/newsfirstlive-kannada/media/post_attachments/wp-content/uploads/2025/01/Job_aspirants-1.jpg)
ರೈಲ್ವೆ ನೇಮಕಾತಿ ಮಂಡಳಿ (RRB)ಯು ದೊಡ್ಡ ಮಟ್ಟದಲ್ಲಿ ಉದ್ಯೋಗ ನೇಮಕಾತಿಗೆ ಅಧಿಸೂಚನೆ ರಿಲೀಸ್ ಮಾಡಿತ್ತು. ಈ ಉದ್ಯೋಗಗಳಿಗೆ ಜನವರಿ 23 ರಿಂದ ಅರ್ಜಿ ಸಲ್ಲಿಕೆ ಆರಂಭಿಸಿ ಫೆಬ್ರುವರಿ 22ಕ್ಕೆ ಕೊನೆಗೊಂಡಿತ್ತು. ಆದರೆ ಈ ದಿನಾಂಕವನ್ನು ಇದೀಗ ರೈಲ್ವೆ ನೇಮಕಾತಿ ಮಂಡಳಿಯು ವಿಸ್ತರಣೆ ಮಾಡಿದೆ. ಹೀಗಾಗಿ ಅರ್ಜಿ ಸಲ್ಲಿಕೆ ಮಾಡದೇ ಇರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಮಾರ್ಚ್ 01 ರವರೆಗೆ ಅವಕಾಶ ನೀಡಲಾಗಿದೆ.
ಕೇಂದ್ರ ಸರ್ಕಾರದಡಿ ರೈಲ್ವೆ ಇಲಾಖೆ ಬರುವುದರಿಂದ ದೇಶದ ಯಾವುದೇ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡಲು ಅಭ್ಯರ್ಥಿಗಳು ಸಿದ್ಧರಾಗಿರಬೇಕು. ಹಲವು ವರ್ಷಗಳಿಂದ ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುವವರು ಇವುಗಳಿಗೆ ಆನ್‌ಲೈನ್ ಮೂಲಕವೇ ಅಪ್ಲೇ ಮಾಡಬಹುದು.
ಒಟ್ಟು ಉದ್ಯೋಗಗಳು- 32,438
ಉದ್ಯೋಗದ ಹೆಸರು
ರೈಲ್ವೆ ಇಲಾಖೆಯ ಗ್ರೂಪ್- ಡಿ ಉದ್ಯೋಗ
ವೇತನ ಶ್ರೇಣಿ
18,000 ರೂಪಾಯಿ
ವಿದ್ಯಾರ್ಹತೆ
10ನೇ ತರಗತಿ ಪಾಸ್
ಐಟಿಐ ಅಥವಾ ಡಿಪ್ಲೋಮಾ ಓದಿದ್ದರೇ ಉತ್ತಮ
ಇದನ್ನೂ ಓದಿ:ಪಶುಸಂಗೋಪನಾ ನಿಗಮದಲ್ಲಿ ಉದ್ಯೋಗಗಳು.. 2,152 ಹುದ್ದೆ, SSLC, PUC, ಪದವಿ ಮುಗಿಸಿದ್ರೆ ಅವಕಾಶ
i
ಅರ್ಜಿ ಶುಲ್ಕ ಎಷ್ಟು ಪಾವತಿಸಬೇಕು?
ಎಸ್ಸಿ, ಎಸ್ಟಿ, ಮಹಿಳೆ, ವಿಶೇಷ ಚೇತನ- 250 ರೂಪಾಯಿ
ಜನರಲ್, ಇಡಬ್ಲುಎಸ್, ಒಬಿಸಿ- 500 ರೂಪಾಯಿ
ಅಭ್ಯರ್ಥಿಗಳಲ್ಲಿ ಈ ದಾಖಲೆ ಇರಲೇಬೇಕು
- ಯಾವುದಾದರೂ ಗುರುತಿನ ಚೀಟಿ
- ಶೈಕ್ಷಣಿಕ ಪ್ರಮಾಣಪತ್ರಗಳು
- ಜಾತಿ ಪ್ರಮಾಣ ಪತ್ರ
- ಅಂಗವೈಕಲ್ಯ ಪ್ರಮಾಣಪತ್ರ (ವಿಶೇಷ ಚೇತನರು ಆಗಿದ್ರೆ)
- ಪಾಸ್ಪೋಟೋಗಳು
- ಸಹಿ
ವಯಸ್ಸು ಹಾಗೂ ವಯೋಮಿತಿ ಸಡಿಲಿಕೆ
- 18 ವರ್ಷದಿಂದ 33 ವರ್ಷ
- ಎಸ್ಸಿ, ಎಸ್ಟಿ- 5 ವರ್ಷ
- ಒಬಿಸಿ ಅಭ್ಯರ್ಥಿ- 3 ವರ್ಷ
- ವಿಶೇಷ ಚೇತನರು- 10 ವರ್ಷ
ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು
ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕು
ಮುಖ್ಯ ದಿನಾಂಕ
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 23 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 22 ಫೆಬ್ರವರಿ 2025 (ಮೊದಲ ದಿನಾಂಕ)
ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಆಗಿದೆ- 01 ಮಾರ್ಚ್ 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ