1036 ಉದ್ಯೋಗಗಳನ್ನ ಆಹ್ವಾನ ಮಾಡಿರುವ ರೈಲ್ವೆ ಇಲಾಖೆ.. ಅರ್ಜಿ ಸಲ್ಲಿಕೆ ಆರಂಭ, ಸಂಬಳ ಎಷ್ಟು?

author-image
Bheemappa
Updated On
1036 ಉದ್ಯೋಗಗಳನ್ನ ಆಹ್ವಾನ ಮಾಡಿರುವ ರೈಲ್ವೆ ಇಲಾಖೆ.. ಅರ್ಜಿ ಸಲ್ಲಿಕೆ ಆರಂಭ, ಸಂಬಳ ಎಷ್ಟು?
Advertisment
  • ವರ್ಷದ ಆರಂಭದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್
  • ಈ ಉದ್ಯೋಗಗಳಿಗೆ ಎಷ್ಟು ವೇತನ ನಿಗದಿ ಮಾಡಲಾಗಿದೆ..?
  • PUC ಹಾಗೂ ಪಿಯುಸಿ ಮೇಲ್ಪಟ್ಟವರು ಅಪ್ಲೇ ಮಾಡಬಹುದು

ವರ್ಷದ ಆರಂಭದಲ್ಲೇ ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿಗಳನ್ನು ಸರ್ಕಾರಿ ಇಲಾಖೆಗಳು ನೀಡುತ್ತಿವೆ. ಹಲವಾರು ವರ್ಷಗಳಿಂದ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವವರಿಗೆ ಇದೀಗ ರೈಲ್ವೆ ಇಲಾಖೆ ಮತ್ತೊಂದು ಗುಡ್​ನ್ಯೂಸ್ ಕೊಟ್ಟಿದೆ. ಹೀಗಾಗಿ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಪ್ರಯತ್ನ ಮಾಡಬಹುದು. ಸಾವಿರಕ್ಕೂ ಅಧಿಕ ಜಾಬ್​ಗಳನ್ನು ಇಲಾಖೆ ಆಹ್ವಾನ ಮಾಡಿದೆ.

ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​ಬಿ) ಇದೀಗ ಹೊಸ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅರ್ಜಿಗಳನ್ನು ಆಹ್ವಾನ ಮಾಡಿದೆ. ಮಿನಿಸ್ಟ್ರಿಯಲ್ ಮತ್ತು ಐಸೊಲೇಟೆಡ್ ಕೆಟಗರಿ (ಎಂಐ) ಉದ್ಯೋಗಗಳು ಇವಾಗಿದ್ದು ಸಂಬಂಧಿಸಿದ ಎಲ್ಲ ಮಾಹಿತಿ ಇಲ್ಲಿ ಕೊಡಲಾಗಿದೆ. ಅರ್ಹ ಹಾಗೂ ಆಸಕ್ತಿ ಇರುವವರು ಇವುಗಳಿಗೆ ಅಪ್ಲೇ ಮಾಡಬಹುದು. ಇದಕ್ಕೂ ಮೊದಲು ಈ ಲೇಖನವನ್ನು ಅಭ್ಯರ್ಥಿಗಳು ಸಂಪೂರ್ಣವಾಗಿ ಓದಿಕೊಂಡು ಎಲ್ಲ ಮಾಹಿತಿ ಪಡೆಯಿರಿ.

ಜೂನಿಯರ್ ಸ್ಟೆನೋಗ್ರಾಫರ್, ಜೂನಿಯರ್ ಟ್ರಾನ್ಸ್​ಲೇಟರ್ ಸೇರಿದಂತೆ ವಿವಿಧ ಹುದ್ದೆಗಳು ಇವೆ. ಇವುಗಳಿಗೆ ಅರ್ಹತೆ, ಮಾನದಂಡ, ಶುಲ್ಕ, ಕೊನೆಯ ದಿನಾಂಕ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಸೇರಿದಂತೆ ಇನ್ನಿತರ ಮಾಹಿತಿ ಈ ಕೆಳಕಂಡಂತೆ ಇದೆ.

ವೇತನ ಶ್ರೇಣಿ
29,200 ಇಂದ 1,12,400 ರೂಪಾಯಿಗಳು

ಯಾವ್ಯಾವ ಉದ್ಯೋಗ, ಎಷ್ಟು ಕೆಲಸಗಳು?

  • ದೈಹಿಕ ತರಬೇತಿ ಬೋಧಕ- 338
  • ಸ್ನಾತಕೋತ್ತರ ಶಿಕ್ಷಕರು- 187
  • ತರಬೇತಿ ಪಡೆದ ಪದವೀಧರ ಶಿಕ್ಷಕರು- 03
  • ಜೂ. ಟ್ರಾನ್ಸ್​ಲೇಟರ್ ಹಿಂದಿ- 54
  • ಸೀನಿಯರ್ ಪಬ್ಲಿಸಿಟಿ ಇನ್​​ಸ್ಪೆಕ್ಟರ್- 20
  • ಸ್ಟಾಪ್ ಆ್ಯಂಡ್ ವೆಲ್ಪರ್ ಇನ್​​ಸ್ಪೆಕ್ಟರ್- 18
  • ಪ್ರಯೋಗಾಲಯ ಸಹಾಯಕ- 02
  • ಲ್ಯಾಬ್ ಸಹಾಯಕ ಗ್ರೇಡ್ III- 130

ಒಟ್ಟು ಉದ್ಯೋಗಗಳು- 1036

publive-image

ಇದನ್ನೂ ಓದಿ:ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿ ವಿವಿಧ ಹುದ್ದೆಗಳು.. 500ಕ್ಕೂ ಹೆಚ್ಚಿನ ಕೆಲಸಗಳಿಗೆ ಅಪ್ಲೇ ಮಾಡಿ

ಶೈಕ್ಷಣಿಕ ಅರ್ಹತೆ (ಹುದ್ದೆಗಳಿಗೆ ತಕ್ಕಂತೆ ಇವೆ)

ದ್ವಿತಿಯ ಪಿಯುಸಿಯಲ್ಲಿ ಸೈನ್ಸ್​, ಡಿಪ್ಲೋಮಾ, ಸ್ನಾತಕೋತ್ತರ ಹಾಗೂ ಬಿಇಡಿ, ಪದವಿ ಹಾಗೂ ಬಿಇಡಿ, ಸಿಟಿಇಟಿ, ಪದವಿ ಹಾಗೂ ಬಿಪಿಎಡ್​, ಸ್ನಾತಕೋತ್ತರದಲ್ಲಿ ಹಿಂದಿ- ಇಂಗ್ಲಿಷ್, ಪದವಿಯಲ್ಲಿ ಜರ್ನಲಿಸಂ, ಡಿಪ್ಲೋಮಾ, ಮಾಸ್​ಕಮ್ಯೂನಿಕೇಶನ್, ಎಲ್​ಎಲ್​ಬಿ, ಎಂಬಿಎ,

ಅರ್ಜಿ ಶುಲ್ಕ
ಜನರಲ್, ಇಡಬ್ಲುಎಸ್, ಒಬಿಸಿ- 500 ರೂಪಾಯಿ
ಎಸ್​​ಸಿ, ಎಸ್​ಟಿ, ವಿಶೇಷ ಚೇತನ- 200 ರೂಪಾಯಿ

ವಯೋಮಿತಿ
18 ರಿಂದ 48 ವರ್ಷಗಳು

ಈ ಹುದ್ದೆಗಳಿಗೆ ಸಂಬಂಧಿಸಿದ ದಿನಾಂಕಗಳು

ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ- 07 ಜನವರಿ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ- 06 ಫೆಬ್ರವರಿ 2025

ಆಯ್ಕೆ ಪ್ರಕ್ರಿಯೆ

  • ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
  • ಕೌಶಲ್ಯ ಅಥವಾ ಸ್ಕಿಲ್ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಇಲಾಖೆಯ ಅಧಿಕೃತ ವೆಬ್​ಸೈಟ್- https://www.rrbapply.gov.in/#/auth/landing

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment