/newsfirstlive-kannada/media/post_attachments/wp-content/uploads/2024/10/JOB_VIDHANA_SOUDHA.jpg)
ರೈಲ್ವೆ ರಿಕ್ವರ್ಮೆಂಟ್ ಬೋರ್ಡ್ (ಆರ್‌ಆರ್‌ಬಿ) ಸದ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರೂಪ್- ಡಿ ಉದ್ಯೋಗಗಳಿಗೆ ಅಧಿಕೃತವಾಗಿ ಅರ್ಜಿ ಆಹ್ವಾನ ಮಾಡಲಿದೆ. ಈಗಾಗಲೇ ಈ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದರ ಜೊತೆಗೆ ಪರೀಕ್ಷೆಗೆ ಬೇಕಾದ ತಯಾರಿ ನಡೆಸಬೇಕು. ಏಕೆಂದರೆ ದೇಶದ್ಯಾಂತ ಈ ಹುದ್ದೆಗಳನ್ನು ನೇಮಕಾತಿ ಮಾಡುವುದರಿಂದ ಅಭ್ಯರ್ಥಿಗಳ ಮಧ್ಯೆ ಪೈಪೋಟಿಯು ಇರುತ್ತದೆ.
ಗ್ರೂಪ್ ಡಿ ಶ್ರೇಣಿಯಡಿ ಕಾಲಿರುವಂತ ಟ್ರ್ಯಾಕ್ ನಿರ್ವಾಹಕ, ಸಹಾಯಕ ಸೇರಿ ಇನ್ನಿತರ ಉದ್ಯೋಗಗಳನ್ನು ಆರ್‌ಆರ್‌ಬಿ ಭರ್ತಿ ಮಾಡಲಿದೆ. ಶೀಘ್ರದಲ್ಲೇ ಅಧಿಕೃತವಾಗಿ ಆರ್‌ಆರ್‌ಬಿ ಗ್ರೂಪ್ ಡಿ ಅಧಿಸೂಚನೆ ಹೊರಡಿಸಲಿದೆ. ಹೊರಡಿಸಿದ ಬಳಿಕ ನೇಮಕಾತಿ ಪ್ರಕ್ರಿಯೆಯ ವಿವರಗಳನ್ನು ನೀಡಲಾಗುತ್ತದೆ. ಇಂತಿಷ್ಟೇ ಅರ್ಜಿಗಳನ್ನು ಆಹ್ವಾನ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೂ ಅಂದಾಜು ಪ್ರಕಾರ 1 ಲಕ್ಷದಷ್ಟು ಉದ್ಯೋಗಗಳಿಗೆ ಆರ್‌ಆರ್‌ಬಿ ಅರ್ಜಿ ಕರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:1,000ಕ್ಕೂ ಹೆಚ್ಚು ಉದ್ಯೋಗಗಳ ನೇಮಕಾತಿ.. ಕರ್ನಾಟಕದ ಬ್ರ್ಯಾಂಚ್ಗಳಲ್ಲೂ 300 ಹುದ್ದೆಗಳು
ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆ 10, ಪಿಯುಸಿ ಪೂರ್ಣಗೊಳಿಸಿರಬೇಕು. ಇದಕ್ಕೆ ವಯಸ್ಸಿನ ಮಿತಿ 18 ರಿಂದ 30 ಇರುತ್ತದೆ. ಇಲಾಖೆ ವೆಬ್ಸೈಟ್ ಲಿಂಕ್ ಬಿಡುಗಡೆಗೊಳಿಸಿದ ಬಳಿಕ ಅರ್ಜಿಯ ಪ್ರತಿಯನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ತಪ್ಪು ಇಲ್ಲದೇ ಭರ್ತಿ ಮಾಡಬೇಕು. ಆರ್‌ಆರ್‌ಬಿ ಮಾನದಂಡಗಳಂತೆ ಅರ್ಜಿ ಪ್ರತಿ ಪೂರ್ಣಗೊಳಿಸಬೇಕು. ಯಾವುದಾದರೂ ತಪ್ಪು ಆಗಿದ್ದರೇ ಅದನ್ನು ಇಲಾಖೆ ಮಾನ್ಯ ಮಾಡಲ್ಲ. ಹೀಗಾಗಿ ಎಲ್ಲ ವಿವರಗಳನ್ನ ಮೊದಲೇ ಖಚಿತ ಪಡಿಸಿಕೊಳ್ಳಬೇಕು.
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ಮೇಲೆ ಇಲಾಖೆಯು ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಡಿ) ನಡೆಸುತ್ತದೆ. ಇದರಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡುತ್ತಾರೆ. ಈ ಎರಡರಲ್ಲಿ ಪಾಸ್ ಆದವರು ರೈಲ್ವೆ ಇಲಾಖೆಯಡಿ ಹುದ್ದೆಗೆ ನೇಮಕವಾಗುತ್ತಾರೆ. ಇವೆಲ್ಲ ಕೇಂದ್ರ ಸರ್ಕಾರಿ ಉದ್ಯೋಗಗಳು ಆಗಿದ್ದರಿಂದ ಸಮಯಕ್ಕೆ ತಕ್ಕನಾಗೆ ಸ್ಯಾಲರಿ ಸೇರಿಂದತೆ ಎಲ್ಲ ರೀತಿಯ ಸೌಲಭ್ಯಗಳು ಹೊಸ ಉದ್ಯೋಗಿಗಳಿಗೆ ಲಭ್ಯವಾಗುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ