ಸಾವಿರಲ್ಲ, 2 ಸಾವಿರ ಅಲ್ಲ.. ಬರೋಬ್ಬರಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಆಹ್ವಾನ!

author-image
Bheemappa
Updated On
ಭಾರತೀಯ ವಾಯು ಪಡೆಯಲ್ಲಿ ಯುವಕ, ಯುವತಿಯರಿಗೆ ಅಗ್ನಿವೀರ್​ ಹುದ್ದೆಗಳು.. ನಾಳೆ ಅರ್ಜಿ ಸಲ್ಲಿಕೆಗೆ ಆರಂಭ
Advertisment
  • 10ನೇ ತರಗತಿ ಪೂರ್ಣವಾಗಿದ್ರೆ ಅರ್ಜಿ ಸಲ್ಲಿಕೆ ಮಾಡಬಹುದು
  • ನಿರುದ್ಯೋಗಿ ಅಭ್ಯರ್ಥಿಗಳಿಗೆ ಇದು ಉದ್ಯೋಗಗಳ ಸುಗ್ಗಿ ಕಾಲ
  • ಈ ಉದ್ಯೋಗಗಳಿಗೆ ಸಂಬಂಧಿಸಿದ ಪೂರ್ಣ ಮಾಹಿತಿ ಇಲ್ಲಿದೆ

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಈ ಉದ್ಯೋಗಗಳಿಗೆ ಪ್ರಯತ್ನಿಸಬಹುದು. ರೈಲ್ವೆ ರಿಕ್ರೂಟ್​ಮೆಂಟ್​ ಬೋರ್ಡ್​​ (ಆರ್​ಆರ್​ಬಿ) ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವ ಅಂತಿಮ ದಿನಾಂಕದ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಹೊಸ ಉದ್ಯೋಗಗಳನ್ನು ಆಹ್ವಾನ ಮಾಡಿರುವ ಆರ್​ಆರ್​ಬಿ ಸಾವಿರವಲ್ಲ, ಎರಡು ಸಾವಿರವಲ್ಲ ಒಟ್ಟು 6 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಹೊಸ ನೇಮಕಾತಿ ಮಾಡುತ್ತಿದೆ. ಹೀಗಾಗಿ ಇದು ನಿರುದ್ಯೋಗಿಗಳಿಗೆ ಗೋಲ್ಡನ್​ ಚಾನ್ಸ್​ ಎನ್ನಬಹುದು. ಇನ್ನು ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕ, ದಾಖಲಾತಿ ಪರಿಶೀಲನೆ, ವೇತನ ಶ್ರೇಣಿ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಮುಖ್ಯವಾದ ಅಂಶಗಳು ಇಲ್ಲಿವೆ.

ಹುದ್ದೆಯ ಹೆಸರು ಏನು?
ತಂತ್ರಜ್ಞರು (Grade 1 Signal and Grade 3)

ಒಟ್ಟು ಉದ್ಯೋಗಗಳು
Technician- 1; 183 ಉದ್ಯೋಗಗಳು
Technician- 3; 6055 ಉದ್ಯೋಗಗಳು

ಇದನ್ನೂ ಓದಿ:ನಿರುದ್ಯೋಗದ ಬಗ್ಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಮಹತ್ವದ ನಿರ್ಧಾರ.. 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಒಪ್ಪಿಗೆ!

publive-image

ವಿದ್ಯಾರ್ಹತೆ-
Technician- 1; ಬಿಎಸ್​​​ಸಿ, ಬಿಟೆಕ್​, ಡಿಪ್ಲೋಮಾ, ಸಿಎಸ್,
Technician- 3; 10ನೇ ತರಗತಿ ಪಾಸ್, ಐಟಿಐ

ವೇತನ ಶ್ರೇಣಿ ಎಷ್ಟು ಇದೆ?
Technician- 1; 29,200 ರೂಪಾಯಿ
Technician- 3; 19,900 ರೂಪಾಯಿ

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳು- 500 ರೂಪಾಯಿ
ಎಸ್​​ಸಿ, ಎಸ್​ಟಿ, ಮಹಿಳೆಯರು, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ

ವಯೋಮಿತಿ ಎಷ್ಟಿದೆ?
ಟೆಕ್ನಿಷಿಯನ್-1; 18 ರಿಂದ 33 ವರ್ಷ
ಟೆಕ್ನಿಷಿಯನ್-3; 18 ರಿಂದ 30 ವರ್ಷ

ಕೆಲಸ ಮಾಡುವ ಸ್ಥಳಗಳು
ಭಾರತದ್ಯಾಂತ

ಆಯ್ಕೆ ಪ್ರಕ್ರಿಯೆ ಹೇಗೆ?

  • ಕಂಪ್ಯೂಟರ್​ ಬೇಸಡ್​ ಪರೀಕ್ಷೆ (ಸಿಬಿಟಿ)
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಮುಖ್ಯವಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 28 ಜೂನ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 28 ಜುಲೈ 2025 (11:59 ಪಿಎಂ)

ಸಂಸ್ಥೆಯ ವೆಬ್​​ಸೈಟ್​-https://indianrailways.gov.in/railwayboard/view_section.jsp?lang=0&id=0,7,1281

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment