ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?

author-image
Gopal Kulkarni
Updated On
ಬಾಂಗ್ಲಾ ಹಿಂದೂಗಳ ಮೇಲಿನ ದಾಳಿಗೆ RSS ಖಂಡನೆ.. ಪ್ರಧಾನಿ ಮೋದಿ ಸರ್ಕಾರಕ್ಕೆ ಆಗ್ರಹ; ಹೇಳಿದ್ದೇನು?
Advertisment
  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ RSS ಖಂಡನೆ
  • ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಬೇಕು ಎಂದು ದತ್ತಾತ್ರೇಯ ಹೊಸಬಾಳೆ ಆಗ್ರಹ
  • ಜಾಗತಿಕವಾಗಿ ಬೆಂಬಲ ಸಜ್ಜಗೊಳಿಸಿ ಹಿಂದೂಗಳ ರಕ್ಷಣೆಗೆ ಮುಂದಾಗಲು ಆಗ್ರಹ

ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್​ಎಸ್​ಎಸ್​) ಕೇಂದ್ರ ಸರ್ಕಾರಕ್ಕೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಹಾಗೂ ಉಳಿದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಜಾಗತಿಕ ಬೆಂಬಲವನ್ನು ಸಜ್ಜುಗೊಳಿಸಿ ಎಂದು ಆಗ್ರಹಿಸಿದೆ. ಚಿನ್ಮೋಯ್ ಕೃಷ್ಣದಾಸ್ ಅವರ ಬಿಡುಗಡೆಗೆ ಆಗ್ರಹಿಸಿರುವ ಆರ್​​ಎಸ್​ಎಸ್​ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ ಹಿಂದೂಗಳ ಮೇಲೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಮೊಹಮ್ಮದ್ ಯೂನಿಸ್ ವಿರುದ್ಧ ಹರಿಹಾಯ್ದಿರುವ ದತ್ತಾತ್ರೆಯ ಹೊಸಬಾಳೆ ಅವರು ಬಾಂಗ್ಲಾದೇಶದ ಪ್ರಧಾನಿಯ ಮೂಕ ಪ್ರೇಕ್ಷತನವೇ ಇಂದು ಅಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಿಂಸಾಚಾರ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದಾರೆ.

publive-image

ಬಾಂಗ್ಲಾದೇಶದಲ್ಲಿ ಢಾಕಾ ಪೊಲೀಸರು ಸೋಮವಾರದಂದು ಇಸ್ಕಾನ್​ನ ಸ್ವಾಮಿಜಿ ಚಿನ್ಮೋಯ್ ಕೃಷ್ಣದಾಸ್ ಬ್ರಹ್ಮಚಾರಿಯವರನ್ನು ದೇಶದ್ರೋಹ ಆರೋಪದ ಪ್ರಕರಣದಲ್ಲಿ ಬಂಧಿಸಿತ್ತು. ಇದನ್ನು ಈಗ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಖಂಡಿಸಿದೆ.

ಇದನ್ನೂ ಓದಿ:ISKCON ನಿಷೇಧಕ್ಕೆ ನಿರ್ಧಾರ..! ಬಾಂಗ್ಲಾದೇಶದಲ್ಲಿ ಮುಂದುವರಿದ ದಬ್ಬಾಳಿಕೆ.. ಖಂಡಿಸಿದ ಭಾರತ!

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಾಗೂ ಇನ್ನೂಳಿದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅವರ ಮೇಲೆ ದಾಳಿ ನಡೆಯುತ್ತಿವೆ. ಕೊಲೆ ಹಾಗೂ ಲೂಟಿಗಳನ್ನು ಮಾಡಲಾಗುತ್ತಿದೆ. ಇವೆಲ್ಲವೂ ಕೂಡ ಇಸ್ಲಾಂ ಮೂಲಭೂತವಾದಿಗಳಿಂದ ಹಿಂದೂಗಳ, ಮಹಿಳೆಯರ ಹಾಗೂ ಉಳಿದ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಇವೆಲ್ಲವು ನಡೆಯುತ್ತಿವೆ ಇಂದು ತುಂಬಾ ಚಿಂತೆಗೀಡು ಮಾಡಿದೆ ಎಂದು ಆರ್​​ಎಸ್​ಎಸ್ ಹೇಳಿದೆ.

ಈ ಬಗ್ಗೆ ಮಾತನ್ನು ಮುಂದುವರಿಸಿದ ದತ್ತಾತ್ರೆಯ ಹೊಸಬಾಳೆ ಈ ದೌರ್ಜನ್ಯಗಳು ಕೂಡಲೇ ನಿಲ್ಲಬೇಕು. ಮತ್ತು ಭಾರತ ಸರ್ಕಾರ ಈ ಬಗ್ಗೆ ಕೂಡಲೇ ಸಂಘರ್ಷವನ್ನು ಕೊನೆಗೊಳಿಸುವತ್ತ ಚಿತ್ತ ಹರಿಸಬೇಕು. ಅಲ್ಲದೇ ಈ ಒಂದು ಸಮಸ್ಯೆಯನ್ನು ಬಗೆಹರಿಸಲು ಜಾಗತಿಕ ಬೆಂಬಲ ತೆಗೆದುಕೊಂಡು ರಾಜತಾಂತ್ರಿಕ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಿಂದೂಗಳ ಹಕ್ಕಿಗಾಗಿ ಹೋರಾಟ ಮಾಡಿದ್ದೇ ತಪ್ಪಾಯ್ತಾ? ಬಾಂಗ್ಲಾದೇಶದಲ್ಲಿ ಸ್ವಾಮಿ ಚಿನ್ಮೋಯ್​ ಬಂಧನ!

ಚಿನ್ಮೋಯ್​ ಕೃಷ್ಣದಾಸ್​ ಅವರು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಶಾಂತಿಯಿಂದಲೇ ಪ್ರತಿಭಟನೆ ಮಾಡಿದ್ದರು. ಅವರನ್ನು ಬಂಧಿಸಿದ್ದು ಬಾಂಗ್ಲಾದೇಶ ಹಿಂದೂಗಳ ಮೇಲೆ ನಡೆಸುತ್ತಿರುವ ಅನ್ಯಾಯ ಹಾಗೂ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯಾರೇ ಈ ಬಗ್ಗೆ ಧ್ವನಿಯೆತ್ತಿದರೂ ಕೂಡ ಅವರನ್ನು ತುಳಿಯುವ ಕೆಲಸ ಬಾಂಗ್ಲಾದಲ್ಲಿ ಹೊಸದಾಗಿ ಶುರುವಾಗಿದೆ ಎಂದು ಕಿಡಿಕಾರಿದ್ದಾರೆ.

ಅಕ್ಟೋಬರ್​ನಲ್ಲಿ ವಿಜದಶಮಿಯ ದಿನವೂ ಕೂಡ ಆರ್​​ಎಸ್​ಎಸ್​ನ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಕೂಡ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಮಾತುಗಳನ್ನಾಡಿದ್ದರು ಈಗ ದತ್ತಾತ್ರೇಯ ಹೊಸಬಾಳೆಯವರು ಕೂಡಲೇ ಈ ಬಗ್ಗೆ ಒಂದು ನಿಲುವಿಗೆ ಕೇಂದ್ರ ಸರ್ಕಾರ ಬರಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment