Advertisment

ರಾಜಕೀಯ ಸಲಹೆ ನೀಡಲು ಪ್ರಶಾಂತ್​​ ಕಿಶೋರ್​​ ತೆಗೆದುಕೊಳ್ಳೋ ಹಣ ಎಷ್ಟು? ಗೊತ್ತಾದ್ರೆ ಶಾಕ್​ ಆಗ್ತೀರಾ!

author-image
Gopal Kulkarni
Updated On
ಈ ಬಾರಿ 400 ಸೀಟ್‌ ಗೆಲ್ಲುತ್ತಾ NDA? ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಚ್ಚರಿ ಭವಿಷ್ಯ; ಹೇಳಿದ್ದೇನು?
Advertisment
  • ಪ್ರಶಾಂತ್ ಕಿಶೋರ್ ರಾಜಕೀಯ ಸಲಹೆಗೆ ಪಡೆಯುವ ಫೀಸ್ ಎಷ್ಟು ಗೊತ್ತಾ?
  • ತಾವು ತೆಗೆದುಕೊಳ್ಳುವ ಸಂಭಾವನೆಯ ಮೊತ್ತವನ್ನು ರಿವೀಲ್ ಮಾಡಿದ ಕಿಶೋರ್
  • ಬಿಹಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಶಾಂತ್ ಬಿಚ್ಚಿಟ್ಟ ಸತ್ಯ ಯಾವುದು?

ಚುನಾವಣೆ ಅಂದ್ರೆನೇ ಅದು ರಣನೀತಿಯ ಮೇಲೆ ಹೋಗುವಂತಹದ್ದು. ತಂತ್ರ, ಪ್ರತಿತಂತ್ರ, ರಣತಂತ್ರ ಹಾಗೂ ಕೆಲವೊಮ್ಮೆ ಕುತಂತ್ರವೂ ಕೂಡ ಅದರಲ್ಲಿ ಅಡಕಗೊಂಡಿರುತ್ತದೆ. ಈ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಂಡು ರಾಜಕೀಯಕ್ಕೆ ಇಳಿದವರು ಕಡಿಮೆ. ಆದ್ರೆ ಕೆಲವರು ಇರುತ್ತಾರೆ. ಜನರ ನಾಡಿ ಮಿಡಿತವನ್ನು ಸರಿಯಾಗಿ ಅಳೆದು ತೂಗಿ ಇದೇ ತಂತ್ರ, ಇದೇ ಕುತಂತ್ರವೇ ಇಲ್ಲಿ ವರ್ಕೌಟ್ ಆಗುತ್ತೆ ಅನ್ನೋದನ್ನ ಸ್ಪಷ್ಟವಾಗಿ ತಿಳಿದವರು. ಅಂತವರಲ್ಲಿ ಒಬ್ಬರು ಪ್ರಶಾಂತ್ ಕಿಶೋರ್.

Advertisment

ಪ್ರಶಾಂತ್ ಕಿಶೋರ್​ ನೇರವಾಗಿ ರಾಜಕೀಯ ಅಂಗಳಕ್ಕೆ ಈ ಹಿಂದೆ ಇಳಿದವರಲ್ಲ. ಆದ್ರೆ ರಣತಂತ್ರ ಹೆಣೆಯುವುದರಲ್ಲಿ ನಿಸ್ಸೀಮರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಮೂಲ ಕಾರಣ ಪ್ರಶಾಂತ್ ಕಿಶೋರ್ ಎಂದರೆ ಅದು ಅತಿಶೋಕ್ತಿಯಲ್ಲ. ಅವರ ರಣತಂತ್ರವೇ ಬಿಜೆಪಿ ಪಾಳಯಕ್ಕೆ ಬಲವಾಗಿ ಸಿಕ್ಕಿದ್ದು. ಈಗ ಬಿಹಾರದಲ್ಲಿ ತಮ್ಮದೇ ಒಂದು ಪಕ್ಷವನ್ನು ಕಟ್ಟಿ ಚುನಾವಣ ರಣತಂತ್ರದಿಂದ ನೇರವಾಗಿ ರಣರಂಗಕ್ಕೆ ಇಳಿದಿದ್ದಾರೆ. ಅಕ್ಟೋಬರ್ 2 ರಂದು ತಮ್ಮ ಜನ್ ಸೂರಜ್ ಪಕ್ಷವನ್ನು ಲಾಂಚ್ ಮಾಡಿರುವ ಪ್ರಶಾಂತ್ ಕಿಶೋರ್ ಈಗ ಇದೇ ನವೆಂಬರ್ 13 ರಂದು ನಡೆಯಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಇಳಿಸಿದ್ದಾರೆ. ಪ್ರಚಾರದ ವೇಳೆ ಒಂದು ದೊಡ್ಡ ಸತ್ಯವನ್ನು ಬಹಿರಂಗಗೊಳಿಸಿದ್ದಾರೆ. ಅವರು ಯಾವ ಪಕ್ಷಕ್ಕೆ ಅಥವಾ ಪಕ್ಷದ ಅಭ್ಯರ್ಥಿಗೆ ಚುನಾವಣಾ ಸಲಹೆಯನ್ನು ನೀಡುತ್ತಾರೋ ಅವರಿಂದ 100 ಕೋಟಿ ರೂಪಾಯಿ ಫೀಸ್ ಪಡೆಯುತ್ತಾರೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.

ಇದನ್ನೂ ಓದಿ: ​ದಂಗಲ್​ ಸ್ಟೈಲ್​ನಲ್ಲೇ ತಂದೆ ಆಸೆ ಈಡೇರಿಸಿದ ಹೆಣ್ಣುಮಕ್ಕಳು; ಕನಸುಗಳಿಗೆ ಸ್ಫೂರ್ತಿ ತುಂಬಿದ್ದು ಹೇಗೆ?

ಬೆಲಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದ ವೇಳೆ ಮಾತನಾಡಿದ ಕಿಶೋರ್, ನನ್ನ ಬಳಿ ದುಡ್ಡಿಲ್ಲ, ಪ್ರಚಾರ ಹೇಗೆ ಮಾಡ್ತಾನೆ ಎನ್ನುತ್ತಾರೆ. ನಾನು ಯಾವುದೇ ಪಾರ್ಟಿಗೆ ಚುನಾವಣೆ ಸಲಹೆ ನೀಡಿದರೆ ಅವರಿಂದ ನೂರು ಕೋಟಿ ರೂಪಾಯಿ ಹಣ ಪಡೆದುಕೊಳ್ಳುತ್ತೇನೆ. ದೇಶದಲ್ಲಿ ನನ್ನಿಂದ ರಾಜಕೀಯ ಸಲಹೆ ಪಡೆದ ಪಕ್ಷಗಳು ಒಟ್ಟು 10 ರಾಜ್ಯಗಳಲ್ಲಿ ಅಧಿಕಾರ ಹಿಡಿದಿವೆ.ಇದೇ ಚುನಾವಣಾ ಸಲಹೆ ನೀಡಿಯೇ ಮುಂದಿನ ಎರಡು ವರ್ಷಗಳಲ್ಲಿ ನಾನು ನನ್ನ ಪಕ್ಷಕ್ಕಾಗಿ ನಿಧಿ ಸಂಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ.

Advertisment

ಇದನ್ನೂ ಓದಿ:ಸದ್ಯದಲ್ಲಿಯೇ ತಟ್ಟಲಿದೆ ಬೆಲೆ ಏರಿಕೆಯ ಬಿಸಿ! ಯಾವೆಲ್ಲಾ ಕಂಪನಿಗಳ ಉತ್ಪನ್ನಗಳು ದುಬಾರಿಯಾಗಲಿವೆ?

ನಾನು ನನ್ನ ಪಕ್ಷ ಆರ್ಥಿಕವಾಗಿ ಬಲಹೀನರಿದ್ದೇವೆ ಎಂದು ಕೆಲವರು ತಿಳಿದಿದ್ದಾರೆ. ಆದ್ರೆ ನಾನು ನನ್ನ ಪಕ್ಷ ಗಟ್ಟಿಯಾಗಿಯೇ ಇದ್ದೇವೆ. ಕಳೆದ ಎರಡು ವರ್ಷದಿಂದ ನಾನು ರಾಜಕೀಯ ಪಕ್ಷ ಕಟ್ಟಲು ಹೋರಾಟ ನಡೆಸಿದ್ದೆ, ಆದ್ರೆ ಇತ್ತೀಚೆಗೆ ಚುನಾವಣಾ ಆಯೋಗದಿಂದ ಒಪ್ಪಿಗೆ ಸಿಕ್ಕಿದೆ. ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment