/newsfirstlive-kannada/media/post_attachments/wp-content/uploads/2025/07/KGF-BAABU-CAR-1.jpg)
ಬೆಂಗಳೂರು: ಉದ್ಯಮಿ ಕೆಜಿಎಫ್ ಬಾಬುಗೆ (KGF Babu) ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ಟ್ಯಾಕ್ಸ್ ಕಟ್ಟಿಲ್ಲ ಎಂದು ಕಾರು ಸೀಜ್ ಮಾಡಲು ಆರ್ಟಿಓ ಅಧಿಕಾರಿಗಳು ಅವರ ನಿವಾಸಕ್ಕೆ ದೌಡಾಯಿಸಿದ್ದಾರೆ.
ರೋಲ್ಸ್ ರಾಯ್ಸ್ (Rolls Royce), ವೆಲ್ಫೇರ್ (Vellfire) ಸೇರಿ ಹಲವು ಐಷಾರಾಮಿ ಕಾರುಗಳನ್ನು ಕೆಜಿಎಫ್ ಬಾಬು ಹೊಂದಿದ್ದಾರೆ. ಆರ್ಟಿಓ ಅಧಿಕಾರಿಗಳು, ಕೆಜಿಎಫ್ ಬಾಬು ಬಳಿಯಿರುವ ಕಾರುಗಳ ಲಿಸ್ಟ್ ಮಾಡಿಕೊಂಡು ದಾಳಿ ಮಾಡಿದ್ದಾರೆ. ಆರ್ಟಿಓ ಜಂಟಿ ಆಯುಕ್ತರಾದ ಶೋಭಾ ನೇತೃತ್ವದಲ್ಲಿ ದಾಳಿಯಾಗಿದೆ. ಐಷಾರಾಮಿ ಕಾರುಗಳು ಬೇರೆಬೇರೆ ರಾಜ್ಯಗಳಲ್ಲಿ ರಿಜಿಸ್ಟ್ರೇಷನ್ ಆಗಿದೆ. ಹಾಗಾಗಿ ಟ್ಯಾಕ್ಸ್ ಕಟ್ಟಿರುವ ಬಗ್ಗೆ ಪರಿಶೀಲನೆ ಮಾಡಲು ಆರ್ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: ಇವತ್ತಿನಿಂದ ಧರ್ಮಸ್ಥಳ ಕೇಸ್ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ
ಬಿಗ್ಬಿ, ಅಮೀರ್ ಖಾನ್ರಿಂದ ಕಾರು ಖರೀದಿ
ಕೆಜಿಫ್ ಬಾಬುಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಂದ ಕಾರು ಖರೀದಿಸುವ ಖಯಾಲಿ ಇದೆ. ಅಂತೆಯೇ ಕೆಜಿಎಫ್ ಬಾಬು ಬಳಿ MH 11 AX 1 ರೋಲ್ಸ್ ರಾಯ್, MH 02 BB 2 ರೋಲ್ಸ್ ರಾಯ್ ಕಾರುಗಳಿವೆ. ಒಂದು ರೋಲ್ಸ್ ರಾಯ್ ಕಾರನ್ನು ಬಾಲಿವುಡ್ ಬಿಗ್ಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿದ್ದಾರೆ. MH 02 BB 2 ರೋಲ್ಸ್ ರಾಯ್ ಅಮೀರ್ ಖಾನ್ ಅವರಿಂದ ಪಡೆದಿದ್ದಾರೆ. ಅಮಿರ್ ಖಾನ್ ಒಂದು ವರ್ಷ ಬಳಸಿದ ನಂತರ, ಅದನ್ನು ಖರೀದಿಸಿದ್ದಾರೆ. MH 11 AX 1 ರೋಲ್ಸ್ ರಾಯ್ ಅನ್ನು ಅಮಿತಾಬ್ ಬಚ್ಚನ್ರಿಂದ ಖರೀದಿಸಿದ್ದಾರೆ.
ಇದನ್ನೂ ಓದಿ: ಅಂದು ಅಮ್ಮನಿಗೆ ಅವಮಾನ ಮಾಡಿದ್ದಕ್ಕೆ ಸೇಡು.. 10 ವರ್ಷ ಕಾಲ ಹುಡುಕಿ ಹೊಡೆದ ಮಗ..!
ಸೆಲೆಬ್ರೆಟಿ ಬಳಸೋ ಕಾರು ಮೇಲೆ ಕೆಜಿಎಫ್ ಬಾಬುಗೆ ಕ್ರೇಜ್ ಇದೆ. ಅದರಂತೆ ಸೆಲೆಬ್ರಿಟಿಗಳನ್ನು ಭೇಟಿಯಾಗಿ ಅವರು ಬಳಸುವ ಕಾರುಗಳನ್ನು ಖರೀದಿಸುತ್ತಾರೆ. ಅಂತೆಯೇ ಒಂದೊಂದು ಕಾರಿನ ಹಿಂದೆಯೂ ಒಂದೊಂದು ಕಥೆ ಇದೆ. ಇನ್ನೊಂದು ವಿಚಾರ ಅಂದರೆ ಮೊಮ್ಮಗಳು ಹುಟ್ಟಿದಾಗ ಅವಳಿಗಾಗಿ ವೆಲ್ಫೇರ್ ಕಾರನ್ನು ಖರೀದಿ ಮಾಡಿದ್ದಾರೆ. ಅಂತೆಯೇ ಹತ್ತಾರು ಐಷಾರಾಮಿ ಕಾರನ್ನು ಕೆಜಿಎಫ್ ಬಾಬು ಹೊಂದಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ರಕರ್ತ ಮುಂದಿನ ಉಪರಾಷ್ಟ್ರಪತಿ..? ರೇಸ್ನಲ್ಲಿರೋ ಇವರು ಯಾರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ