₹12 ಲಕ್ಷ ಆದಾಯ ತೆರಿಗೆ ವಿನಾಯಿತಿ.. ಇದರಿಂದ ಯಾರಿಗೆಲ್ಲಾ ಲಾಭ? ಅಧಿಕೃತ ಟ್ಯಾಕ್ಸ್‌ ಪಟ್ಟಿ ಇಲ್ಲಿದೆ!

author-image
admin
Updated On
₹12 ಲಕ್ಷ ಆದಾಯ ತೆರಿಗೆ ವಿನಾಯಿತಿ.. ಇದರಿಂದ ಯಾರಿಗೆಲ್ಲಾ ಲಾಭ? ಅಧಿಕೃತ ಟ್ಯಾಕ್ಸ್‌ ಪಟ್ಟಿ ಇಲ್ಲಿದೆ!
Advertisment
  • 12 ಲಕ್ಷ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ!
  • 12 ಲಕ್ಷ ಮೇಲ್ಪಟ್ಟವರು ಹೊಸ ತೆರಿಗೆಯ 4 ಸ್ಲ್ಯಾಬ್ಸ್‌ಗಳಿಗೆ ಒಳಪಡುತ್ತಾರೆ
  • ಹೊಸ ತೆರಿಗೆ ನೀತಿಯಿಂದ ನೀವು ಎಷ್ಟು ಹಣ ಉಳಿಸಬಹುದು

2025ನೇ ಸಾಲಿನ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಮಧ್ಯಮ ಕುಟುಂಬ ಹಾಗೂ ಸಂಬಳ ಪಡೆಯೋ ಅತಿ ದೊಡ್ಡ ವರ್ಗಕ್ಕೆ ಬಿಗ್ ರಿಲೀಫ್ ಕೊಟ್ಟಿದ್ದಾರೆ. 12 ಲಕ್ಷದ ಆದಾಯ ಇರುವವರು ಯಾವುದೇ ತೆರಿಗೆ ಕಟ್ಟುವಂತಿಲ್ಲ ಅನ್ನೋ ಮಹತ್ವದ ಘೋಷಣೆ ಮಾಡಿದ್ದಾರೆ. ಇದರಿಂದ ಯಾರಿಗೆಲ್ಲಾ ಲಾಭ ಆಗಲಿದೆ. ಹೊಸ ತೆರಿಗೆ ನೀತಿಯಿಂದ ಸ್ಯಾಲರಿ ಪಡೆಯುವವರು ಎಷ್ಟು ಹಣ ಉಳಿಸಬಹುದು ಅನ್ನೋ ಮಾಹಿತಿ ಉದಾಹರಣೆಯ ಸಮೇತ ಇಲ್ಲಿದೆ ಮುಂದೆ ಓದಿ.

ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಯಾರೂ ಕೂಡ 12 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತೆ ಅನ್ನೋದನ್ನ ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಐತಿಹಾಸಿಕ ನಿರ್ಧಾರವನ್ನೇ ಪ್ರಕಟಿಸಿ ಗಮನ ಸೆಳೆದಿದ್ದಾರೆ.

publive-image

2024-25ನೇ ಸಾಲಿನ ಬಜೆಟ್‌ನಲ್ಲಿ 3 ಲಕ್ಷ ರೂಪಾಯಿವರೆಗೂ ಆದಾಯದಾರರಿಗೆ ತೆರಿಗೆ ಇರಲಿಲ್ಲ. 2025-26ನೇ ಸಾಲಿನ ಬಜೆಟ್‌ನಲ್ಲಿ 3 ಲಕ್ಷದ ಮಿತಿಯನ್ನು 4 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ನಷ್ಟ ಆದರೂ ದೇಶದ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ವಿನಾಯಿತಿಯಿಂದ ಬಹಳ ದೊಡ್ಡ ಪ್ರಯೋಜನವಾಗುತ್ತಿದೆ. ಅದು ಹೇಗೆ ಅನ್ನೋದನ್ನ ಉದಾಹರಣೆ ಸಮೇತ ವಿವರಿಸಿದ್ರೆ ಚೆನ್ನಾಗಿ ಅರ್ಥವಾಗುತ್ತೆ.

ಹೊಸ ತೆರಿಗೆ ನೀತಿಯ ಸ್ಲ್ಯಾಬ್‌ ಹೇಗೆ?
ಉದಾಹರಣೆಗೆ ನೀವು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ರೆ ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಆಗುತ್ತದೆ. ಹೊಸ ತೆರಿಗೆ ನೀತಿಯ ಅನ್ವಯ 12 ಲಕ್ಷ ಆದಾಯ ಇರುವ ನೀವು ಯಾವುದೇ ಆದಾಯ ತೆರಿಗೆಯನ್ನು ಕಟ್ಟುವಂತಿಲ್ಲ.


">February 1, 2025

ವೈಯಕ್ತಿಕವಾಗಿ ದುಡಿಯುವ ಉದ್ಯೋಗಿಗಳು ವಾರ್ಷಿಕವಾಗಿ ₹12 ಲಕ್ಷ 75 ಸಾವಿರ ಆದಾಯ ಹೊಂದಿದ್ದರು ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ. 75 ಸಾವಿರ ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡು ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. 12 ಲಕ್ಷದಿಂದ 16 ಲಕ್ಷ ರೂಪಾಯಿ ಆದಾಯ ಹೊಂದಿರುವವರು ಹೊಸ ತೆರಿಗೆ ನೀತಿಯಲ್ಲಿ ಶೇಕಡಾ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

publive-image

ಹೊಸ ಆದಾಯ ತೆರಿಗೆ ನೀತಿಯಲ್ಲಿ ಯಾರ್ ಯಾರು ಎಷ್ಟು ಹಣ ಉಳಿತಾಯ ಮಾಡಬಹುದು ಅನ್ನೋ ಅಂಕಿ ಅಂಶವನ್ನು ಆದಾಯ ತೆರಿಗೆ ಇಲಾಖೆಯೇ ಅಂಕಿ-ಅಂಶದ ಸಮೇತ ಬಿಡುಗಡೆ ಮಾಡಿದೆ. ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರೋ ಲೆಕ್ಕಾಚಾರದ ಪ್ರಕಾರ 12 ಲಕ್ಷ ರೂಪಾಯಿ ಆದಾಯ ಹೊಂದಿರುವವರು ತೆರಿಗೆ ವಿನಾಯಿತಿ ಪಡೆಯುತ್ತಾರೆ.

13 ಲಕ್ಷ ರೂಪಾಯಿ ಸಂಬಳ ಪಡೆಯುವ ನೌಕರರು ಹೊಸ ತೆರಿಗೆಯ 4 ಸ್ಲ್ಯಾಬ್ಸ್‌ಗಳಿಗೆ ಒಳಪಡುತ್ತಾರೆ. ಅಂದರೆ 4-8 ಲಕ್ಷದ ಆದಾಯಕ್ಕೆ ಶೇಕಡಾ 5ರಷ್ಟು ಅಂದ್ರೆ 20 ಸಾವಿರ ರೂಪಾಯಿ ತೆರಿಗೆ ಕಟ್ಟಬೇಕು. ನಂತರ 8-12 ಲಕ್ಷದ ಆದಾಯಕ್ಕೆ ಶೇಕಡಾ 10ರಷ್ಟು ಅಂದ್ರೆ 40 ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡಬೇಕು. 12 ಲಕ್ಷದ ಮೇಲ್ಪಟ್ಟ 1 ಲಕ್ಷ ರೂಪಾಯಿಗೆ ಶೇಕಡಾ 15ರಷ್ಟು ಅಂದ್ರೆ 15 ಸಾವಿರ ರೂಪಾಯಿ ತೆರಿಗೆ ಸೇರುತ್ತದೆ. 13 ಲಕ್ಷ ರೂಪಾಯಿ ಸಂಬಳ ಪಡೆಯುವವರು ಒಟ್ಟಾರೆ 75 ಸಾವಿರ ರೂಪಾಯಿ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ 12 ಲಕ್ಷವರೆಗೆ ವಿನಾಯಿತಿ.. ಜನರಿಗೆ ಏನು ಲಾಭ..? ಹೂಡಿಕೆ ತಜ್ಞರು ಹೇಳೋದು ಏನು? 

ಕೇಂದ್ರ ಸರ್ಕಾರಕ್ಕೆ ಎಷ್ಟು ಕೋಟಿ ನಷ್ಟ?
ಈ ಆದಾಯ ತೆರಿಗೆ ವಿನಾಯಿತಿಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿ ರೂಪಾಯಿ ನಷ್ಟ ಆಗುತ್ತಿದೆ. ಆದರೆ 12 ಲಕ್ಷದ ಆದಾಯದಾರರಿಗೆ ತೆರಿಗೆ ವಿನಾಯಿತಿ ನೀಡುವುದರಿಂದ ದೇಶದಲ್ಲಿ ಉಳಿತಾಯದ ಪ್ರಮಾಣ ಹೆಚ್ಚಾಗುತ್ತದೆ. ಉಳಿತಾಯ ಜಾಸ್ತಿಯಾದ್ರೆ ಹೂಡಿಕೆ ಮಾಡುವುದು ಜಾಸ್ತಿಯಾಗುತ್ತೆ. ಇದರ ಜೊತೆಗೆ ಹೋಟೆಲ್, ಪ್ರವಾಸ, ಟೂರ್ಸ್‌ ಅಂಡ್ ಟ್ರಾವೆಲ್ಸ್ ಉದ್ಯಮಕ್ಕೆ ಇದರಿಂದ ಅತಿ ಹೆಚ್ಚು ಉತ್ತೇಜನ ಸಿಗಲಿದೆ. ಇಷ್ಟೇ ಅಲ್ಲದೇ ಷೇರು ಮಾರುಕಟ್ಟೆಯಲ್ಲೂ ಜನಸಾಮಾನ್ಯರು ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೂಡಿಕೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment