/newsfirstlive-kannada/media/post_attachments/wp-content/uploads/2024/11/JOBS_KPSC_1.jpg)
ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ (ಆರ್ಆರ್ಬಿ) ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆ ಬಿಡುಗಡೆ ಮಾಡಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಬಹುದು. ಏಕೆಂದರೆ 6 ಸಾವಿರಕ್ಕೂ ಹೆಚ್ಚು ಹುದ್ದೆಗಳು ಇವೆ. ಈ ಕೆಲಸಗಳಿಗೆ ಅರ್ಜಿಗಳು ಯಾವಾಗ ಆರಂಭವಾಗುತ್ತವೆ, ಯಾರು ಯಾರು ಅರ್ಜಿ ಸಲ್ಲಿಕೆ ಮಾಡಬಹುದು ಎನ್ನುವ ಮಾಹಿತಿ ಇದೆ.
ಆರ್ಆರ್ಬಿ 6 ಸಾವಿರಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ಇವುಗಳಿಗೆ ಭಾರತದಲ್ಲಿರುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅಪ್ಲೇ ಮಾಡುವ ಅವಕಾಶ ಇದೆ. ವೇತನ ಶ್ರೇಣಿ, ಅರ್ಜಿ ಶುಲ್ಕ, ವಯೋಮಿತಿ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು, ದಾಖಲಾತಿ ಪರಿಶೀಲನೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ.
ಹುದ್ದೆಯ ಹೆಸರು ಏನು?
ತಂತ್ರಜ್ಞರು (Technician)
ಒಟ್ಟು ಉದ್ಯೋಗಗಳು
Technician- 1; 180 ಹುದ್ದೆಗಳು
Technician- 3; 6000 ಹುದ್ದೆಗಳು
ವಿದ್ಯಾರ್ಹತೆ-
Technician- 1; ಬಿಎಸ್ಸಿ, ಬಿಟೆಕ್, ಡಿಪ್ಲೋಮಾ
Technician- 3; 10ನೇ ತರಗತಿ ಪಾಸ್, ಐಟಿಐ
ಇದನ್ನೂ ಓದಿ:ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ NIACL.. ಒಟ್ಟು ಎಷ್ಟು ಹುದ್ದೆಗಳು ಇವೆ?
ವೇತನ ಶ್ರೇಣಿ ಎಷ್ಟು ಇದೆ?
Technician- 1; 29,200 ರೂಪಾಯಿ
Technician- 3; 19,9000 ರೂಪಾಯಿ
ವಯೋಮಿತಿ ಎಷ್ಟಿದೆ?
18 ರಿಂದ 33 ವರ್ಷಗಳು
ಅರ್ಜಿ ಶುಲ್ಕ ಎಷ್ಟು?
ಎಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನ ಅಭ್ಯರ್ಥಿಗಳು- 250 ರೂಪಾಯಿ
ಉಳಿದ ಎಲ್ಲ ಅಭ್ಯರ್ಥಿಗಳು- 500 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ ಹೇಗೆ?
ಕಂಪ್ಯೂಟರ್ ಬೇಸಡ್ ಪರೀಕ್ಷೆ (ಸಿಬಿಟಿ)
ದಾಖಲಾತಿ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಕೆಲಸ ಮಾಡುವ ಸ್ಥಳಗಳು
ಭಾರತದ್ಯಾಂತ
ಉದ್ಯೋಗಕ್ಕೆ ಸಂಬಂಧಿಸಿದ ದಿನಾಂಕಗಳು
- ವಿವರವಾದ ಅಧಿಸೂಚನೆ ರಿಲೀಸ್ ದಿನಾಂಕ- 27 ಜೂನ್ 2025
- ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 28 ಜೂನ್ 2025
- ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 28 ಜುಲೈ 2025 (11:59 ಪಿಎಂ)
ಸಂಸ್ಥೆಯ ವೆಬ್ಸೈಟ್- https://indianrailways.gov.in/railwayboard/view_section.jsp?lang=0&id=0,7,1281
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ