ರುದ್ರಣ್ಣ ಯಡವಣ್ಣ ಕೇಸ್​; ಸಚಿವೆ ಆಪ್ತ ಸೇರಿ ಮೂವರ‌ ವಿರುದ್ಧ FIR.. ಆರೋಪಿಗಳು ಎಸ್ಕೇಪ್

author-image
Bheemappa
Updated On
ರುದ್ರಣ್ಣ ಯಡವಣ್ಣ ಕೇಸ್​; ಸಚಿವೆ ಆಪ್ತ ಸೇರಿ ಮೂವರ‌ ವಿರುದ್ಧ FIR.. ಆರೋಪಿಗಳು ಎಸ್ಕೇಪ್
Advertisment
  • ಹೆಂಡತಿ ಬಳಿ ರುದ್ರಣ್ಣ ಮೊದಲು ಏನೇನು ಹೇಳಿಕೊಂಡಿದ್ದರು?
  • ಆರೋಪಿಗಳ ಬಂಧನಕ್ಕೆ‌ ವಿಶೇಷ ‌ತಂಡ‌ ರಚಿಸಲಾಗಿದೆ
  • ಕಾಲನ ಮನೆ ಸೇರಿದ SDA ಅಧಿಕಾರಿ ರುದ್ರಣ್ಣ ಯಡವಣ್ಣ

ರಾಜ್ಯದಲ್ಲಿ ಈ ಸರ್ಕಾರಿ ಅಧಿಕಾರಿಗಳಿಗೆ ಏನಾಗುತ್ತಿದೆ, ವರ್ಗಾವಣೆಯೋ, ಒತ್ತಡನೋ ಅಥವಾ ಕಿರುಕುಳನಾ?. ಈ ಎಲ್ಲಾ ಸರಣಿ ಪೆಡಂಭೂತಗಳಿಗೆ ಬೆದರಿ ಒಬ್ಬೊಬ್ಬ ಸರ್ಕಾರಿ ಅಧಿಕಾರಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಚೇರಿಯಲ್ಲೇ ರುದ್ರಣ್ಣ ಸಾವನ್ನಪ್ಪಿರುವುದು ಅವರ ಪತ್ನಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಇತ್ತ ಸಚಿವೆ ಹೆಬ್ಬಾಳ್ಕರ್ ಆಪ್ತನ ವಿರುದ್ಧ ಎಫ್​ಐಆರ್ ದಾಖಲಾಗಿದ್ದು ನಾಪತ್ತೆಯಾಗಿದ್ದಾರೆ.

ಎಸ್‌ಡಿಎ ನೌಕರ ರುದ್ರಣ್ಣ ಏಕಾಏಕಿ ಜೀವದ ಹಂಗೇ ಸಾಕು ಅಂತ ಸಾವಿಗೆ ಶರಣಾಗಿದ್ದರು. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಚಂದ್ರಶೇಖರ್ ಆತ್ಮಹತ್ಯೆ ಕಣ್ಮುಂದೆ ಇರುವಾಗಲೇ ವರ್ಗಾವಣೆ ಭೂತಕ್ಕೆ ಮತ್ತೊಬ್ಬ ಅಧಿಕಾರಿ ರುದ್ರಣ್ಣ ಯಡವಣ್ಣನವರ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಕಾಲನ ಮನೆ ಸೇರಿದ್ದು ಆತಂಕಕ್ಕೀಡುವಂತೆ ಮಾಡಿತ್ತು. ಈ ಬಗ್ಗೆ ಆಕ್ರೋಶ, ಕೋಪ-ತಾಪ ಭುಗಿಲೇಳುತ್ತಿರುವಾಗಲೇ ಅವರ ಪತ್ನಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

‘ತಹಶೀಲ್ದಾರ್ ಕಚೇರಿಯಲ್ಲಿ‌ ಟೆನ್ಶನ್​​ ಆಗ್ತಿದೆ‌ ಅಂತಿದ್ರು’

ನಿನ್ನೆ ವರ್ಗಾವಣೆ ಆದೇಶ ಬಂದ ಬೆನ್ನಲ್ಲೇ ರುದ್ರಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ನ್ಯೂಸ್​​ಫಸ್ಟ್​​ ಜೊತೆ ಮಾತನಾಡಿರುವ ರುದ್ರಣ್ಣ ಪತ್ನಿ, ಮೊನ್ನೆ ರಾತ್ರಿ ಪತಿ ರುದ್ರಣ್ಣ ‌ನನ್ನ ಜೊತೆಗೆ ಮಾತನಾಡಿದ್ದರು. ತಹಶೀಲ್ದಾರ್ ಕಚೇರಿಯಲ್ಲಿ‌ ಟೆನ್ಶನ್​​ ಆಗುತ್ತಿದೆ‌ ಅಂತಿದ್ರು. ವರ್ಗಾವಣೆ ‌ಮಾಡಿಸಿದ್ದಾರೆ ಅಂತ ನನ್ನ ಬಳಿ ಹೇಳಿದ್ದರು. ಇದಕ್ಕೆ ಕಾರಣರಾದವರನ್ನ ಶಿಕ್ಷಿಸಬೇಕು ಅಂತ ಆಗ್ರಹಿಸಿದ್ರು.

ಇದನ್ನೂ ಓದಿ:‘ಫೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ’.. ಸಾವಿಗೀಡಾದ SDA ರುದ್ರಣ್ಣನ ಬಗ್ಗೆ ತಾಯಿ ಏನಂದ್ರು?

publive-image

ರಾತ್ರಿ ನನ್ನ ಬಳಿ ವರ್ಗಾವಣೆ ಮಾಡಿಸಿದ್ದಾರೆ. ಆಫೀಸ್​​ನಿಂದ ಟೆನ್ಶನ್ ಆಗುತ್ತಿದೆ ಅಂತ ಹೇಳಿದ್ದರು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.

ಗಿರಿಜಾ, ರುದ್ರಣ್ಣ ಪತ್ನಿ

ಸಚಿವೆ ‌ಹೆಬ್ಬಾಳ್ಕರ್‌ ಆಪ್ತ ಸೋಮು ಸೇರಿ ಮೂವರ‌ ವಿರುದ್ಧ ಎಫ್ಐಆರ್

ಇನ್ನು ಬೆಳಗಾವಿಯ ‌ತಹಶೀಲ್ದಾರ್ ಕಚೇರಿಯಲ್ಲಿ ‌ರುದ್ರಣ್ಣ ‌ಪ್ರಕರಣಕ್ಕೆ ಸಂಬಂಧಿಸಿ ಸಚಿವೆ ಲಕ್ಷ್ಮಿ ‌ಹೆಬ್ಬಾಳ್ಕರ್‌ ಆಪ್ತ ಸೋಮು ಸೇರಿ ಮೂವರ‌ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳಗಾವಿ ‌ತಹಶೀಲ್ದಾರ್‌ ಬಸವರಾಜ್ ನಾಗರಾಳ, ಹೆಬ್ಬಾಳ್ಕರ್ ಪಿಎ‌ ಸೋಮು, ತಹಶೀಲ್ದಾರ್ ಕಚೇರಿಯ ಎಫ್‌ಡಿಸಿ ಅಶೋಕ ಕಬ್ಬಳಿಗೇರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ‌ದಾಖಲಾಗ್ತಿದ್ದಂತೆ‌‌ ಮೂವರು ಆರೋಪಿಗಳು ನಾಪತ್ತೆ ‌ಆಗಿದ್ದು ಬಂಧನಕ್ಕೆ‌ ವಿಶೇಷ ‌ತಂಡ‌ ರಚಿಸಲಾಗಿದೆ.

ವರ್ಗಾವಣೆ ದಂಧೆ ಎಂಬ ರಣಹದ್ದು ರುದ್ರಣ್ಣನ ಪ್ರಾಣಪಕ್ಷಿಯನ್ನು ನುಂಗಿಹಾಕಿದೆ. ಇದಕ್ಕೆ ಕಾರಣರಾದವರನ್ನು ಯಾರ ಹಸ್ತಕ್ಷೇಪ ಇಲ್ಲದಂತೆ ಪೊಲೀಸರು ಬಂಧಿಸಿ ಶಿಕ್ಷಿಸಬೇಕಿದೆ. ಈ ಮೂಲಕ ರುದ್ರಣ್ಣ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment