newsfirstkannada.com

ಬಸ್​ ಏರಲು ನೂಕು ನುಗ್ಗಲು.. ಚಕ್ರದಡಿ ಸಿಲುಕಿ ಚಾಲಕ ಕಂ ನಿರ್ವಾಹಕ ಸಾವು

Share :

Published January 19, 2024 at 8:01am

    KSRTC ಬಸ್ ಏರುವಾಗ ನಡೆದ ಘಟನೆ

    ಬಸ್​ ಏರುವಾಗ ಚಕ್ರದಡಿ ಸಿಲುಕಿದ ವ್ಯಕ್ತಿ

    ಸ್ಥಳದಲ್ಲೇ ಸಾವನ್ನಪ್ಪಿದ 50 ವರ್ಷದ ಚಾಲಕ ಕಂ ನಿರ್ವಾಹಕ

ಬಾಗಲಕೋಟೆ: ಬಸ್ ಹತ್ತುವ ಭರದಲ್ಲಿ‌ ನೂಕು ನುಗ್ಗಲು ಸಂಭವಿಸಿ ಬಸ್ ಚಕ್ರದಡಿ ಸಿಲುಕಿ ಚಾಲಕ ಕಂ ನಿರ್ವಾಹಕ ಸಾವನ್ನಪ್ಪಿದ ಘಟನೆ ಬಾಗಲಕೋಟೆಯ ‌ನವನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಗದ್ಯಪ್ಪ ಗಡ್ಡಿ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಗದ್ಯಪ್ಪ ಗಡ್ಡಿ ಕೌಜಗನೂರು ಗ್ರಾಮದ ನಿವಾಸಿಯಾಗಿದ್ದು, ಬಾಗಲಕೋಟೆ ‌ಜಿಲ್ಲೆ ಹುನಗುಂದ ತಾಲ್ಲೂಕಿನ ಗ್ರಾಮದರಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಕೆ ಎಸ್ ಆರ್ ಟಿ ಸಿ ಡಿಪೊದಲ್ಲಿ ಕೆಲಸ ಮಾಡುತ್ತಿದ್ದರು.

ಆದರೆ ಬಾಗಲಕೋಟೆಯಿಂದ ಇಳಕಲ್ ಕಡೆ ಹೊರಟಿದ್ದ ಕೆ ಎಸ್ ಆರ್ ಟಿ ಸಿ ಬಸ್ ಏರುವ ಸಮಯದಲ್ಲಿ ನೂಕು ನುಗ್ಗಲಾಗಿ ಬಸ್​ ಚಕ್ರದಡಿ ಸಿಲುಕಿ ಗದ್ಯಪ್ಪ ಗಡ್ಡಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಸ್​ ಏರಲು ನೂಕು ನುಗ್ಗಲು.. ಚಕ್ರದಡಿ ಸಿಲುಕಿ ಚಾಲಕ ಕಂ ನಿರ್ವಾಹಕ ಸಾವು

https://newsfirstlive.com/wp-content/uploads/2024/01/Bagalkote-3.jpg

Load More