/newsfirstlive-kannada/media/post_attachments/wp-content/uploads/2025/04/NTR_SHIRT.jpg)
ಟಾಲಿವುಡ್ನ ಆರ್ಆರ್ಆರ್ ಸಿನಿಮಾ ಖ್ಯಾತಿಯ ಜೂನಿಯರ್ ಎನ್ಟಿಆರ್ ಶೂಟಿಂಗ್ನಲ್ಲಿ ಬ್ಯುಸಿ ಇರುತ್ತಾರೆ. ಜೊತೆ ಜೊತೆಗೆ ಕುಟುಂಬಕ್ಕೂ ಸಮಯ ಕೊಡುತ್ತಾರೆ. ಸದ್ಯ ಕೆಜಿಎಫ್-2 ಸಿನಿಮಾದ ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್ ಸಿನಿಮಾದ ಮಾಡಲಿದ್ದಾರೆ. ಈ ಸಿನಿಮಾ ಶೂಟಿಂಗ್ ಇದೇ 22 ರಿಂದ ಆರಂಭವಾಗಲಿದೆ. ಇದರ ಮಧ್ಯೆ ಜೂ.ಎನ್ಟಿಆರ್ ಅವರು ಧರಿಸಿದ ಶರ್ಟ್ವೊಂದು ಭಾರೀ ದುಬಾರಿ ಮೊತ್ತದ್ದು ಎಂದು ಹೇಳಲಾಗುತ್ತಿದೆ.
ಜೂನಿಯರ್ ಎನ್ಟಿಆರ್ ಅವರು ಇತ್ತೀಚೆಗಷ್ಟೇ ಜಪಾನ್ನಲ್ಲಿ ದೇವರ ಸಿನಿಮಾದ ಪ್ರಮೋಷನ್ ಮುಗಿಸಿದ್ದಾರೆ. ಸತತ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿರುವ ಜೂ.ಎನ್ಟಿಆರ್ ತಮ್ಮ ಕುಟುಂಬದ ಜೊತೆ ದುಬೈಗೆ ಟ್ರಿಪ್ ಹೋಗಿದ್ದರು. ಈ ಸಂದರ್ಭದಲ್ಲಿ ಜೂ.ಎನ್ಟಿಆರ್ ಅವರು ಧರಿಸಿರು ಶರ್ಟ್ ಭಾರೀ ವೈರಲ್ ಆಗುತ್ತಿದ್ದು ಇದರ ಬೆಲೆ ಕೇಳಿ ಅಭಿಮಾನಿಗಳು ಫುಲ್ ಶಾಕ್ ಆಗುತ್ತಿದ್ದಾರೆ.
ಜೂ.ಎನ್ಟಿಆರ್ ಅವರು ಧರಿಸಿರು ಶರ್ಟ್ ಅಭಿಮಾನಿಗಳಲ್ಲಿ ಸಖತ್ ಕುತೂಹಲ ಮೂಡಿಸಿದೆ. ದುಬೈ ಪ್ರವಾಸದ ಸಮಯದಲ್ಲಿ ಜೂ.ಎನ್ಟಿಆರ್ ನೀಲಿ ಬಣ್ಣದ ಜೊತೆ ಕ್ರೀಮ್ ಮತ್ತು ಬೂದು ಬಣ್ಣದ ಡಿಸೈನ್ ಇರುವ ಆಫ್ ತೋಳಿನ ಬಟನ್ ಶರ್ಟ್ ಅನ್ನು ಧರಿಸಿದ್ದರು. ಇದರ ಡಿಸೈನ್ ಕ್ಲಾಸಿ ಆಗಿದ್ದು ನೋಡಲು ತುಂಬಾ ಆಕರ್ಷಣೆಯಾಗಿದೆ. ಆದರೆ ಇದು ಲಕ್ಸುರಿ ಫ್ಯಾಶನ್ ಬ್ರ್ಯಾಂಡ್ ಈಟ್ರೋ (ETRO) ಶರ್ಟ್ ಆಗಿದ್ದು ಇದರ ಬೆಲೆ 85,000 ಆಗಿದೆ ಎಂದು ಹೇಳಲಾಗುತ್ತಿದೆ.
ಪ್ರವಾಸದ ಸಮಯದಲ್ಲಿ ಜೂನಿಯರ್ ಎನ್ಟಿಆರ್ ಅವರು ತಮ್ಮ ಅಭಿಮಾನಿಗಳ ಜೊತೆ ಅಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದರು. ಸದ್ಯ ಈ ಫೋಟೋ ಈಗ ಎಲ್ಲೆಡೆ ವೈರಲ್ ಆಗಿದ್ದು ನಟ ಹಾಕಿಕೊಂಡ ಶರ್ಟ್ಸ್ 85 ಸಾವಿರನಾ ಎಂದು ಫ್ಯಾನ್ಸ್ ಶಾಕ್ ಆಗಿದ್ದಾರೆ. ದುಬೈನಿಂದ ಬಂದ ಮೇಲೆ ಜೂ.ಎನ್ಟಿಆರ್ ಏಪ್ರಿಲ್ 22 ರಂದು ಪ್ರಶಾಂತ್ ನೀಲ್ ಜೊತೆ ಡ್ರ್ಯಾಗನ್ ಸಿನಿಮಾದ ಶೂಟಿಂಗ್ನಲ್ಲಿ ತೊಡಗಿಕೊಳ್ಳಲ್ಲಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ