₹12 ಲಕ್ಷಕ್ಕೆ ತೆರಿಗೆ ವಿನಾಯಿತಿ.. ₹15 ಲಕ್ಷ, ₹20 ಲಕ್ಷ, ₹25 ಲಕ್ಷ, ₹35 ಲಕ್ಷ, ₹45 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು?

author-image
admin
Updated On
ಪಾಕಿಸ್ತಾನದ ಕಂಪನಿ ಭಾರತದ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದೆಯೇ..? Electoral Bondನ ಸತ್ಯಾಸತ್ಯತೆ ಬಹಿರಂಗ..!
Advertisment
  • ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ರೆ
  • ಹೊಸ ತೆರಿಗೆ ನೀತಿಯ ಅನ್ವಯ ಆದಾಯ ತೆರಿಗೆಯನ್ನು ಕಟ್ಟುವಂತಿಲ್ಲ
  • ₹12 ಲಕ್ಷ 75 ಸಾವಿರ ಆದಾಯ ಹೊಂದಿದ್ದರು ತೆರಿಗೆ ವಿನಾಯಿತಿ ಲಭ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಹೊಸ ಆದಾಯ ತೆರಿಗೆ ನೀತಿ ದೇಶಾದ್ಯಂತ ಸಂಚಲನ ಮೂಡಿಸಿದೆ. 2025ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಧ್ಯಮ ವರ್ಗದವರು 12 ಲಕ್ಷ ರೂಪಾಯಿ ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆದ್ರೆ ಉಳಿದವರು ಎಷ್ಟು ಆದಾಯ ತೆರಿಗೆ ಕಟ್ಟಬೇಕು ಅನ್ನೋ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.

ಹೊಸ ತೆರಿಗೆಯಲ್ಲಿ ಯಾರಿಗೆ ರಿಲೀಫ್‌!
ನೀವು ತಿಂಗಳಿಗೆ 1 ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗಿಗಳಾಗಿದ್ರೆ ನಿಮ್ಮ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಆಗುತ್ತದೆ. ಹೊಸ ತೆರಿಗೆ ನೀತಿಯ ಅನ್ವಯ 12 ಲಕ್ಷ ಆದಾಯ ಇರುವ ನೀವು ಯಾವುದೇ ಆದಾಯ ತೆರಿಗೆಯನ್ನು ಕಟ್ಟುವಂತಿಲ್ಲ.

publive-image

ವೈಯಕ್ತಿಕವಾಗಿ ದುಡಿಯುವ ಉದ್ಯೋಗಿಗಳು ವಾರ್ಷಿಕವಾಗಿ ₹12 ಲಕ್ಷ 75 ಸಾವಿರ ಆದಾಯ ಹೊಂದಿದ್ದರು ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ. 75 ಸಾವಿರ ರೂಪಾಯಿ ಸ್ಟ್ಯಾಂಡರ್ಡ್ ಡಿಡಕ್ಷನ್ ಒಳಗೊಂಡು ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ. 12 ಲಕ್ಷದಿಂದ 16 ಲಕ್ಷ ರೂಪಾಯಿ ಆದಾಯ ಹೊಂದಿರುವವರು ಹೊಸ ತೆರಿಗೆ ನೀತಿಯಲ್ಲಿ ಶೇಕಡಾ 15ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

₹15 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು?
15 ಲಕ್ಷ ರೂಪಾಯಿ ಆದಾಯದಾರರು ಹೊಸ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡರೆ 4 ಲಕ್ಷದ ಒಂದು ರೂಪಾಯಿಯಿಂದ 15 ಲಕ್ಷರೂಪಾಯಿವರೆಗಿನ 3 ಟ್ಯಾಕ್ಸ್‌ ಸ್ಲ್ಯಾಬ್‌ಗಳಿಗೆ ಒಳಪಡಬೇಕಾಗುತ್ತದೆ. 4-8 ಲಕ್ಷದವರೆಗೆ ಶೇಕಡಾ 4 ರಷ್ಟು, 8-12 ಲಕ್ಷದವರೆಗೆ ಶೇಕಡಾ 10ರಷ್ಟು, 12-16 ಲಕ್ಷದ ಆದಾಯಕ್ಕೆ ಶೇಕಡಾ 15ರಷ್ಟು ತೆರಿಗೆ ಕಟ್ಟಬೇಕು. ಅಂದ್ರೆ 15 ಲಕ್ಷ ರೂಪಾಯಿ ವಾರ್ಷಿಕ ಆದಾಯದಾರರು 85 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕು.

₹20 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು?
20 ಲಕ್ಷ ರೂಪಾಯಿ ಆದಾಯ ಹೊಂದಿದವರು ಹೊಸ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡರೆ 4 ಲಕ್ಷದ ಒಂದು ರೂಪಾಯಿಯಿಂದ 20 ಲಕ್ಷರೂಪಾಯಿವರೆಗಿನ 4 ಟ್ಯಾಕ್ಸ್‌ ಸ್ಲ್ಯಾಬ್‌ಗಳಿಗೆ ಒಳಪಡಬೇಕಾಗುತ್ತದೆ. 4-8 ಲಕ್ಷದವರೆಗೆ ಶೇಕಡಾ 4 ರಷ್ಟು, 8-12 ಲಕ್ಷದವರೆಗೆ ಶೇಕಡಾ 10ರಷ್ಟು, 12-16 ಲಕ್ಷದ ಆದಾಯಕ್ಕೆ ಶೇಕಡಾ 15ರಷ್ಟು, 16-20 ಲಕ್ಷದ ಆದಾಯಕ್ಕೆ ಶೇಕಡಾ 20ರಷ್ಟು ತೆರಿಗೆ ಕಟ್ಟಬೇಕು. ಅಂದ್ರೆ 2 ಲಕ್ಷ ರೂಪಾಯಿ ವೈಯಕ್ತಿಕ ಆದಾಯ ತೆರಿಗೆ ಪಾವತಿಸಬೇಕು.

publive-image

₹25 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು?
25 ಲಕ್ಷ ರೂಪಾಯಿ ಆದಾಯ ಹೊಂದಿದವರು ಹೊಸ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡರೆ 4 ಲಕ್ಷದ ಒಂದು ರೂಪಾಯಿಯಿಂದ 25 ಲಕ್ಷರೂಪಾಯಿವರೆಗಿನ 6 ಟ್ಯಾಕ್ಸ್‌ ಸ್ಲ್ಯಾಬ್‌ಗಳಿಗೆ ಒಳಪಡಬೇಕಾಗುತ್ತದೆ. 4-8 ಲಕ್ಷದವರೆಗೆ ಶೇಕಡಾ 4 ರಷ್ಟು, 8-12 ಲಕ್ಷದವರೆಗೆ ಶೇಕಡಾ 10ರಷ್ಟು, 12-16 ಲಕ್ಷದ ಆದಾಯಕ್ಕೆ ಶೇಕಡಾ 15ರಷ್ಟು, 16-20 ಲಕ್ಷದ ಆದಾಯಕ್ಕೆ ಶೇಕಡಾ 20ರಷ್ಟು, 20-24 ಲಕ್ಷದ ಆದಾಯಕ್ಕೆ ಶೇಕಡಾ 25ರಷ್ಟು, 24-25 ಲಕ್ಷದ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ಕಟ್ಟಬೇಕು. ಅಂದ್ರೆ 25 ಲಕ್ಷ ರೂಪಾಯಿ ಆದಾಯಕ್ಕೆ 3 ಲಕ್ಷದ 30 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕು.

ಇದನ್ನೂ ಓದಿ: ₹12 ಲಕ್ಷ ಆದಾಯ ತೆರಿಗೆ ವಿನಾಯಿತಿ.. ಇದರಿಂದ ಯಾರಿಗೆಲ್ಲಾ ಲಾಭ? ಅಧಿಕೃತ ಟ್ಯಾಕ್ಸ್‌ ಪಟ್ಟಿ ಇಲ್ಲಿದೆ! 

₹35 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು? 
35 ಲಕ್ಷ ರೂಪಾಯಿ ಆದಾಯ ಹೊಂದಿದವರು ಹೊಸ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡರೆ 4 ಲಕ್ಷದ ಒಂದು ರೂಪಾಯಿಯಿಂದ 35 ಲಕ್ಷರೂಪಾಯಿವರೆಗಿನ 6 ಟ್ಯಾಕ್ಸ್‌ ಸ್ಲ್ಯಾಬ್‌ಗಳಿಗೆ ಒಳಪಡಬೇಕಾಗುತ್ತದೆ. 4-8 ಲಕ್ಷದವರೆಗೆ ಶೇಕಡಾ 4 ರಷ್ಟು, 8-12 ಲಕ್ಷದವರೆಗೆ ಶೇಕಡಾ 10ರಷ್ಟು, 12-16 ಲಕ್ಷದ ಆದಾಯಕ್ಕೆ ಶೇಕಡಾ 15ರಷ್ಟು, 16-20 ಲಕ್ಷದ ಆದಾಯಕ್ಕೆ ಶೇಕಡಾ 20ರಷ್ಟು, 20-24 ಲಕ್ಷದ ಆದಾಯಕ್ಕೆ ಶೇಕಡಾ 25ರಷ್ಟು, 24-25 ಲಕ್ಷದ ಆದಾಯಕ್ಕೆ ಶೇಕಡಾ 30ರಷ್ಟು, 24-35 ಲಕ್ಷದ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ಕಟ್ಟಬೇಕು. ಅಂದ್ರೆ 35 ಲಕ್ಷ ರೂಪಾಯಿ ಆದಾಯಕ್ಕೆ 6 ಲಕ್ಷದ 60 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕು.

₹45 ಲಕ್ಷ ಆದಾಯಕ್ಕೆ ಎಷ್ಟು ಕಟ್ಟಬೇಕು?
45 ಲಕ್ಷ ರೂಪಾಯಿ ಆದಾಯ ಹೊಂದಿದವರು ಹೊಸ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಂಡರೆ 4 ಲಕ್ಷದ ಒಂದು ರೂಪಾಯಿಯಿಂದ 45 ಲಕ್ಷರೂಪಾಯಿವರೆಗಿನ 6 ಟ್ಯಾಕ್ಸ್‌ ಸ್ಲ್ಯಾಬ್‌ಗಳಿಗೆ ಒಳಪಡಬೇಕಾಗುತ್ತದೆ. 4-8 ಲಕ್ಷದವರೆಗೆ ಶೇಕಡಾ 4 ರಷ್ಟು, 8-12 ಲಕ್ಷದವರೆಗೆ ಶೇಕಡಾ 10ರಷ್ಟು, 12-16 ಲಕ್ಷದ ಆದಾಯಕ್ಕೆ ಶೇಕಡಾ 15ರಷ್ಟು, 16-20 ಲಕ್ಷದ ಆದಾಯಕ್ಕೆ ಶೇಕಡಾ 20ರಷ್ಟು, 20-24 ಲಕ್ಷದ ಆದಾಯಕ್ಕೆ ಶೇಕಡಾ 25ರಷ್ಟು, 24-45 ಲಕ್ಷದ ಆದಾಯಕ್ಕೆ ಶೇಕಡಾ 30ರಷ್ಟು ತೆರಿಗೆ ಕಟ್ಟಬೇಕು. ಅಂದ್ರೆ 45 ಲಕ್ಷ ರೂಪಾಯಿ ಆದಾಯಕ್ಕೆ 9 ಲಕ್ಷದ 80 ಸಾವಿರ ರೂಪಾಯಿ ತೆರಿಗೆ ಪಾವತಿಸಬೇಕು.
ಈ ಆದಾಯ ತೆರಿಗೆ ಮೊತ್ತವು ಆರೋಗ್ಯ ಮತ್ತು ಶಿಕ್ಷಣ ಸೆಸ್ ಅನ್ನು ಹೊರತುಪಡಿಸಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment