/newsfirstlive-kannada/media/post_attachments/wp-content/uploads/2023/09/Nitin-Gadkari.jpg)
ಭಾರತದ ಎಲೆಕ್ಟ್ರಿಕ್ ವಾಹನಗಳ (ಇವಿ) ಕ್ಷೇತ್ರವು ಮುಂದಿನ ಐದು ವರ್ಷದಲ್ಲಿ ವೇಗವಾಗಿ ಬೆಳೆಯಲಿದೆ. 2030ರ ವೇಳೆಗೆ 20 ಲಕ್ಷ ಕೋಟಿ ರೂ.ಗೆ ತಲುಪುವ ಸಾಧ್ಯತೆ ಇದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.
ಜೊತೆಗೆ ಉದ್ಯೋಗ ಸೃಷ್ಟಿಯೂ ದುಪಟ್ಟು ಆಗಲಿದೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಇನ್ನೂ ಶೈಶವಾವಸ್ಥೆಯಲ್ಲಿದೆ. ಒಟ್ಟು ವಾಹನಗಳ ಮಾರಾಟ ವಿಚಾರದಲ್ಲಿ ಏಕ ಅಂಕಿ ಮಾರುಕಟ್ಟೆಯಲ್ಲಿದೆ. ಈ ವರ್ಷದ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 18 ಲಕ್ಷಕ್ಕೂ ಹೆಚ್ಚು ಇವಿಗಳ ನೋಂದಣಿ ಆಗಿದೆ. ಇದು ಒಟ್ಟು ವಾಹನ ಮಾರಾಟದ ಶೇಕಡಾ 10ಕ್ಕಿಂತ ಕಡಿಮೆ ಎಂದಿದ್ದಾರೆ.
ಇದನ್ನು ಓದಿ:Wireless ಚಾರ್ಜಿಂಗ್! ಒಂದು ಫೋನ್ನಿಂದ ಮತ್ತೊಂದು ಫೋನ್ ಚಾರ್ಜ್ ಮಾಡೋದು ಹೇಗೆ..?
ಆದರೆ 2030ರ ವೇಳೆಗೆ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ. ಇವಿ ತನ್ನ ಕ್ಷೇತ್ರದಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಉದ್ಯೋಗಗಳನ್ನ ಸೃಷ್ಟಿಸಿಕೊಳ್ಳಲಿದೆ. ಅದರ ಪ್ರಸ್ತುತ ಮಾರುಕಟ್ಟೆಯ ವಹಿವಾಟು 4.50 ಲಕ್ಷ ಕೋಟಿ ರೂಪಾಯಿ ಆಗಿದ್ದು, 20230ರ ವೇಳೆಗೆ ಅದು 20 ಲಕ್ಷ ಕೋಟಿಗೆ ತಲುಪಲಿದೆ. ಭವಿಷ್ಯದಲ್ಲಿ ‘ಜಾಗತಿಕ ಇವಿ ಹಬ್’ ಆಗುವ ಗುರಿ ಹೊಂದಲಾಗಿದೆ ಎಂದಿದ್ದಾರೆ.
EV ವಾಹನ ಉದ್ಯಮದ ಸುಸ್ಥಿರತೆ- EVExpo 2024 ಸಮ್ಮೇಳನದಲ್ಲಿ ಗಡ್ಕರಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವಾಯುಮಾಲಿನ್ಯದಲ್ಲಿ ಶೇ.40ರಷ್ಟು ಸಾರಿಗೆ ವಲಯದಿಂದ ದಾಖಲಾಗಿದೆ. ಪಳೆಯುಳಿಕೆ ಇಂಧನಗಳ ಆಮದು 22 ಲಕ್ಷ ಕೋಟಿಯ ಮಟ್ಟ ತಲುಪಿದೆ. ಇದು ದೇಶದ ಆರ್ಥಿಕತೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಹಸಿರು ಇಂಧನಕ್ಕೆ ಒತ್ತು ನೀಡುತ್ತಿದೆ ಎಂದರು.
ಇದನ್ನೂ ಓದಿ:ಗ್ರಾಹಕರಿಗೆ ಗುಡ್ನ್ಯೂಸ್ ಕೊಟ್ಟ Jio.. ಬಂದಿದೆ ಹೊಚ್ಚ ಹೊಸ 3 ತಿಂಗಳ ಪ್ಲಾನ್, ಟ್ರೈ ಮಾಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ