50 ಶಾಸಕರಿಗೆ ತಲಾ ₹50 ಕೋಟಿ- ಸಿಎಂ ಸಿದ್ದರಾಮಯ್ಯ ಗುರಿಯಿಟ್ಟು ಹೇಳಿದ್ದು ಯಾರಿಗೆ, BJPಗೆ ಅಲ್ವಾ?

author-image
Bheemappa
Updated On
ರಾಜ್ಯಾದ್ಯಂತ ಗೊಂದಲ ಸೃಷ್ಟಿಸಿದ BPL ಕಾರ್ಡ್​ ರದ್ದು.. ಬಡವರಿಗೆ ಸಚಿವ ಮುನಿಯಪ್ಪ ಹೇಳಿದ್ದೇನು?
Advertisment
  • ನಮ್ಮ ಜನ ಸುಮ್ಮನೆ ಬಿಡಲ್ಲವೆಂದು ಬಾಣ ಬಿಟ್ಟಿದ್ದು ಯಾರಿಗೆ?
  • ಬಿಜೆಪಿಗಲ್ಲ, ಜೆಡಿಎಸ್​ಗೂ ಅಲ್ಲ ಸಿಎಂ ಹೇಳಿದ್ದು ಇವರಿಗಾ?
  • ‘ನನ್ನನ್ನು ಮುಟ್ಟದ್ರೆ ನಮ್ಮ ಕರ್ನಾಟಕದ ಜನ ಸುಮ್ಮನೇ ಬಿಡಲ್ಲ’

ಸಿದ್ದರಾಮಯ್ಯ ಚತುರ ರಾಜಕಾರಣಿ. ಸರ್ಕಾರ ಪತನ ಆಗಲ್ಲ ಅನ್ನೋದು ಅವರಿಗೂ ಗೊತ್ತು. 50 ಶಾಸಕರನ್ನ ಖರೀದಿಸಿ ಹೊಸ ಸರ್ಕಾರ ರಚನೆ ಸಾಧ್ಯವಾ? ಚಾನ್ಸೇ ಇಲ್ಲ. ಹಾಗಾದ್ರೆ, ಸಿಎಂ ಸಿದ್ದರಾಮಯ್ಯ ನನ್ನನ್ನು ಮುಟ್ಟಿದ್ರೆ ನಮ್ಮ ಜನ ಸುಮ್ಮನೆ ಬಿಡಲ್ಲ ಅಂತ ಬಾಣ ಬಿಟ್ಟಿದ್ಯಾಕೆ?. ಅಷ್ಟಕ್ಕೂ ಬಿಟ್ಟ ಈ ಬಾಣ ಬಿಜೆಪಿಗಾ? ಕಾಂಗ್ರೆಸ್​​ಗಾ ಅನ್ನೋ ಪ್ರಶ್ನೆ ಮೂಡಿದೆ.

ಆಪರೇಷನ್​ ಕಮಲ ಇಡೀ ದೇಶದಲ್ಲಿ ಹೊಸ ಮಾದರಿ ಪರಿಚಯಿಸಿದ ರಾಜಕಾರಣ. ಹಲವು ಸರ್ಕಾರಗಳನ್ನೇ ಅಪೋಷನ್​​ ಪಡೆದ ಈ ಅಸ್ತ್ರಕ್ಕೆ ಹಸ್ತ ಈಗಲೂ ಬೆವರುತ್ತೆ. 50 ಶಾಸಕರು, ಒಬ್ಬೊಬ್ಬರಿಗೆ 50 ಕೋಟಿ ಆಫರ್​​. ಸಿದ್ದರಾಮಯ್ಯ ಹಾಕಿದ ಬಾಂಬ್​ ಸದ್ಯ ರಾಜ್ಯ ರಾಜಕಾರಣದಲ್ಲೇ ಸಂಚಲನ ಸೃಷ್ಟಿಸಿದೆ. ಅಷ್ಟಕ್ಕೂ ಆಡಿಸಿ ನೋಡು ಬೀಳಿಸಿ ನೋಡು ಆಟ ಸಾಧ್ಯವೇ ಇಲ್ಲ. ಆದ್ರೆ, ಅಸಾಧ್ಯವೂ ಏನಲ್ಲ?.

ಇದನ್ನೂ ಓದಿ:ನಗರದಲ್ಲಿ ಹೆಚ್ಚಾದ ವಾಯುಮಾಲಿನ್ಯ.. ವಿಮಾನ ಹಾರಾಟದ ಮೇಲೂ ಕರಿನೆರಳು, ವಿದ್ಯಾರ್ಥಿಗಳಿಗೆ ಆನ್​ಲೈನ್​​ ತರಗತಿ

publive-image

ತಮ್ಮ ಕ್ಯಾಪ್ಟನ್​ಶಿಪ್​ಗೆ ಧಕ್ಕೆ ಆಗದಂತೆ ಸಿದ್ದು ಪ್ಲಾನ್​!

50 ಶಾಸಕರಿಗೆ 50 ಕೋಟಿ ರೂಪಾಯಿ ಅನ್ನೋದು ಪಕ್ಕಕ್ಕಿಟ್ಟು ಸಿಎಂ ಸಿದ್ದರಾಮಯ್ಯ ಆಡಿದ ಮತ್ತೊಂದು ಮಾತು ರಾಜಕೀಯ ಚಾವಡಿ ಚಿಂತನೆಗೆ ಬೀಳಿಸಿದೆ. ಬಡವರ ಪರ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಇಳಿಸಲು ಪ್ರಯತ್ನಿಸ್ತಿದ್ದಾರೆ. ನನ್ನನ್ನು ಮುಟ್ಟಿದರೆ ನಮ್ಮ ಜನ ಸುಮ್ಮನೆ ಬಿಡಲ್ಲ. ಹೀಗೆ ಸಿಡಿದಿತ್ತು ನೋಡಿ ಸಿದ್ದರಾಮಯ್ಯರ ಮಾತಿನ ಬಾಣ.

ನಾನು ಬಡವರಿಗೆ ಏನು ಕೊಡುತ್ತಿದ್ದೇನೆ ಎಂದು ಎದುರಾಳಿಗಳಿಗೆ ಹೊಟ್ಟೆ ಉರಿ. ಹೆಂಗದರೂ ಮಾಡಿ ತಗೆದು ಹಾಕಿ ಬಿಡಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಮುಟ್ಟದರೆ ನಮ್ಮ ಕರ್ನಾಟಕದ ಜನ ಸುಮ್ಮನೇ ಬಿಡಲ್ಲ ಅಂತ ಹೇಳಿದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಅಂದ್ಹಾಗೆ ಇದು ಮೈಸೂರಿನಲ್ಲಿ ಸರಿಯಾಗಿ ಬೈಎಲೆಕ್ಷನ್​​ ನಡೆದ ದಿನ ಸಂಜೆ ಸಮಯದಲ್ಲಿ ಆಡಿದ ಮಾತು. ಈ ಮಾತು ಹಲವು ಸಂಶಯಗಳನ್ನ ಹುಟ್ಟುಹಾಕಿದೆ. ಡೆಲ್ಲಿಯ ಎರಡು ಶಕ್ತಿ ಕೇಂದ್ರಕ್ಕೆ ಸಂದೇಶ ನೀಡಿದ್ರಾ?. ಸಿಎಂ ಸಿದ್ದರಾಮಯ್ಯ ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯೋ ತಂತ್ರಗಾರಿಕೆ ಕಸುಬಿಗೆ ಕೈಹಾಕಿದ್ರಾ ಅನ್ನೋ ಚರ್ಚೆ ಹಬ್ಬಿದೆ.

ಒಂದೇ ಕಲ್ಲಲ್ಲಿ ಎರಡು ಹಕ್ಕಿ!

  • ನವೆಂಬರ್​ 23ಕ್ಕೆ ಮೂರು ಕ್ಷೇತ್ರಗಳ ಬೈಎಲೆಕ್ಷನ್​ ಫಲಿತಾಂಶ
  • ಸಿದ್ದರಾಮಯ್ಯ ಸರ್ಕಾರದ ಸತ್ವ ಪರೀಕ್ಷೆ ಮಾಡುವ ಈ ರಿಸಲ್ಟ್​​
  • ಮೂರಕ್ಕೆ ಮೂರು, ಮೂರರಲ್ಲಿ ಎರಡು ಪಾಸ್​ ಆದ್ರೂ ಸೇಫ್
  • ಇಲ್ಲದಿದ್ದರೆ ಗ್ಯಾರಂಟಿ ವೈಫಲ್ಯ, ನಾಯಕತ್ವ ವರ್ಚಸ್ಸು ಕುಸಿತ
  • ಅಧಿಕಾರದಲ್ಲಿದ್ದೂ ಬೈಎಲೆಕ್ಷನ್​​ ಕಳಪೆ ಸಾಧನೆ ಅನ್ನೋ ಕಳಂಕ
  • ಆಗ 10th ಜನಪಥ್​ ಮರ್ಜಿಯ ಮೇಲೆ ಸಿದ್ದರಾಮಯ್ಯ ಕುರ್ಚಿ
  • ಮುಡಾ ಕೇಸ್​ನಲ್ಲಿ ಸಿದ್ದರಾಮಯ್ಯ ಕೊರಳು ಸುತ್ತುವ ಆತಂಕ
  • ಮುಡಾ ಕೇಸ್​​ನಲ್ಲಿ ಇ.ಡಿ ಪ್ರವೇಶ, ಸಿದ್ದು ವಿಚಾರಣೆ ಸಾಧ್ಯತೆ
  • ಸಂಕಷ್ಟ ಸೃಷ್ಟಿ ಆದ್ರೆ ಹೈಕಮಾಂಡ್​​ ತಮ್ಮ ಬೆನ್ನಿಗೆ ನಿಲ್ಲಬೇಕು
  • ಸಿಎಂ ಸ್ಥಾನದ ರೇಸ್​ನಲ್ಲಿರುವರಿಗೆ ಶಕ್ತಿ-ಸಾಮರ್ಥ್ಯದ ಎಚ್ಚರಿಕೆ

ಆಡಳಿತ ಪಕ್ಷದ ಶಾಸಕರನ್ನ, ಹೈಕಮಾಂಡ್​​ ಅನ್ನು ಎದುರಿಸುವ ಸಲುವಾಗಿ ಪ್ರತಿಪಕ್ಷದ ಹೆಗಲ ಮೇಲೆ ಬಂದೂಕು ಇಟ್ಟಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಹಿಂದೆ ಇದು ಇರಬಹುದು.

ಸುನೀಲ್​ಕುಮಾರ್​, ಬಿಜೆಪಿ ಶಾಸಕ

ಇದನ್ನೂ ಓದಿ: ನ್ಯಾಷನಲ್ ಸೀಡ್ಸ್ ಕಾರ್ಪೊರೇಷನಿಂದ ಅರ್ಜಿ ಆಹ್ವಾನ.. ಕೇಂದ್ರ ಸರ್ಕಾರದಡಿ ನಿಮಗೂ ಅವಕಾಶ ಇದೆ

publive-image

ಬಿಜೆಪಿ ಹೆಗಲ ಮೇಲೆ ಬಂದೂಕು ಇರಿಸಿದ ಸಿದ್ದರಾಮಯ್ಯ, ತಮ್ಮದೇ ನಾಯಕರಿಗೆ ಮೆಸೇಜ್​​​ ಪಾಸ್​​ ಮಾಡಿದ್ದಾರೆ. ಇಲ್ಲಿ ಬಿಜೆಪಿ ಜಸ್ಟ್​​ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ ಚಾಣಕ್ಯ ರಾಮಯ್ಯ ಬಿಟ್ಟ ಬಾಣ ಮಾತ್ರ ದಶದಿಕ್ಕಲ್ಲೂ ಕಂಪಿಸುವಂತೆ ಮಾಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment