/newsfirstlive-kannada/media/post_attachments/wp-content/uploads/2024/12/mysore_sandal_1.jpg)
ಶ್ರೀಗಂಧದ ಪರಿಮಳವನ್ನು ಸೂಸುವ ಮೈಸೂರು ಸೋಪ್ ತಯಾರಿಕೆಯಲ್ಲಿ ಈಗಾಗಲೇ ಹೆಸರು ಮಾಡಿರುವ ಕೆಎಸ್ ಮತ್ತು ಡಿಎಲ್ ಈಗ ದೇಶದ ದುಬಾರಿ ಸೋಪ್ ತಯಾರಿಕೆಗೆ ಪ್ಲಾನ್ ರೂಪಿಸಿದೆ. ಇದಿಷ್ಟೇ ಅಲ್ಲ, ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಕಲು ಮಾಡುವವರಿಗೆ ಚಾಟಿಯೇಟು ಬೀಸಲು ನಯಾ ಯೋಜನೆ ರೂಪಿಸಿದೆ.
ದೇಶದ ದುಬಾರಿ ಸೋಪ್ ಕೆಎಸ್ ಮತ್ತು ಡಿಎಲ್ನಿಂದ ತಯಾರಿ
ಮೈಸೂರು ಸ್ಯಾಂಡಲ್ ಸೋಪ್ ಈಗಾಗಲೇ ಕರ್ನಾಟಕದಲ್ಲಿ ಎಲ್ಲರ ಫೇವರಿಟ್. ಶ್ರೀಗಂಧದ ಪರಿಮಳದ ಸೋಪ್ ಹೊರ ರಾಜ್ಯ ಹಾಗೂ ವಿದೇಶದಲ್ಲಿಯೂ ಕಮಾಲ್ ಮಾಡಿದೆ. ಈಗ ಕೆಎಸ್ ಮತ್ತು ಡಿಎಲ್ ಭಾರತದಲ್ಲಿಯೇ ದುಬಾರಿ ಸೋಪ್ ತಯಾರಿಕೆಯ ಪ್ಲಾನ್ ರೂಪಿಸಿದ್ದು ಇನ್ನೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಶ್ರೀಗಂಧದ ಎಣ್ಣೆಯನ್ನು ಹೆಚ್ಚು ಬಳಸಿ ಉತ್ಕೃಷ್ಟ ಗುಣಮಟ್ಟದ ಮೈಸೂರು ಸ್ಯಾಂಡಲ್ ಸೋಪ್ ಮಾರುಕಟ್ಟೆಗೆ ಬರಲಿದೆ. ಒಂದು ಸೋಪ್ ಬೆಲೆ ಬರೋಬ್ಬರಿ 4 ಸಾವಿರ ರೂಪಾಯಿ ಇದರಲಿದೆ. ಇದನ್ನು ವಿದೇಶಕ್ಕೆ ಕಳಿಸುವ ಉದ್ದೇಶದಿಂದ ಈ ಪ್ಲಾನ್ ರೂಪಿಸಿಲಾಗುತ್ತಿದೆ.
ಇದನ್ನೂ ಓದಿ:Syria; ಆಂತರಿಕ ಸಂಘರ್ಷ, ಬಂಡುಕೋರರ ಆರ್ಭಟ.. ದೇಶ ಬಿಟ್ಟು ಓಡಿ ಹೋದ ಅಧ್ಯಕ್ಷ
ಕ್ಯೂಆರ್ ಕೋಡ್ ಬರುತ್ತದೆ
ಮೈಸೂರು ಸ್ಯಾಂಡಲ್ ಸೋಪ್ ಅನ್ನು ನಕಲು ಮಾಡಿ ಮಾರಾಟ ಮಾಡುವ ವ್ಯವಸ್ಥಿತ ಜಾಲವೂ ಹೊರರಾಜ್ಯದಲ್ಲಿ ಹೆಚ್ಚಾಗಿದ್ದು ಇದಕ್ಕೆ ಕಡಿವಾಣ ಹಾಕಲು ನಿಗಮ ಮುಂದಾಗಿದೆ. 15 ದಿನದಲ್ಲಿ ಸೋಪ್‌ಗಳಿಗೆ ವಿಶೇಷವಾಗಿ ಕ್ಯೂಆರ್ ಕೋಡ್ ಜಾರಿಯಾಗಲಿದೆ. ನಕಲಿ ಅಸಲಿ ಪ್ರಾಡೆಕ್ಟ್ಗಳ ವಿವರ ಇದರಿಂದ ಗೊತ್ತಾಗಲಿದೆ. ಅಲ್ಲದೇ ಈ ನಕಲಿ ಜಾಲದ ಮೇಲೆ ಕಣ್ಣಿಡಲು ಟೀಮ್ ಕೂಡ ರಚನೆಯಾಗಿದೆ.
ಈ ರೀತಿಯ ನಯಾ ಪ್ಲಾನ್‌ಗಳಿಗೆ ಕೆಎಸ್ ಮತ್ತು ಡಿಎಲ್ ಹೆಚ್ಚು ವಹಿವಾಟು ಮಾಡಿ ಲಾಭದ ಹಾದಿಯಲ್ಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಟಾರ್ಗೆಟ್ ಮೀರಿ ಲಾಭದಲ್ಲಿದೆ. ಇದರ ಮಧ್ಯೆ ದೇಶದ ದುಬಾರಿ ಸೋಪ್ ತಯಾರಿಕೆಯಿಂದನೂ ಭರ್ಜರಿ ಲಾಭದ ನಿರೀಕ್ಷೆಯಲ್ಲಿರುವುದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ