ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್​ನ್ಯೂಸ್.. 1,007 ಹುದ್ದೆಗಳು ಖಾಲಿ

author-image
Bheemappa
Updated On
ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್​ನ್ಯೂಸ್.. 1,007 ಹುದ್ದೆಗಳು ಖಾಲಿ
Advertisment
  • ಹುದ್ದೆಗೆ ಅಪ್ಲೇ ಮಾಡಲು ಯಾವ ವಿದ್ಯಾರ್ಹತೆ ಹೊಂದಿರಬೇಕು?
  • ಅವಕಾಶ ತಪ್ಪಿಸಿಕೊಳ್ಳದೇ ಹುದ್ದೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡಿ
  • ಇಡೀ ಭಾರತದಲ್ಲಿ ಅತ್ಯಂತ ದೊಡ್ಡ ಜಾಲ ಹೊಂದಿರುವ ಇಲಾಖೆ\

ರೈಲ್ವೆ ನೇಮಕಾತಿ ಕೋಶ, ಆಗ್ನೇಯ ಮಧ್ಯ ರೈಲ್ವೆ (ಆರ್​ಆರ್​ಸಿ ಎಸ್​ಇಸಿಆರ್) ಇಲಾಖೆಯು ಉದ್ಯೋಗಗಳನ್ನು ಆಹ್ವಾನ ಮಾಡಿದೆ. ಯುವ ಉದ್ಯೋಗಕಾಂಕ್ಷಿಗಳಿಗೆ ಇದೊಂದು ಸುರ್ವಣ ಅವಕಾಶ ಆಗಿದೆ. ಪುರುಷ, ಮಹಿಳೆ ಇಬ್ಬರಿಗೂ ಇಲ್ಲಿ ಅವಕಾಶ ಇದೆ. ಹೀಗಾಗಿ ಆಸಕ್ತಿ ಇರುವವರು ಈ ಅವಕಾಶ ಮಿಸ್ ಮಾಡಿಕೊಳ್ಳದೆ ಅರ್ಜಿ ಸಲ್ಲಿಕೆ ಮಾಡಿ ಉದ್ಯೋಗ ಪಡೆಯಲು ಪ್ರಯತ್ನಿಸಬಹುದು.

ಆಗ್ನೇಯ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಇವು ಅಪ್ರೆಂಟಿಸ್ ಹುದ್ದೆಗಳು ಆಗಿದ್ದರಿಂದ ಯಾವುದೇ ಪರೀಕ್ಷೆ ಇರುವುದಿಲ್ಲ. ಕೇವಲ ಮೆರಿಟ್ ಲಿಸ್ಟ್​ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಭಾರತದಲ್ಲಿ ರೈಲ್ವೆ ಇಲಾಖೆಯು ಅತ್ಯಂತ ದೊಡ್ಡ ಜಾಲ ಹೊಂದಿದೆ. ಅಭ್ಯರ್ಥಿಗಳು ಅಪ್ರೆಂಟಿಸ್​ ಆಗಿ ಕೆಲಸ ಮಾಡಿದರೆ ಮುಂದೆ ನೀವು ದೇಶದಲ್ಲಿ ಎಲ್ಲಿಯೇ ಹೋದರು ರೈಲ್ವೆ ಇಲಾಖೆಯಲ್ಲಿ ಒಂದು ಅವಕಾಶ ಸುಲಭವಾಗಿ ಸಿಗಬಹುದು.

ಒಟ್ಟು ಉದ್ಯೋಗಗಳು- 1007

ಅರ್ಜಿ ಶುಲ್ಕ
ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಅರ್ಹತೆ ಆಧಾರಿತವಾಗಿದೆ. ಹೀಗಾಗಿ ಯಾವುದೇ ವರ್ಗಕ್ಕೆ ಅರ್ಜಿ ಶುಲ್ಕ ಇರಲ್ಲ.

ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!

publive-image

ಶೈಕ್ಷಣಿಕ ಅರ್ಹತೆ- 10ನೇ ತರಗತಿಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕ ಇರಬೇಕು. ಜೊತೆಗೆ ITI ಪ್ರಮಾಣೀಕರಣ ಹೊಂದಿರಬೇಕು.

ವಯೋಮಿತಿ- 15 ರಿಂದ 24 ವರ್ಷದ ಒಳಗಿನವರಿಗೆ ಅವಕಾಶ ಇದೆ

ಹುದ್ದೆಗೆ ಆಯ್ಕೆ ಪ್ರಕ್ರಿಯೆ

  • ಮೆರಿಟ್ ಲಿಸ್ಟ್​
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆಯ ಆರಂಭದ ದಿನಾಂಕ- 05 ಏಪ್ರಿಲ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 04 ಮೇ 2025

ಇಲಾಖೆಯ ವೆಬ್​ಸೈಟ್​- http://www.secr.indianrailways.gov.in

ಮಾಹಿತಿಗಾಗಿ ಲಿಂಕ್- https://secr.indianrailways.gov.in/uploads/files/1743573772444-Act%20Apprentice%20Notification.pdf

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment