Advertisment

ವಿಶ್ವದಲ್ಲಿಯೇ ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ! ವರ್ಷಕ್ಕೆ ಎಷ್ಟು ಸಾವಿರ ಕೋಟಿ ಗೊತ್ತಾ?

author-image
Gopal Kulkarni
Updated On
ವಿಶ್ವದಲ್ಲಿಯೇ ಅತಿಹೆಚ್ಚು ಸಂಬಳ ಪಡೆಯುವ ಭಾರತೀಯ! ವರ್ಷಕ್ಕೆ ಎಷ್ಟು ಸಾವಿರ ಕೋಟಿ ಗೊತ್ತಾ?
Advertisment
  • ವಿಶ್ವದಲ್ಲಿಯೇ ಅತಿಹೆಚ್ಚು ಸಂಬಳ ಪಡೆಯುತ್ತಿರುವ ನಮ್ಮ ಭಾರತೀಯ
  • ಜಗದೀಪ್ ಸಿಂಗ್ ಅವರು ದಿನಕ್ಕೆ ಎಷ್ಟು ಕೋಟಿ ರೂಪಾಯಿ ಪಡೆಯತ್ತಾರೆ?
  • ಶಿಕ್ಷಣ ಹಾಗೂ ಈ ಹಿಂದೆ ಪಡೆದ ಅನುಭವ ಸಿಂಗ್​ಗೆ ಹೆಗಲಾಗಿ ನಿಂತಿದ್ದು ಹೇಗೆ

ಇಂದಿನ ದಿನಮಾನದಲ್ಲಿ ಜಾಬ್ ಬದಲಾಯಿಸುವುದೇ ಕಷ್ಟದ ಕೆಲಸ. ಅದರಲ್ಲೂ ಅತಿಹೆಚ್ಚು ಸಂಬಳ ಪಡೆಯುವುದಂತೂ ಈಗೀನ ಕಾಲದಲ್ಲಿ ಆಗದ ಕೆಲಸ. ಏಕೆಂದರೆ ಸದ್ಯ ಕೋವಿಡ್ ಬಳಿಕ ಎಲ್ಲಾ ಕಡೆ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕಾರ್ಯ ಜೋರಾಗಿ ಆರಂಭವಾಗಿದೆ. ಆದ್ರೆ ಇದೆಲ್ಲದರ ನಡುವೆ ನಮ್ಮ ಹೆಮ್ಮೆಯ ಭಾರತೀಯ ಜಗದೀಪ್ ಸಿಂಗ್​ ದಿನಕ್ಕೆ 48 ಕೋಟಿ ರೂಪಾಯಿ ಸಂಬಳ ಪಡೆದು. ವಿಶ್ವದ ಅತ್ಯಂತ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಇವರು ಪಡೆಯುತ್ತಿರುವ ಸಂಬಳ ಒಂದಲ್ಲ ಎರಡಲ್ಲಾ ವರ್ಷಕ್ಕೆ 17,500 ಕೋಟಿ ರೂಪಾಯಿ. ಇವರ ಈ ಸಾಧನೆ ಜಾಗತಿಕವಾಗಿ ಭಾರತೀಯರ ಪ್ರಭಾವ ಯಾವ ಮಟ್ಟಿಗೆ ಉದಯವಾಗುತ್ತಿದೆ ಎಂಬುದರ ಒಂದು ನಿದರ್ಶನ ಎಂದು ಹೇಳಲಾಗುತ್ತಿದೆ.

Advertisment

ಇದನ್ನೂ ಓದಿ: ನಿಮಿಷಾ ಪ್ರಿಯಾ ಪ್ರಾಣ ಉಳಿಸೋ ಆಪತ್ಬಾಂಧವ ಆಗುತ್ತಾ ಇರಾನ್ ಸರ್ಕಾರ? ಮುಂದಿರುವ ಅವಕಾಶಗಳೇನು?

ಜಗದೀಪ್ ಸಿಂಗ್, ಸದ್ಯ ಇಂತಹದೊಂದು ಸಾಧನೆ ಮಾಡಿರುವ ಭಾರತೀಯ. ಅದರಲ್ಲೂ ಟೆಕ್ ಮತ್ತು ಎನರ್ಜಿ ಸೆಕ್ಟರ್​ನಲ್ಲಿ ಈ ಪರಿಯ ಸಾಧನೆ ಅವರ ಶ್ರಮಕ್ಕೆ ಹಿಡಿದ ಕೈಗನ್ನಡಿ. ಕ್ವಾಂಟಮ್​ಸ್ಕೇಪ್​ನ ಸಿಇಓ ಆಗಿರುವ ಜಗದೀಪ್ ಸಿಂಗ್ ಅವರ ಸಂಬಳ ದಿನಕ್ಕೆ 48 ಕೋಟಿ ರೂಪಾಯಿ.

ಇನ್ನು ಜಗದೀಪ್ ಸಿಂಗ್ ಅವರ ಈ ಸಾಧನೆಗೆ ಅವರ ವಿದ್ಯಾರ್ಹತೆಯೂ ಕೂಡ ಒಂದು ಕಾರಣ. ಜಗದೀಪ್ ಸಿಂಗ್​ ಸ್ಟ್ಯಾಂಡ್​ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್. ಮುಗಿಸಿದದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮುಗಿಸಿದದ್ದಾರೆ. ಅವರ ಶಿಕ್ಷಣ ಅವರ ಕೌಶಲ್ಯವನ್ನು ಸಾಬೀತುಪಡಿಸಿದೆ. ವಿಶ್ವ ವ್ಯಾಪಾರ ಹಾಗೂ ತಂತ್ರಜ್ಞಾನಕ್ಕೆ ಬೇಕಾದ ಜ್ಞಾನವನ್ನು ಒದಗಿಸಿದೆ. ಸಿಂಗ್ ಕಳೆದ 10 ವರ್ಷಗಳಿಂದ ಹಲವು ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಶಿಕ್ಷಣ ಹಾಗೂ ಅವರ ಈ ಹಿಂದೆ ಪಡೆದ ಅನುಭವ ಅವರನ್ನು ಈ ಎತ್ತರಕ್ಕೆ ತಂದು ನಿಲ್ಲಿಸಿವೆ ಎಂದು ಹೇಳಲಾಗುತ್ತಿದೆ

Advertisment

ಕ್ವಾಂಟಮ್​ಸ್ಕೇಪ್ ಸಿಂಗ್ ಅವರಿಂದ ಸ್ಥಾಪನೆಗೊಂಡಿದ್ದು. ಈ ಸಂಸ್ಥೆಯ ಮೂಲಕ ಅವರು ಸೊಲಿಡ್ ಸ್ಟೇಟ್ ಬ್ಯಾಟರಿಗಳ ಉತ್ಪನ್ನ ಮಾಡುತ್ತಿದ್ದಾರೆ. ಇವು ಎಲೆಕ್ಟ್ರಿಕ್ ವಾಹನಗಳಿಗೆ ಅಳವಡಿಸುವಂತ ಬ್ಯಾಟರಿಗಳಾಗಿವೆ. ಸುರಕ್ಷತೆ, ವೇಗವಾಗಿ ಚಾರ್ಜ್ ಆಗುವುದು ಹಾಗೂ ಶಕ್ತಿಯುತ ಬ್ಯಾಟರಿಗಳ ಉತ್ಪಾದನೆಯೇ ಈ ಕಂಪನಿಯ ಮೊದಲ ಆದ್ಯತೆಯಾಗಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಬಿಲ್ ಗೇಟ್ಸ್​, ವೋಲ್ಕ್ಸ್​ವ್ಯಾಗನ್ ಈ ಕ್ವಾಂಟಮ್​ಸ್ಕೇಪ್​ ಸಂಸ್ಥೆಗೆ ಹೂಡಿಕೆಯನ್ನು ಮಾಡಿವೆ .

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment