/newsfirstlive-kannada/media/post_attachments/wp-content/uploads/2025/02/BIBLE-LOTTERY-TICKET.jpg)
ಬದುಕು ಎನ್ನುವುದೇ ಒಂದು ಅನಿರೀಕ್ಷಿತಗಳ ಆಗರ. ಏನೋ ಒಂದು ಯಾವುದೋ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದಂತೆ ಘಟಿಸಿ ಬಿಡುತ್ತದೆ. ಅದು ನಮ್ಮನ್ನೇ ಒಮ್ಮೊಮ್ಮೆ ಅಚ್ಚರಿಗೆ ತಳ್ಳುತ್ತದೆ. ಅಂತಹುದೇ ಒಂದ ಘಟನೆ ವರ್ಜಿನಿಯಾದ ಒಬ್ಬ ಮಹಿಳೆ ಬದುಕಲ್ಲಿ ನಡೆದಿದೆ. ಅದನ್ನು ಪವಾಡ ಅನ್ನಬಹುದೋ ಒಂದು ಕಾಕತಾಳಿಯ ಎನ್ನಬಹುಗೋ ಗೊತ್ತಿಲ್ಲ ಅವಳ ಇಡೀ ಬದುಕಿಗೆ ಒಂದು ದೊಡ್ಡ ತಿರುವು ತಂದಕೊಟ್ಟಂತಹ ಘಟನೆಯದು
ಇದನ್ನೂ ಓದಿ: ಏನಿದು ಸೌದಿ ಅರೇಬಿಯಾದ ಡ್ರೀಮ್ ಆಫ್ ದಿ ಡೆಸರ್ಟ್ ಯೋಜನೆ? ಆ ಐದು ಐಷಾರಾಮಿ ಟ್ರೈನ್ಗಳು ಹೇಗಿವೆ?
ಎಂದೂ ಕಾಣದ ಕನಸೊಂದು ನನಸಾದ ದಿನಕ್ಕೆ ಆ ಮಹಿಳೆ ಈಗಲೂ ಆಶ್ಚರ್ಯವ್ಯಕ್ತಪಡಿಸುತ್ತಿದ್ದಾಳೆ. ತನ್ನ ಬದುಕಿ ಇಡೀ ಭವಿಷ್ಯವೇ ಬದಲಾದ ಬಗ್ಗೆ ಆಕೆಗೆ ಈಗಲೂ ದಿಗ್ಭ್ರಮೆ ಇದೆ. ಆ ಮಹಿಳೆಯ ಹೆಸರು ಜಾಕ್ವಲೀನ್ ಮಂಗೂಸ್. ವರ್ಜಿನಿಯಾದ ವಾಸಿ. ಒಂದು ಬಾರಿ ಒಂದು ಲಾಟರಿಯನ್ನು ಸುಮ್ಮನೆ ತಂದುಕೊಂಡು ಯಾವುದೇ ಬೇಡಿಕೆಯಿಲ್ಲದೇ. ಪ್ರಾರ್ಥನೆಯೂ ಇಲ್ಲದೇ ಸುಮ್ಮನೆ ಬೈಬಲ್ ಗ್ರಂಥದೊಳಗೆ ಇಟ್ಟಿದ್ದಾರೆ. ಲೇಕ್ ಮಾರ್ಟ್ ಮತ್ತು ಡೆಲಿಯಲ್ಲಿ ಖರೀದಿಸಿದ ಲಾಟರಿಯನ್ನು ಬೈಬಲ್ ಪುಸ್ತಕದ ಹಾಳೆಗಳ ನಡುವೆ ಇಟ್ಟು ಮರೆತುಕೂಡ ಹೋಗಿದ್ದಾಳೆ. ಅದೇ ಮಂಗೂಸ್ ಬದುಕಿಗೆ ಹೊಸ ತಿರುವು ಕೊಟ್ಟಿದ್ದು. ನ್ಯೂಸ್ನಲ್ಲಿ ಒಂದು ವರದಿ ಬಂದಾಗ ಜಾಕ್ವಲೀನ್ ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಹೊಸ ವರ್ಷ ದಿನದಂದು ಲಾಟರಿ ಟಿಕೆಟ್ ವಿನ್ನರ್ ಯಾರು ಎಂಬುದನ್ನು ಘೋಷಣೆ ಮಾಡಲಾಗುತ್ತು. ಗೆದ್ದ ಟಿಕೆಟ್ಗೆ 8.66 ಕೋಟಿ ರೂಪಾಯಿ ಬಹುಮಾನವೂ ನೀಡಲಾಗಿತ್ತು. ಆ ಟಿಕೆಟ್ ನಂಬರ್ ಜಾಕ್ವಲಿನ್ ಬೈಬಲ್ ಪುಟಗಳಲ್ಲಿ ಬಚ್ಚಿಟ್ಟಿದ್ದ ಆ ಲಾಟರಿ ಟಿಕೆಟ್ದೆ ಆಗಿತ್ತು.
ಇದನ್ನೂ ಓದಿ: ಗಡ್ಡ ಬಿಟ್ಟರೂ ತೆರಿಗೆ, ಹಸುವಿನ ತೇಗಿಗೂ ಸುಂಕ ಕಟ್ಟಬೇಕು; ವಿಶ್ವದ 8 ವಿಚಿತ್ರ ಟ್ಯಾಕ್ಸ್ಗಳ ಪಟ್ಟಿ ಇಲ್ಲಿದೆ ನೋಡಿ!
ಈ ಒಂದು ಸುದ್ದಿ ಹೊರಬಂದಾಗ ಜಾಕ್ವಲೀನ್ ಅಕ್ಷರಶಃ ಆಶ್ಚರ್ಯಕ್ಕೆ ಒಳಗಾಗಿದ್ದಳು ಇಷ್ಟೊಂದು ಹಣವನ್ನು ಏನು ಮಾಡಬೇಕು ಅಂತಲೇ ನನಗೆ ತಿಳಿಯುತ್ತಿಲ್ಲ ಎಂದು ಆಕೆ ಮಾಧ್ಯಮಗಳಿಗೆ ಉತ್ತರಿಸಿದ್ದಾಳೆ. ಇದು ನಿಜಕ್ಕೂ ನಾನೆಂದೂ ಕಾಣದ ಕನಸೊಂದು ನನಸಾದ ದಿನ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ
ಇಂತಹ ಅನೇಕ ಘಟನೆಗಳು ವರ್ಜಿನಿಯಾದಲ್ಲಿ ನಡೆದಿವೆ. 20 ವರ್ಷದ ಗ್ಯಾಸ್ ಇಂಜನೀಯರ್ ಜೇಮ್ಸ್ ಕ್ಲಾಕ್ಸೊನ್ ಎಂಬಾತ ಈ ಹಿಂದೆ 79.85 ಕೋಟಿ ರೂಪಾಯಿಗಳನ್ನು ಗೆದ್ದಿದ್ದ ಅದನ್ನು ಗೆದ್ದ ಒಂದೇ ವಾರದಲ್ಲಿ ಮತ್ತೊಂದು ಬಾರಿ 12 ಸಾವಿರ ರೂಪಾಯಿ ಗೆದ್ದಿದ್ದ. ಈಗ ಜಾಕ್ವಲೀನ್ 8.66 ಕೋಟಿ ಗೆಲ್ಲುವ ಮೂಲಕ ಕೋಟ್ಯಾಧಿಪತಿಗಳ ಲಿಸ್ಟ್ನಲ್ಲಿ ಸೇರಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ