ಮನೆಗೆ ನೀರು ನುಗ್ಗಿದ್ರೆ 10,000 ಪರಿಹಾರ, ರಸ್ತೆಬದಿ ವಾಹನ ನಿಲ್ಲಿಸಿದ್ರೆ 21 ದಿನದ ನಂತರ ಹರಾಜು..!

author-image
Ganesh
ಮನೆಗೆ ನೀರು ನುಗ್ಗಿದ್ರೆ 10,000 ಪರಿಹಾರ, ರಸ್ತೆಬದಿ ವಾಹನ ನಿಲ್ಲಿಸಿದ್ರೆ 21 ದಿನದ ನಂತರ ಹರಾಜು..!
Advertisment
  • ಗ್ರೇಟರ್ ಬೆಂಗಳೂರು ಬಗ್ಗೆ 5 ಬಿಗ್​ ಅಪ್​ಡೇಟ್ಸ್​
  • ಟೌನ್​ಪ್ಲಾನ್​ನಲ್ಲಿ ಬೇಸ್​ಮೆಂಟ್ ಮಾಡುವಂತಿಲ್ಲ
  • ಕಾನೂನಿನಲ್ಲಿ ಪುಟ್​ಪಾತ್​ನಲ್ಲಿ ಅಂಗಡಿ ಹಾಕುವಂತಿಲ್ಲ

ವಿಧಾನಸೌಧ: ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆಯಿಂದ ಉಂಟಾಗಿರುವ ಹಾನಿ ಮತ್ತು ಬೆಂಗಳೂರು ಅಭಿವೃದ್ಧಿ ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.

ಈ ಸಭೆಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್ ಖಾನ್, ಕೆ.ಜೆ ಜಾರ್ಜ್, ಕೃಷ್ಣ ಬೈರೇಗೌಡ, ಬಿಡಿಎ ಅಧ್ಯಕ್ಷ ಎನ್.ಎ ಹ್ಯಾರೀಸ್, ಶಾಸಕರಾದ ಸತೀಶ್ ರೆಡ್ಡಿ, ಗೋಪಾಲಯ್ಯ, ಎಸ್.ಮುನಿರಾಜು, ಎಸ್.ಟಿ ಸೋಮಶೇಖರ್, ಉದಯ್ ಗರುಡಾಚಾರ್, ಮಂಜುಳಾ ಲಿಂಬಾವಳಿ, ಶ್ರೀನಿವಾಸ್, ಎಂ ಕೃಷ್ಣಪ್ಪ, ಸಂಸದ ಲೆಹರ್ ಸಿಂಗ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಭಾಗಿ ಆಗಿದ್ದರು. ಸಭೆ ಬಳಿಕ ಡಿಕೆ ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿ, ಮಹತ್ವದ ವಿಚಾರಗಳನ್ನು ತಿಳಿಸಿದರು.

ಇದನ್ನೂ ಓದಿ: ವಿಮಾನಗಳ ಕಿಟಕಿಯಲ್ಲಿ ವಿಡಿಯೋ ರೆಕಾರ್ಡ್ ಮಾಡದಂತೆ DGCA ಆದೇಶ; ಕಾರಣವೇನು?

  1. ಫುಟ್​ಪಾತ್: ಇಡೀ ಬೆಂಗಳೂರಲ್ಲಿ ಫುಟ್​ಪಾತ್ ವ್ಯಾಪಾರವನ್ನು ನಿಲ್ಲಿಸುತ್ತೇವೆ. ನಾವು ಹೇಳಿದ ಜಾಗದಲ್ಲಿ ಮಾತ್ರವೇ ವ್ಯಾಪಾರ ಮಾಡಬೇಕು. 3755 ಜನರು ತಳ್ಳುವ ಗಾಡಿ ಕೇಳಿದ್ದಾರೆ. ಕಾನೂನಿನಲ್ಲಿ ಪುಟ್​ಪಾತ್​ನಲ್ಲಿ ಅಂಗಡಿ ಹಾಕುವಂತಿಲ್ಲ. ಹೀಗಾಗಿ ಪ್ಲಾನ್ ಆಫ್ ಆ್ಯಕ್ಸನ್ ಅಂಗಡಿ ಹಾಕಲು ಅವಕಾಶ ಮಾಡಿಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
  2. ಬೇಸ್​ಮೆಂಟ್ ಮಾಡಂಗಿಲ್ಲ: ಟೌನ್​ಪ್ಲಾನ್​ನಲ್ಲಿ ಬೇಸ್​ಮೆಂಟ್ ಮಾಡುವಂತಿಲ್ಲ. ಈಗಾಗಲೇ ಬಹಳಷ್ಟು ಕಡೆ ಪಾರ್ಕಿಂಗ್​ಗಾಗಿ ಬೇಸ್​ಮೆಂಟ್ ಮಾಡಿದ್ದಾರೆ.
  3.  ಇ-ಖಾತಾ: ಬೆಂಗಳೂರು ನಗರದ ಆಸ್ತಿಗಳಿಗೆ ಇ-ಖಾತಾ ಮಾಡಲು ಹೇಳಿದ್ದೇನೆ. ಡಿಜಿಟಲಿಕರಣ ಮೂಲಕ ದಾಖಲೆ ನೀಡಲು ಮುಂದಾಗಿದ್ದೇವೆ. ಇ-ಖಾತೆಯಲ್ಲಿ ಬೆಂಗಳೂರಿನ ಜನರಿಗೆ ಆಸ್ತಿಗಳ ದಾಖಲೆಯನ್ನು ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
  4. 10 ಸಾವಿರ ರೂಪಾಯಿ: ಮನೆಯಲ್ಲಿ ನೀರು ನುಗ್ಗಿದರೆ ಪರಿಹಾರ ನೀಡುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ.
  5. ರೋಡ್​ಸೈಡ್ ವಾಹನ: ಯಾವುದೇ ಕಾರಣಕ್ಕೂ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವಂತಿಲ್ಲ. ಆ ವಾಹನಗಳನ್ನು ಟ್ರಾಫಿಕ್ ಪೊಲೀಸರು ತೆಗೆದುಕೊಂಡು ಹಾಕ್ತಾರೆ. ಆಕಸ್ಮಾತ್ ವಾಹನಗಳನ್ನು ಮಾಲೀಕರು ತೆಗೆದುಕೊಂಡು ಹೋಗದೇ ಇದ್ದರೆ 21 ದಿನಗಳಲ್ಲಿ ಹರಾಜು ಹಾಕ್ತೀವಿ.

ಇದನ್ನೂ ಓದಿ: ಇಡೀ ಬೆಂಗಳೂರಲ್ಲಿ ಫುಟ್​ಪಾತ್​ ವ್ಯಾಪಾರ ನಿಲ್ಲಿಸುತ್ತೇವೆ -ಡಿ.ಕೆ.ಶಿವಕುಮಾರ್ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment