/newsfirstlive-kannada/media/post_attachments/wp-content/uploads/2025/03/VIMAL-PAAN-MASALA.jpg)
ಗುಟ್ಕಾ, ಪಾನ್ ಮಸಾಲಾ ಬ್ರ್ಯಾಂಡ್​ನ ಪ್ರಮೋಷನ್ ಮಾಡಿರುವ ಬಾಲಿವುಡ್ ನಟರಾದ ಶಾರುಖ್​ ಖಾನ್, ಅಜಯ್ ದೇವಗನ್ ಮತ್ತು ಟೈಗರ್​ ಶರಾಫ್​ ಸೇರಿ ವಿಮಲ್ ಪಾನ್​ ಮಸಾಲಾ ಮಾಲೀಕತ್ವದ ಜೆಬಿ ಇಂಡಸ್ಟ್ರೀಸ್​​ಗೂ ಕೂಡ ಲೀಗಲ್ ನೋಟಿಸ್ ಜಾರಿ ಮಾಡಲಾಗಿಗಿದೆ. ಜೈಪುರದ ಜಿಲ್ಲಾ ವ್ಯಾಜ್ಯ ಪರಿಹಾರ ಆಯೋಗ ಜನರ ದಾರಿ ತಪ್ಪಿಸುವ ಜಾಹಿರಾತು ನೀಡಿರುವುದರ ಬಗ್ಗೆ ಸ್ಪಷ್ಟನೆ ಕೇಳಿ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಆಯೋಗದ ಚೇರಮನ್​ ಆಗಿರುವ ಗ್ಯಾರಸಿಲಾಲ್ ಮೀನಾ ಮತ್ತು ಸದಸ್ಯ ಹೇಮಲತಾ ಅಗರವಾಲ್ ಈ ಒಂದು ಆದೇಶವನ್ನು ನೀಡಿದೆ. ಮಾರ್ಚ್​ 19ರಂದು ಆಯೋಗದ ಮುಂದೆ ಹಾಜರಾಗುವಂತೆ, ಪಾನ್ ಮಸಾಲದಲ್ಲಿ ಕೇಸರಿ ಇರುವ ಬಗ್ಗೆ ಸುಳ್ಳು ಮಾಹಿತಿ ಹರಡಿಸುತ್ತಿರುವ ಬಗ್ಗೆ ಈ ನಾಲ್ವರ ವಿರುದ್ಧ ಕೇಸ್ ದಾಖಲಾಗಿದೆ.
ದಾರಿ ತಪ್ಪಿಸುವ ಪಾನ್​ ಮಸಾಲ ಕೇಸ್ ಏನಿದು?
ಜೈಪುರದ ವಕೀಲರಾದ ಯೋಗೇಂದ್ರ ಸಿಂಗ್​ ಬದಿಯಾಲ್ ಎನ್ನುವವರು ಒಂದು ಅರ್ಜಿಯನ್ನು ಸಲ್ಲಿಸಿದ್ದರು. ಅದು ವಿಮಲ್ ಪಾನ್ ಮಸಲಾದಲ್ಲಿ ಬರುವ ಕಣ ಕಣದಲ್ಲೂ ಕೇಸರಿ ಎಂಬ ಹೇಳಿಕೆ ಕುರಿತು ಆಕ್ಷೇಪಣೆ ಮಾಡಿ 68 ವಯಸ್ಸಿನ ವಕೀಲರು, ಕೇಸರಿಯ ಹೆಸರಲ್ಲಿ ವಿಮಲ್ ಪಾನ್ ಮಸಾಲಾ ಮಾರಾಟ ಮಾಡಲಾಗುತ್ತಿದೆ. ಇದು ಅಕ್ಷರಶಃ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಎಂದು ತಮ್ಮ ಅರ್ಜಿಯಲ್ಲಿ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರು ಆರೋಪಿಸುತ್ತಿರುವುದು ಜಾಹಿರಾತಿನ ಪ್ರಕಾರ ಅದರಲ್ಲಿ ಭಾಗಿಯಾಗಿರುವ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಪಾನ್ ಮಸಾಲದಲ್ಲಿ ಕೇಸರಿಯಿದೆ, ಅದು ಕೂಡ ಕಣ ಕಣದಲ್ಲಿ ಎಂದು ಹೇಳುತ್ತಾರೆ. ಆದ್ರೆ 5 ರೂಪಾಯಿ ಬೆಲೆಯ ಪಾನ್ ಮಸಾಲದಲ್ಲಿ 4 ಲಕ್ಷ ರೂಪಾಯಿಗೆ ಒಂದು ಕೆಜಿ ಮಾರಾಟವಾಗುವ ಕೇಸರಿ ಹೇಗೆ ಇರಲು ಸಾಧ್ಯ ಎಂದು ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮದುವೆಗೆ ಮುನ್ನವೇ ಇಲ್ಲಿ ಜೋಡಿಗಳ ಮೊದಲ ರಾತ್ರಿ ನಡೆಯುತ್ತೆ.. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಲ್ಲ, ನಮ್ಮದೇ ದೇಶದಲ್ಲಿ!
ಇದು ಅಕ್ಷರಶಃ ಜನರನ್ನು ಹಾದಿ ತಪ್ಪಿಸುವ ಹಾಗೂ ಆ ತಂಬಾಕು ಬೆರೆತ ಈ ಉತ್ಪನ್ನವನ್ನು ಸಾರ್ವಜನಿಕರಿಗೆ ಸೇವಿಸಲು ಪ್ರಚೋದಿಸುವ ಕಾರ್ಯವಿದು.ಇದರಿಂದ ಕೇವಲ ಉತ್ಪಾದಕರಿಗೆ ಲಾಭ ಹೊರತು ಸಾರ್ವಜನಿಕರ ಆರೋಗ್ಯಕ್ಕೆ ದೊಡ್ಡ ಸಮಸ್ಯೆ ತಂದಿಡುವ ಕೆಲಸ ಎಂದು ಆರೋಪಿಸಿದ್ದಾರೆ.
ಯೋಗೇಂದ್ರ ಸಿಂಗ್ ಬದಿಯಾಲ ಅವರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗ ಮಾರ್ಚ್ 19ಕ್ಕೆ ಅಜಯ್ ದೇವಗನ್, ಶಾರುಖ್ ಖಾನ್ ಹಾಗೂ ಟೈಗರ್ ಶ್ರಾಪ್​ರನ್ನು ಆಯೋಗದ ಮುಂದೆ ಬಂದು ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us