Advertisment

60 ಲಕ್ಷ ರೂಪಾಯಿ ಬೆಲೆಯ ಪ್ಲಾಟ್​ 30 ಕೋಟಿಗೆ ಬಿಡ್; ಬೆಚ್ಚಿಬಿದ್ರು ಹರಾಜು ನಡೆಸಿದ ಅಧಿಕಾರಿಗಳು..!

author-image
Ganesh
Updated On
60 ಲಕ್ಷ ರೂಪಾಯಿ ಬೆಲೆಯ ಪ್ಲಾಟ್​ 30 ಕೋಟಿಗೆ ಬಿಡ್; ಬೆಚ್ಚಿಬಿದ್ರು ಹರಾಜು ನಡೆಸಿದ ಅಧಿಕಾರಿಗಳು..!
Advertisment
  • MVDA ನಡೆಸಿದ ಹರಾಜು ಪ್ರಕ್ರಿಯೆ ವೇಳೆ ಭಾರೀ ಹೈಡ್ರಾಮಾ
  • ಆನ್​ಲೈನ್ ಮೂಲಕ ನಡೆದ ಹರಾಜಿನಲ್ಲಿ ಮೋಸ ನಡೆದಿರುವ ಶಂಕೆ
  • ಅಧಿಕಾರಿಗಳು ಹೇಳಿದ್ದೇನು..? ಇದರ ಹಿಂದಿದ್ಯಾ ಷಡ್ಯಂತ್ರ..?

ಉತ್ತರ ಪ್ರದೇಶದ ಮಥುರಾ-ವೃಂದಾವನ ಅಭಿವೃದ್ಧಿ ಪ್ರಾಧಿಕಾರದ (MVDA) ವಿವಿಧ ವಸತಿ ಯೋಜನೆಗಳಡಿ ಪ್ಲಾಟ್​​ಗಳನ್ನು ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ಆರಂಭಿಸಿದೆ. ಗುರುವಾರ ಒಟ್ಟು 8 ನಿವೇಶನಗಳ ಇ-ಹರಾಜು ನಡೆದಿದೆ. ಆದರೆ ಹರಾಜು ಪ್ರಕ್ರಿಯೆ ವೇಳೆ ಭಾರೀ ಗೊಂದಲ ಉಂಟಾಗಿದ್ದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Advertisment

ಅಚ್ಚರಿ ವಿಚಾರ ಅಂದರೆ ವೃಂದಾವನದ ರುಕ್ಮಣಿ ವಿಹಾರ್‌ನಲ್ಲಿರುವ (Rukmani Vihar) 300 ಚದರ ಅಡಿಯ ಪ್ಲಾಟ್​ನ​ ಮೂಲ ಬೆಲೆ 60 ಲಕ್ಷ ರೂಪಾಯಿ ಆಗಿತ್ತು. ಆನ್​​ಲೈನ್​​ನಲ್ಲಿ ಅದನ್ನು 30 ಕೋಟಿ ರೂಪಾಯಿ ವರೆಗೆ ಬಿಡ್ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಬಿಡ್ ಆಗಿರುವ ಹಿನ್ನೆಲೆಯಲ್ಲಿ MVDA ಅಧಿಕಾರಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ನಿವೇಶನಗಳ ಮಾರಾಟಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ಷಡ್ಯಂತ್ರ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:IAS ಕೋಚಿಂಗ್​ ಸೆಂಟರ್​​ಗೆ ನೀರು ನುಗ್ಗಿ ಅನಾಹುತ; ಪ್ರಾಣ ಕಳೆದುಕೊಂಡ ಮೂರು ವಿದ್ಯಾರ್ಥಿಗಳು.. ಆಗಿದ್ದೇನು?

publive-image

ಇದಲ್ಲದೇ ರುಕ್ಮಣಿ ವಿಹಾರದ ನಂಬರ್ 83ರಲ್ಲಿ 288 ಚದರ ಮೀಟರ್ ಪ್ಲಾಟ್​ನ ಬೆಲೆ 19 ಕೋಟಿ ರೂಪಾಯಿ ವರೆಗೆ ಬಿಡ್ ಮಾಡಲಾಗಿದೆ. ಇದರ ಮೂಲ ಬೆಲೆ 58.32 ಲಕ್ಷ ರೂಪಾಯಿ ಆಗಿತ್ತು. ಇದರಿಂದ ಭಾರೀ ಗೊಂದಲ ಉಂಟಾಗಿದ್ದು, ಹರಾಜು ಪ್ರಕ್ರಿಯೆ ವಿಫಲವಾಗಿದೆ. ಯಾಕೆಂದರೆ ಭದ್ರತಾ ಠೇವಣಿ ಇಟ್ಟ ನಿಜವಾದ ಅರ್ಜಿದಾರರು ಹಿಂದೆ ಸರಿಯುವಷ್ಟು ಕೆಲವರು ಹಣವನ್ನು ಪಾವತಿಸಿದ್ದಾರೆ ಎಂದು ಹೇಳಲಾಗಿದೆ.

Advertisment

ಇನ್ನು ಕೆಲವರು ತಾವು ಕಟ್ಟಿರುವ ಭದ್ರತಾ ಠೇವಣಿ ಎಷ್ಟು ಅಂತಾ ಯೋಚಿಸದೇ ಹಣವನ್ನು ಏರಿಸಿದ್ದಾರೆ. ನಿಗದಿತ ಅವಧಿಯೊಳಗೆ ಅವರು ಹಣವನ್ನು ಪಾವತಿಸದಿದ್ದಲ್ಲಿ ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನುಳಿದ ನಿವೇಶನಗಳ ಹರಾಜು ನಾಳೆ ನಡೆಯಲಿದೆ. ಅದಕ್ಕೆ ಒಟ್ಟು 889 ಅರ್ಜಿಗಳು ಸಲ್ಲಿಕೆ ಆಗಿವೆ.

ಇದನ್ನೂ ಓದಿ:RCB ಇಂದ ಈ 3 ಆಟಗಾರರು ಮಾತ್ರ ರಿಟೈನ್; ಉಳಿದವರಿಗೆ ಗೇಟ್​ಪಾಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment