newsfirstkannada.com

ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

Share :

Published August 17, 2024 at 7:54pm

Update August 17, 2024 at 10:27pm

    ರೈಲ್ವೆ ಇಲಾಖೆಗೆ ಅಪ್ಲೈ ಮಾಡಲು ಎಷ್ಟು ಹಣ ಪಾವತಿಸಬೇಕು?

    ರೈಲ್ವೆ ನೇಮಕಾತಿ ಬೋರ್ಡ್​​ನಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಈ ಹುದ್ದೆಗಳನ್ನ ನೇಮಕಾತಿ ಮಾಡುವುದು ಹೇಗೆ? ಶುಲ್ಕ ಎಷ್ಟು ಇರುತ್ತೆ?

ಜಾಬ್ ಸಿಕ್ಕಿಲ್ಲ, ಸರ್ಕಾರಿ ಉದ್ಯೋಗ ಕೂಡ ಯಾವುದು ಕಾಲ್​ಫಾರ್ಮ್ ಆಗುತ್ತಿಲ್ಲ ಎಂದು ಮನೆಯಲ್ಲಿ ಕುಳಿತು ಯೋಚನೆ ಮಾಡುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್​. 2024ರ ಪ್ಯಾರಾಮೆಡಿಕಲ್ (RRB Paramedical Staff Recruitment 2024) ಹುದ್ದೆಗಳಿಗಾಗಿ ಭಾರತೀಯ ರೈಲ್ವೆ ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಅಭ್ಯರ್ಥಿಗಳು ಇವತ್ತಿನಿಂದಲೇ ಅಪ್ಲೇ ಮಾಡಬಹುದಾಗಿದೆ.

ಇದನ್ನೂ ಓದಿ: SSLC, ಪಿಯುಸಿ ಪಾಸ್​ ಆದವರಿಗೆ ಗುಡ್​​ನ್ಯೂಸ್​.. ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ, ಸ್ಯಾಲರಿ ಎಷ್ಟು?

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,376 ವಿವಿಧ ಪ್ಯಾರಾಮೆಡಿಕಲ್ ಉದ್ಯೋಗಗಳಿಗೆ ಭಾರತೀಯ ರೈಲ್ವೆ ಇಲಾಖೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಈ ಹುದ್ದೆಯ ನೇಮಕಾತಿ ಪ್ರಕ್ರಿಯೆ, ಪ್ರಮುಖವಾದ ದಿನಾಂಕಗಳು, ಲಭ್ಯವಿರುವ ಖಾಲಿ ಹುದ್ದೆಗಳು, ಅರ್ಜಿ ಶುಲ್ಕ ಎಷ್ಟಿರುತ್ತೆ ಹಾಗೂ ಮತ್ತಷ್ಟು ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.

  • ಅರ್ಜಿಗಳು ಪ್ರಾರಂಭದ ದಿನಾಂಕ- ಆಗಸ್ಟ್​ 17, 2024
  • ಅರ್ಜಿ ಹಾಕಲು ಕೊನೆ ದಿನಾಂಕ- ಸೆಂಪ್ಟೆಂಬರ್ 16, 2024
  • ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಇಲಾಖೆ ಅನೌನ್ಸ್ ಮಾಡುತ್ತೆ.

ವಿವಿಧ ಪ್ಯಾರಾಮೆಡಿಕಲ್ ಉದ್ಯೋಗಗಳಿಗೆ 18 ರಿಂದ 43 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಆದರೆ ಆ ಹುದ್ದೆಗೆ ನಿಗದಿ ಪಡಿಸಿದ ವಯಸ್ಸನ್ನು ಗಮನಿಸಿ ಬಳಿಕ ನೀವು ಅಪ್ಲೈ ಮಾಡಬೇಕು.

  • ವಯಸ್ಸಿನ ಮಿತಿ: ಎಸ್ಸಿ, ಎಸ್​ಟಿಗೆ 5 ವರ್ಷಗಳು ವಿನಾಯತಿ
  • ಮಾಜಿ ಸೈನಿಕರು, ಒಬಿಸಿಗೆ 3 ವರ್ಷಗಳು ವಿನಾಯತಿ
  • ಮಹಿಳಾ ಅಭ್ಯರ್ಥಿಗಳು 40 ವರ್ಷ (ವಿಧವೆ, ಡಿವೋರ್ಸ್​,)

ಇದನ್ನೂ ಓದಿ: IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?

ಯಾವ ರೀತಿ ಆಯ್ಕೆ ಮಾಡಲಾಗುತ್ತದೆ..?

  • ಕಂಪ್ಯೂಟರ್ ಬೇಸಡ್ ಟೆಸ್ಟ್​ (ಅಭ್ಯರ್ಥಿಗಳಿಗೆ ಕಂಪ್ಯೂಟರ್​ ಮೂಲಕ ಪರೀಕ್ಷೆ ಇರಲಿದ್ದು 90 ನಿಮಿಷದಲ್ಲಿ 100 ಪ್ರಶ್ನೆಗಳಿಗೆ ಆನ್ಸರ್ ಮಾಡಬೇಕು. ವಿಶೇಷ ಚೇತನರು 120 ನಿಮಿಷದಲ್ಲಿ ಉತ್ತರಿಸಬೇಕು. 3 ಉತ್ತರಗಳು ತಪ್ಪಾದ್ರೆ 1 ಅಂಕ ಕಡಿತ ಮಾಡಲಾಗುತ್ತದೆ)
  • ದಾಖಲೆ ಪರಿಶೀಲನೆ
  • ಮೆಡಿಕಲ್​ ಪರೀಕ್ಷೆ

ಅರ್ಜಿ ಹಾಕಲು ಎಷ್ಟು ಹಣ ಪಾವತಿ ಮಾಡಬೇಕು..?

  • ಜನರಲ್, ಒಬಿಸಿ, ಆರ್ಥಿಕವಾಗಿ ಹಿಂದುಳಿದವರು- 500 ರೂ.ಗಳು
  • ಎಸ್ಸಿ, ಎಸ್​ಟಿ, ಮಹಿಳೆಯರು, ಟ್ರಾನ್ಸ್​ಜೆಂಡರ್- 250 ರೂ.ಗಳು
  • ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯ/ಸಂಸ್ಥೆಗಳಿಂದ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ, ತಾಂತ್ರಿಕ ಅಥವಾ ವೃತ್ತಿಪರ ಅರ್ಹತೆ ಹೊಂದಿರಬೇಕು.

ಅಪ್ಲೇ ಮಾಡಲು ಈ ಲಿಂಕ್​ ಅನ್ನು ಕ್ಲಿಕ್ ಮಾಡಿ- https://www.rrbapply.gov.in/

ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ರೈಲ್ವೆ ರಿಕೃಮೆಂಟ್ ಬೋರ್ಡ್​ (RRB)ನ ಅಧಿಕೃತ ನೇಮಕಾತಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಈ ಹುದ್ದೆಗೆ ಸಂಬಂಧಪಟ್ಟಂತೆ ಯಾವುದೇ ನೋಟಿಫಿಕೇಶನ್, ಅಪ್​ಡೇಟ್​ ನೋಡಬೇಕೆಂದರೆ ಇಲಾಖೆಯ ವೆಬ್​ಸೈಟ್​ ಅನ್ನೇ ಪರಿಶೀಲನೆ ಮಾಡಬೇಕು. ಇನ್ನು ಆಫ್​ಲೈನ್ ಮೂಲಕ ಯಾವುದೇ ಅರ್ಜಿಗಳನ್ನು ಇಲಾಖೆ ಸ್ವೀಕರಿಸಲ್ಲ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈಲ್ವೆ ಇಲಾಖೆಯಿಂದ ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಅಪ್ಲೇ ಮಾಡಲು ಕೊನೆ ದಿನಾಂಕ..?

https://newsfirstlive.com/wp-content/uploads/2024/08/TRAIN.jpg

Load More