newsfirstkannada.com

ಉತ್ತರ ಪ್ರದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆಯೇ..? ಬಿಜೆಪಿ ಜೊತೆ RSS ಸಭೆ..

Share :

Published July 19, 2024 at 1:14pm

    ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರಾ ಯೋಗಿ ಆದಿತ್ಯನಾಥ?

    ಐವರು ನಾಯಕರು ಲಕ್ನೋದಲ್ಲಿ ಇರುವಂತೆ RSS ಸೂಚನೆ

    ಆರೆಸ್ಸೆಸ್ ಪ್ರಮುಖ ಅರುಣ್ ಕುಮಾರ್ ನೇತೃತ್ವದಲ್ಲಿ ಸಭೆ

ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಉತ್ತರ ಪ್ರದೇಶದ ರಾಜಕೀಯಕ್ಕೆ ಬಿಸಿ ತಟ್ಟಿದೆ. ಈ ಮಧ್ಯೆ ನಾಳೆ ಮತ್ತು ನಾಡಿದ್ದು ಲಕ್ನೋದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್ಎಸ್) ಬಿಜೆಪಿ ಜೊತೆ ಮಹತ್ವದ ಸಭೆ ನಡೆಸಲಿದೆ.

ಆರೆಸ್ಸೆಸ್ ಪ್ರಮುಖ ಅರುಣ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಉತ್ತರ ಪ್ರದೇಶದ ಬಿಜೆಪಿ ಹಿರಿಯ ನಾಯಕರು ಹಾಗೂ ಆರ್​ಎಸ್​​ಎಸ್​ನ ಪ್ರಮುಖರು ಈ ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಮಾಹಿತಿಗಳ ಪ್ರಕಾರ, ಸರ್ಕಾರ ಮತ್ತು ಸಂಘಟನೆ ನಡುವಿನ ಸಮನ್ವಯತೆ ಹಾಗೂ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಚರ್ಚೆ ನಡೆಯಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ:ಲಂಕಾ ಟೂರ್ನಿಗೆ ಟೀಂ ಇಂಡಿಯಾ.. ODI, T20 ಎರಡೂ ಸರಣಿಗಳಿಗೆ ಆಯ್ಕೆಯಾದ ಆಟಗಾರರು ಯಾರೆಲ್ಲ ಗೊತ್ತೇ..?

ಬಿಜೆಪಿ ಆಡಳಿತ ವೈಖರಿ ಬಗ್ಗೆ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿರುವ ನಡುವೆಯೇ ಸಭೆ ಕರೆದಿರೋದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಉತ್ತರ ಪ್ರದೇಶದ ಬಿಜೆಪಿಯಲ್ಲಿ ಬದಲಾವಣೆಯ ವದಂತಿಗಳೂ ಕೂಡ ಇವೆ. ಹೀಗಾಗಿ ನಾಳೆಯಿಂದ ನಡೆಯಲಿರುವ ಸಭೆ ಬಗ್ಗೆ ಕುತೂಹಲಗಳು ಹೆಚ್ಚಾಗಿವೆ.

ಬೈಠಕ್​​ನಲ್ಲಿ ಯಾರಿಗೆಲ್ಲ ಆಹ್ವಾನ..?
ಆರ್​ಎಸ್​ಎಸ್​ನ ಈ ಬೈಠಕ್​​ನಲ್ಲಿ ಸಿಎಂ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಮತ್ತು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಸಿಂಗ್ ಸಭೆಗೆ ಬರುವಂತೆ ತಿಳಿಸಲಾಗಿದೆ.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ಉತ್ತರಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್‌ ತಯಾರಿ ನಡೆಸ್ತಿದ್ದಾರೆ. ಈ ಉಪಚುನಾವಣೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಇನ್ನು ಆರ್​​ಎಸ್​ಎಸ್ ಸಭೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಕೇಶವ್ ಮೌರ್ಯ ಅವರ ಪ್ರಯಾಗರಾಜ್ ಭೇಟಿಯನ್ನು ಮುಂದೂಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಾಗಿದೆ. ಕಡಿಮೆ ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇದನ್ನು ಓದಿ:ಜಿಯೋ-ಏರ್‌ಟೆಲ್​​ಗೆ ನೆಲ ಕಚ್ಚುವ ಆತಂಕ; ಸಂಚಲನ ಸೃಷ್ಟಿಸಿದ TATA-BSNL ಒಪ್ಪಂದ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಪ್ರದೇಶದಲ್ಲಿ ದೊಡ್ಡ ಬದಲಾವಣೆ ಆಗಲಿದೆಯೇ..? ಬಿಜೆಪಿ ಜೊತೆ RSS ಸಭೆ..

https://newsfirstlive.com/wp-content/uploads/2024/07/MOHAN-BHAGAVATH.jpg

Load More