/newsfirstlive-kannada/media/post_attachments/wp-content/uploads/2024/11/JOB_Railway-2.jpg)
ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ಬಯಸುವ ಯುವಕರಿಗೆ ಉತ್ತಮ ಅವಕಾಶ ಒದಗಿ ಬಂದಿದೆ. ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹೀಗಾಗಿ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವೆಬ್‌ಸೈಟ್- rrcser.co.in
ಭಾರತ ಸರ್ಕಾರದ ರೈಲ್ವೆ ಸಚಿವಾಲಯದಡಿ ಬರುವ ರೈಲ್ವೆ ನೇಮಕಾತಿ ಸೆಲ್ (ಆರ್ಆರ್ಸಿ) ವರ್ಷದಲ್ಲಿ ಇಲಾಖೆಯ ಉದ್ಯೋಗಗಳ ನೇಮಕಾತಿಗೆ ಹಲವು ಪರೀಕ್ಷೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗಾಗಲೇ ಈ ಉದ್ಯೋಗಗಳಿಗೆ ನೋಟಿಫಿಕೇಶನ್ ಅನ್ನು ರಿಲೀಸ್ ಮಾಡಲಾಗಿದ್ದು, ಅರ್ಜಿ ಕೂಡ ಆರಂಭವಾಗಿವೆ. ಹೀಗಾಗಿ ಅರ್ಹ ಎನಿಸುವ ಅಭ್ಯರ್ಥಿಗಳು ಅಪ್ಲೇ ಮಾಡಬಹುದು.
ಹುದ್ದೆಯ ಹೆಸರು: ಸೌತ್ ಈಸ್ಟರ್ನ್ ರೈಲ್ವೆ ಅಪ್ರೆಂಟಿಸ್ ನೇಮಕಾತಿ
ಎಷ್ಟು ಉದ್ಯೋಗಗಳು- 1791
ವಿದ್ಯಾರ್ಹತೆ- 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ
ಇದನ್ನೂ ಓದಿ:GAIL Recruitment; 200ಕ್ಕೂ ಹೆಚ್ಚು ಹುದ್ದೆಗಳು.. ಪದವಿ ಸೇರಿ ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು!
ವಯಸ್ಸಿನ ಮಿತಿ- 15 ರಿಂದ 24 ವರ್ಷದ ಒಳಗಿರಬೇಕು.
ಕೆಲಸದ ಸ್ಥಳ- ಭಾರತದ್ಯಾಂತ
ಅರ್ಜಿ ಶುಲ್ಕ ಎಷ್ಟು- 100 ರೂಪಾಯಿ
ಆಯ್ಕೆ ಪ್ರಕ್ರಿಯೆ ಹೇಗೆ?
ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ
ದಾಖಲಾತಿ ಪರಿಶೀಲನೆ
ವೈದ್ಯಕೀಯ ತಪಾಸಣೆ
ಮುಖ್ಯವಾದ ದಿನಗಳು
ನೋಟಿಫಿಕೆಶನ್ ಬಿಡುಗಡೆ ದಿನಾಂಕ- 6 ನವೆಂಬರ್ 2024
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- 10- ಡಿಸೆಂಬರ್ 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ