೊಡ್ಡ ಮಟ್ಟದಲ್ಲಿ ಉದ್ಯೋಗಗಳನ್ನ ಆಹ್ವಾನ ಮಾಡಿದೆ.

ರೈಲ್ವೆ ನೇಮಕಾತಿ ಮಂಡಳಿ ಬೃಹತ್ ಉದ್ಯೋಗಗಳನ್ನು ಕುರಿತು ಅಧಿಸೂಚನೆ ರಿಲೀಸ್ ಮಾಡಿದೆ. ದೇಶದ್ಯಾಂತ ಹಲವಾರು ರೈಲ್ವೆ ವಲಯಗಳಲ್ಲಿ ಕೆಲಸಗಳು ಖಾಲಿ ಇವೆ. ಇವುಗಳಲ್ಲಿ ಪೂರ್ವ ಕರಾವಳಿ ರೈಲ್ವೆ, ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆಯಲ್ಲಿ ಅತಿ ಹೆಚ್ಚು ಖಾಲಿ ಹುದ್ದೆಗಳಿವೆ. ಅಭ್ಯರ್ಥಿಗಳೆಲ್ಲಾ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಆರ್​ಆರ್​ಬಿ ಆಹ್ವಾನ ಮಾಡಿರುವ ಹುದ್ದೆಗಳ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿರುತ್ತದೆ. ಎಷ್ಟು ಉದ್ಯೋಗಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ವಿದ್ಯಾರ್ಹತೆ ಇತ್ಯಾದಿ ಮಾಹಿತಿ ಇಲ್ಲಿದೆ.

ಹುದ್ದೆ ಹೆಸರು- ಸಹಾಯಕ ಲೋಕೋ ಪೈಲಟ್

ಎಷ್ಟು ಉದ್ಯೋಗಗಳು- 9970

ಇದನ್ನೂ ಓದಿ:CISF ನಲ್ಲಿ 1,161 ಉದ್ಯೋಗಗಳು.. SSLC ಪಾಸ್ ಆಗಿದ್ರೆ ಈ ಖಾಲಿ ಹುದ್ದೆಗಳಿಗೆ ಪ್ರಯತ್ನಿಸಿ

publive-image

ವಿದ್ಯಾರ್ಹತೆ-
10ನೇ ತರಗತಿ ಜೊತೆಗೆ ಐಟಿಐ ಅಥವಾ ಇಂಜಿನಿಯರಿಂಗ್, ಡಿಪ್ಲೋಮಾ

ವಯೋಮಿತಿ- 18 ರಿಂದ 30 ವರ್ಷ

ಅರ್ಜಿ ಶುಲ್ಕ ಎಷ್ಟು?
ಜನರಲ್, ಒಬಿಸಿ- 500 ರೂಪಾಯಿ
ಎಸ್​​ಸಿ, ಎಸ್​​ಟಿ- 250 ರೂಪಾಯಿ

ಆಯ್ಕೆ ಪ್ರಕ್ರಿಯೆ

  • ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ 1)
  • ಸಿಬಿಟಿ 1 ಪಾಸ್ ಆದ್ರೆ ಸಿಬಿಟಿ 2 ಟೆಸ್ಟ್
  • ಕಂಪ್ಯೂಟರ್ ಬೇಸ್ಡ್​ ಅಪ್ಟಿಟ್ಯೂಟ್ ಟೆಸ್ಟ್ (ಸಿಬಿಎಟಿ)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರಿಶೀಲನೆ

ಅರ್ಜಿ ಸಲ್ಲಿಕೆಗೆ ಲಿಂಕ್-http://www.indianrailways.gov.in

ಈ ಕೆಲಸಕ್ಕೆ ಸಂಬಂಧಿಸಿದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ- 09 ಮೇ 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment