newsfirstkannada.com

ಭಾರತದ ಪ್ಲಾನ್ ಉಲ್ಟಾ ಮಾಡಿದ ರಷ್ಯಾ.. ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡಲು ನೌಕೆ ‘ಲೂನಾ-25’ ಉಡಾವಣೆ..!

Share :

Published August 11, 2023 at 9:17am

Update August 11, 2023 at 9:22am

    ಚಂದ್ರಯಾನ-3ಕ್ಕಿಂತ ಮುನ್ನವೇ ಲ್ಯಾಂಡಿಂಗ್

    ಆ.23ರಂದು ಚಂದ್ರನ ತಲುಪುವ ಚಂದ್ರಯಾನ-3

    ಜು.14ರಂದು ಉಡಾವಣೆಯಾಗಿದ್ದ ಚಂದ್ರಯಾನ-3

ಇಸ್ರೋ ಚಂದ್ರಯಾನ-3 ಉಡಾವಣೆ ಮಾಡಿದ್ದು, ಆಗಸ್ಟ್​ 23 ರಂದು ಚಂದ್ರನ ಅಂಗಳ ತಲುಪಲಿದೆ. ಆ ಕ್ಷಣಕ್ಕಾಗಿ ಇಡೀ ವಿಶ್ವವೇ ಕಾದು ಕೂತಿರುವ ಹೊತ್ತಿನಲ್ಲಿ ರಷ್ಯಾ ಕೂಡ ಚಂದ್ರನಿದ್ದಲ್ಲಿಗೆ ಹೊರಟಿದೆ.

ಇವತ್ತು ಬೆಳಗ್ಗೆ ಲೂನಾ-25 ಉಡಾವಣೆ ಮಾಡುವ ಮೂಲ ರಷ್ಯಾದ ಚಂದ್ರಯಾನ ಶುರುಮಾಡಿದೆ. ವೋಸ್ಟೋನಿ ಕಾಸ್ಮೋಡ್ರೋಮ್​ನಿಂದ ಸೋಯುಜ್ 2.1 ರಾಕೆಟ್ ಲೂನಾ-25 ಅನ್ನು ಹೊತ್ತೊಯ್ದಿದೆ.

ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಭಾರತ ಪ್ಲಾನ್ ಮಾಡಿಕೊಂಡಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್​ ಲ್ಯಾಂಡಿಂಗ್ ಮಾಡಿದ ಏಕೈಕ ದೇಶ ಭಾರತವೆಂಬ ಹೆಗ್ಗಳಿಕೆ ಪಡೆಯುವ ಗುರಿ ಇಸ್ರೋದಾಗಿತ್ತು. ಆದರೆ, ರಷ್ಯಾ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಪ್ಲಾನ್ ಮಾಡಿದೆ. ರಷ್ಯಾದ ಲೂನಾ-25 ಆಗಸ್ಟ್ 21 ರಂದೇ ಲ್ಯಾಂಡ್ ಆಗಲಿದೆ.

ಇಸ್ರೋದಿಂದ ಶುಭಾಶಯ

ಬರೋಬ್ಬರಿ 47 ವರ್ಷಗಳ ಬಳಿಕ ರಷ್ಯಾ ಚಂದ್ರನ ಕಾರ್ಯಾಚರಣೆ ಶುರು ಮಾಡಿದೆ. ಇನ್ನು ಲೂನಾ-25 ಚಂದ್ರನಿದ್ದಲ್ಲಿಗೆ ಕಳುಹಿಸಿರುವ ರಷ್ಯಾದ ವಿಜ್ಞಾನಿಗಳಿಗೆ ನಮ್ಮ ಇಸ್ರೋ ಶುಭಾಶಯ ತಿಳಿಸಿದೆ. ಜುಲೈ 14 ರಂದು ಇಸ್ರೋ ಚಂದ್ರಯಾನ-3 ನೌಕೆಯನ್ನು ಕಳುಹಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ 23 ರಂದು ಚಂದ್ರನ ಅಂಗಳವನ್ನು ತಲುಪಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಪ್ಲಾನ್ ಉಲ್ಟಾ ಮಾಡಿದ ರಷ್ಯಾ.. ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡಲು ನೌಕೆ ‘ಲೂನಾ-25’ ಉಡಾವಣೆ..!

https://newsfirstlive.com/wp-content/uploads/2023/08/LUNA-25.jpg

Load More