/newsfirstlive-kannada/media/post_attachments/wp-content/uploads/2025/07/GOkarna-2.jpg)
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಿಂದ ಸುಮಾರು 1 ಕಿಲೋ ಮೀಟರ್ ದೂರದಲ್ಲಿ ರಾಮತೀರ್ಥ ಬೆಟ್ಟವಿದೆ. ಆ ಬೆಟ್ಟದಲ್ಲಿರೋ ನಿಗೂಢ ಗುಹೆಯಲ್ಲಿ ನಾಲ್ಕೈದು ದಿನದ ಹಿಂದೆ ಅಷ್ಟೇ ರಷ್ಯಾ ಮಹಿಳೆಯ ಪತ್ತೆಯಾಗಿದ್ಲು. ಅದು ಇಡೀ ದೇಶಕ್ಕೆ ಶಾಕ್ ಆಗಿತ್ತು. ರಾಮತೀರ್ಥ ಬೆಟ್ಟದಲ್ಲಿ ವಿಷಜಂತುಗಳು, ಪ್ರಾಣಿಗಳು ಇರೋ ಕಾಡು. ಆ ಕಾಡಿನಲ್ಲಿ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆ ಗುಹೆಯಲ್ಲಿ ವಾಸವಾಗಿದ್ಲು.
ಸ್ಥಳೀಯ ಪೊಲೀಸ್ರು ಮತ್ತು ಫಾರಿಸ್ಟ್ ಇಲಾಖೆ ಅವ್ರು ಒಂದೂವರೆ ಗಂಟೆಗಳ ಕಾಲ ಮಾತನಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ರು. ಅಂತಿಮವಾಗಿ ಮಹಿಳೆಯನ್ನ ಆಕೆಯ ಜೊತೆಗಿದ್ದ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿ ಬೆಂಗಳೂರಿಗೆ ಕರ್ಕೊಂಡ್ ಬರಲಾಗಿದೆ. ಈ ನಡುವೆ ರಷ್ಯಾ ಮಹಿಳೆಯನ್ನ ರಷ್ಯಾಗೆ ಕಳುಹಿಸ್ತಾಗುತ್ತಾ? ಇಲ್ಲವೇ ಅವಳ ಇಚ್ಛೆ ಅಂತೇ ಇಲ್ಲೇ ವಾಸ ಮಾಡೋದಕ್ಕೆ ಅವಕಾಶ ಕೊಡ್ತಾರಾ? ಅನ್ನೋ ಪ್ರಶ್ನೆ ಕಾಣಿಸ್ಕೊಳ್ತಾ ಇರೋ ಮಧ್ಯಯೇ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ಪೊಲೀಸ್ ಲವ್‌ಸ್ಟೋರಿ: ಮದುವೆಯಾಗಿದ್ರೂ ಹೋಮ್ಗಾರ್ಡ್ ಜೊತೆ ಲವ್ವಿ ಡವ್ವಿ; ಪೆಟ್ರೋಲ್ ಹಾಕಿ ಸುಟ್ಟಿದ್ದೇಕೆ?
ಇದೀಗ ಆಕೆಯನ್ನ ರಕ್ಷಣೆ ಮಾಡಿ ಬೆಂಗಳೂರಿಗೆ ಕರ್ಕೊಂಡ್ ಬರ್ತಾ ಇದ್ದಂತೆ ಆಕೆಯ ಬಾಯ್‌ಫ್ರೆಂಡ್ ಓಡೋಡಿ ಬಂದಿದ್ದಾನೆ. ಈತನ ಹೆಸ್ರು ಡ್ರೋರ್ ಗೋಲ್ಡ್ ಸ್ಟೀನ್.. ಇಸ್ರೇಲ್ ಮೂಲದ ವ್ಯಕ್ತಿ ಈತ. ರಷ್ಯಾ ಮಹಿಳೆಯ ಜೊತೆಗಿದ್ದ ಇಬ್ಬರು ಮುದ್ದಾಗ ಮಕ್ಕಳ ಡ್ಯಾಡಿ ಈತನೇ ಆಗಿದ್ದಾನೆ. ಮಾಧ್ಯಮಗಳಲ್ಲಿ ರಷ್ಯಾ ಮಹಿಳೆಯನ್ನ ಗೋಕರ್ಣ ಗುಹೆಯಿಂದ ರಕ್ಷಣೆ ಮಾಡ್ತಾ ಇದ್ದಂತೆ ಆತ ಇಸ್ರೇಲ್‌ನಿಂದ ಓಡೋಡಿ ಬಂದಿದ್ದಾನೆ. ಹಾಗೇ ಬಂದವ್ನು ತನ್ನ ಕಥೆಯನ್ನ ಹೇಳ್ಕೊಂಡಿದ್ದಾನೆ.
ಗುಹೆ ಲೇಡಿ.. ಇಸ್ರೇಲ್ ಡ್ಯಾಡಿ!
ರಷ್ಯಾ ಮಹಿಳೆ ನಿನಾ ಕುಟಿನಾ 2016 ರಲ್ಲಿ ಭಾರತಕ್ಕೆ ಬರ್ತಾಳೆ. ಹಾಗೇ ಬಂದವಳು ಗೋವಾದಲ್ಲಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ತಾಳೆ. ಬಟ್, 2017ರ ವೇಳೆಗೆ ರಷ್ಯಾ ಮಹಿಳೆಗೂ? ಇಸ್ರೇಲ್‌ನ ಡೋರ್ ಗೋಲ್ಡ್ ಸ್ಟೀನ್‌ಗೂ ಪರಿಚಯವಾಗುತ್ತೆ. ಆ ಪರಿಚಯವೇ ಸ್ನೇಹಕ್ಕೆ ತಿರುಗುತ್ತೆ. ಹಾಗೇ ಪ್ರೀತಿಯೂ ಚಿಗುರೊಡೆಯುತ್ತೆ. ಇಬ್ಬರು ಸೇರಿ ಕಂಪನಿಗೆ ರಜೆ ಇರೋ ಸಮಯದಲ್ಲಿ ಭಾರತದ ವಿವಿಧ ಪ್ರವಾಸಿ ಸ್ಥಳಗಳಿಗೆ ಸುತ್ತಾಡ್ತಾರೆ. ಹಾಗೇ ಇಬ್ಬರೂ ರಿಲೇಷನ್‌ಶಿಪ್‌ನಲ್ಲಿ ಇದ್ಕೊಂಡು ಜೊತೆ ಜೊತೆಯಾಗಿ ವಾಸ ಮಾಡ್ತಾರೆ. ಆ ಸಂದರ್ಭದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹುಡ್ತಾರೆ. ಆ ಮಕ್ಕಳೇ ಗೋಕರ್ಣದಲ್ಲಿ ಮಹಿಳೆ ಜೊತೆ ಇದ್ದ ಹೆಣ್ಣು ಮಕ್ಕಳು.
ಇದನ್ನೂ ಓದಿ: ಇಬ್ಬರು ಪುಟಾಣಿ ಹೆಣ್ಮಕ್ಕಳು, ಒಂದು ಬೆಕ್ಕು! ಗೋಕರ್ಣದ ದಟ್ಟ ಕಾಡಿನ ಪುಟ್ಟ ಗುಹೆಯಲ್ಲಿ ರಷ್ಯಾ ಮಹಿಳೆ ವಾಸ..!
ಗೋವಾದಲ್ಲಿ ಇರುವಾಗ್ಲೇ ರಷ್ಯಾ ಮಹಿಳೆ ಗೋಕರ್ಣದ ಓಮ್ ಬೀಚ್‌ಗೆ ಬಂದು ಹೋಗಿ ಮಾಡ್ತಾ ಇರ್ತಾಳೆ. ಬಟ್, ಆಧ್ಯಾತ್ಮ ಆಕೆಯನ್ನ ಸೆಳೆಯುತ್ತೆ. ಅದು ಮುಂದೊಂದು ದಿನ ಬಾಯ್‌ಫ್ರೆಂಡ್‌ನಿಂದ ದೂರವಾದ್ಮೇಲೆ ಗೋಕರ್ಣದ ಗುಹೆಗೆ ಬಂದು ವಾಸ ಮಾಡುವಂತೆ ಮಾಡುತ್ತೆ.
ಕೋವಿಡ್ ವೇಳೆ ಆತ ಇಸ್ರೇಲ್‌ಗೆ, ರಷ್ಯಾ ಲೇಡಿ ಕಣ್ಮರೆ!
ರಷ್ಯಾ ಲೇಡಿಗೂ? ಇಸ್ರೇಲ್ ಡ್ಯಾಡಿಗೂ? ಪರಿಚಯವಾಗಿದ್ದು ಅದು ಪ್ರೀತಿಗೆ ಟರ್ನ್ ಆಗಿದ್ದು 2019 ರಲ್ಲಿ. ಇವ್ರು ಗೋವಾದಲ್ಲೇ ಇಬ್ಬರು ಹೆಣ್ಣು ಮಕ್ಕಳ ಜೊತೆ ವಾಸವಾಗಿರ್ತಾರೆ. ಕೋವಿಡ್ ಬಂದಾಗ ಇಡೀ ವಿಶ್ವದಲ್ಲಿ ಯಾವ್ ರೀತಿಯಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣವಾಗಿತ್ತು ಅನ್ನೋದ್ ಎಲ್ಲರಿಗೂ ಗೊತ್ತಿರೋ ವಿಚಾರ. ಅದೆಷ್ಟೋ ತಂದೆ ತಾಯಿಯರು ಮಕ್ಕಳಿಂದ ದೂರವಾದ್ರು. ಅದೆಷ್ಟೋ ಮಕ್ಕಳು ತಂದೆ ತಾಯಿಯಿಂದ ದೂರವಾದ್ರು. ಅಂತಾ ಸಂದಿಗ್ಧ ಪರಿಸ್ಥಿತಿ ರಷ್ಯಾ ಲೇಡಿ ಜೀವನದಲ್ಲೂ ಎದುರಾಗಿತ್ತು. ಇಸ್ರೇಲ್‌ನ ಈ ವ್ಯಕ್ತಿ ಗೋವಾದಿಂದ ನೇರವಾಗಿ ಇಸ್ರೇಲ್‌ಗೆ ಹೋಗಿ ಪರಿಸ್ಥಿತಿ ನಿರ್ಮಾಣವಾಗುತ್ತೆ. ಅಲ್ಲಿಗೆ ಹೋದ್ಮೇಲೆ ತನ್ನ ಗೆಳತಿ ರಷ್ಯಾ ಲೇಡಿಗೆ ಮನೆ ಬಾಡಿಗೆ, ಮಕ್ಕಳನ್ನ ಸಾಕೋದಕ್ಕೆ ಬೇಕಾದ ಹಣ, ಖರ್ಚಿಗೆ ಬೇಕಾಗಿರೋ ಹಣವನ್ನ ಕಾಲ ಕಾಲಕ್ಕೆ ಕುಳುಹಿಸ್ತಾ ಇರ್ತಾನೆ. ಆದ್ರೆ, ಒಂದ್ ದಿನ ಈಕೆ ಫೋನ್ ಕಾಲ್‌ಗೆ ಸಿಗೋದಿಲ್ಲ. ಗೋವಾದಲ್ಲಿ ವಾಸವಾಗಿರೋ ಬಿಲ್ಡಿಂಗ್‌ನಲ್ಲೂ ಇರೋದಿಲ್ಲ. ನಿಗೂಢವಾಗಿ ಕಣ್ಮರೆಯಾಗಿ ಬಿಡ್ತಾಳೆ.
ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದ, ಆದ್ರೂ ಪತ್ತೆಯಾಗಿರ್ಲಿಲ್ಲ!
ಇಸ್ರೇಲ್‌ನಲ್ಲಿ ವಾಸವಾಗಿದ್ದ ಡ್ರೋನ್ ಗೋಲ್ಡ್ ಸ್ಟೀನ್ ಆಗಾಗ ತನ್ನ ಗೆಳತಿಗೆ ಫೋನ್ ಮಾಡ್ತಾ... ಮಕ್ಕಳ ಜೊತೆ ಮಾತಾಡ್ತಾ ಇದ್ದ. ಆದ್ರೆ, ಒಮ್ಮೆ ದಿಢೀರ್ ಅಂತಾ ನಿನಾ ಕುಟಿನಾ ಕಣ್ಮರೆಯಾಗಿ ಬಿಡ್ತಾಳೆ. ಫೋನ್‌ಗೆ ಸಿಗೋದಿಲ್ಲ, ಮನೆಯಲ್ಲಿ ವಾಸವಾಗಿರೋ ವಿಳಾಸಕ್ಕೆ ಸ್ನೇಹಿತರನ್ನ, ಪೊಲೀಸರನ್ನ ಕಳುಹಿಸಿದ್ರೂ ಆ ಮನೆಯಲ್ಲಿ ಇರೋದಿಲ್ಲ. ಹೀಗಾಗಿ ತನ್ನ ಇಬ್ಬರು ಮಕ್ಕಳು ಏನಾದ್ರೂ ಅನ್ನೋ ಟೆನ್ಷನ್ ಇಸ್ರೇಲ್ ವ್ಯಕ್ತಿಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತೆ. ಹೀಗಾಗಿ 2014 ರಲ್ಲಿ ಗೋವಾದಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಡ್ತಾನೆ.
ಇದನ್ನೂ ಓದಿ: ಗುಹೆಯಲ್ಲಿ ಸಿಕ್ಕ ರಷ್ಯಾ ಲೇಡಿಗೆ ಲವ್ ಅಫೇರ್.. ಇಸ್ರೇಲ್‌ನಿಂದ ಓಡೋಡಿ ಬಂದ ಪ್ರಿಯಕರ.. ಮುಂದೆ..?
ದೂರು ದಾಖಲು ಮಾಡ್ಕೊಂಡಿರೋ ಪೊಲೀಸ್ರು ಮಹಿಳೆಯನ್ನ, ಇಬ್ಬರು ಮಕ್ಕಳನ್ನ ಹುಡುಕಾಡೋ ಪ್ರಯತ್ನ ಮಾಡ್ತಾರೆ. ಆದ್ರೆ, ಪೊಲೀಸ್ರಿಗೂ ಮಹಿಳೆ ಎಲ್ಲಿಗೆ ಹೋಗಿದ್ದಾಳೆ? ಇಬ್ಬರು ಮಕ್ಕಳು ಏನಾದ್ರು? ಅನ್ನೋದಕ್ಕೆ ಯಾವುದೇ ಸುಳಿವು ಪತ್ತೆಯಾಗೋದಿಲ್ಲ. ಇದು ಇಸ್ರೇಲ್ ವ್ಯಕ್ತಿಗೆ ಇನ್ನಷ್ಟು ಆತಂಕ ಹೆಚ್ಚಿಸುತ್ತೆ. ತಾನು ಸಾಕಿದ್ದ ಮುದ್ದಾದ ಮಕ್ಕಳು, ಗೆಳತಿ ಏನಾದ್ಲೋ ಅನ್ನೋ ಭೀತಿ ಕ್ಷಣ ಕ್ಷಣಕ್ಕೂ ಕಾಡುತ್ತಲೇ ಇರುತ್ತೆ. ಆದ್ರೆ, ಎಂದಾದ್ರೂ ಒಂದ್ ದಿನ ಸಿಕ್ತಾರೆ ಅನ್ನೋ ಆತ್ಮವಿಶ್ವಾಸ ಮನಸ್ಸಿನ ಎಲ್ಲೋ ಒಂದ್ ಮೂಲೆಯಲ್ಲಿ ಮನೆಮಾಡಿರುತ್ತೆ. ಅಂತೂ ಆ ಆಸೆಗೆ ಈಗ ಜೀವ ಬಂದಿದೆ.
ಎಲ್ಲಿಗೆ ಹೋಗಿದ್ದಳು..?
ಆಕೆಯ ವೀಸಾ ಅವಧಿ ಮುಗಿದು ಹೋಗಿತ್ತು. ಹೀಗಾಗಿ ತನ್ನ ಇಬ್ಬರು ಮಕ್ಕಳನ್ನ ಕರ್ಕೊಂಡ್ ನೇಪಾಳಕ್ಕೆ ಹೋಗಿದ್ಲು ಅನ್ನೋ ವಿಚಾರ ಗೊತ್ತಾಗುತ್ತೆ. ವೀಸಾ ಅವಧಿ ಮುಗಿದ್ಮೇಲೆ ಈಕೆ ತನ್ನ ತವರು ರಷ್ಯಾಗೂ ಹೋಗಿಲ್ಲ. ಬಾಯ್‌ಫ್ರೆಂಡ್ ಇರೋ ಇಸ್ರೇಲ್‌ಗೂ ಪ್ರಯಾಣಿಸಿಲ್ಲ. ಈಕೆ ಹೋಗಿದ್ದು ನೇಪಾಳ. ಅಲ್ಲಿದ್ದಾಗಲೇ ಆಗಾಗ ಗೋಕರ್ಣಕ್ಕೆ ಬಂದು ಹೋಗಿ ಮಾಡ್ತಾ ಇದ್ಲು. ಹಾಗೇ ಬಂದಾಗ ರಾಮತೀರ್ಥ ಬೆಟ್ಟದಲ್ಲಿದ್ದ ಗುಹೆಯಲ್ಲಿ ಕೆಲವು ದಿನಗಳ ಕಾಲ ವಾಸ ಮಾಡಿ ಪುನಃ ನೇಪಾಳಕ್ಕೆ ರಿಟರ್ನ್ ಹೋಗ್ತಾ ಇದ್ಲು. ಬಟ್, ಈ ಬಾರಿ ಗೋಕರ್ಣಕ್ಕೆ ಬಂದವಳು ತಾನು ಇಲ್ಲಿಯ ಗುಹೆಯಲ್ಲಿ ದೀರ್ಘಾವಧಿ ಇರ್ಬೇಕು.. ದೇವರ ಪೂಜೆ ಧ್ಯಾನದಲ್ಲಿ ತೊಡಗಿಸ್ಕೊಳ್ಳಬೇಕು ಅಂತಾ ಡಿಸೈಡ್ ಮಾಡಿದ್ಲು. ಬಟ್, ಪೊಲೀಸ್ರು ಗಸ್ತು ತಿರುಗೋ ವೇಳೆ ಪತ್ತೆಯಾಗಿದ್ದು. ಅದು ದೊಡ್ಡ ಸುದ್ದಿಯಾಗಿದೆ. ಆಸುದ್ದಿ ಆಕೆಯ ಬಾಯ್‌ಫ್ರೆಂಡ್ ಇಸ್ರೇಲಿಗನ ಕಿವಿಗೂ ಮುಟ್ಟಿದೆ. ಈಗ ರಷ್ಯಾ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನ ರಷ್ಯಾಗೆ ಕಳುಹಿಸ್ಬೇಕಾ? ಇಲ್ಲವೇ ಇಸ್ರೇಲಿಗ ಹೇಳೋ ರೀತಿಯಲ್ಲಿ ಆತನ ಜೊತೆಗೆ ಮಕ್ಕಳನ್ನ ಕಳುಹಿಸ್ಬೇಕಾ? ಅನ್ನೋ ಪ್ರಶ್ನೆ ಎದುರಾಗ್ತಿದೆ.
ಇದನ್ನೂ ಓದಿ: ಬೆಟ್ಟಿಂಗ್ ಗೀಳಿಗೆ ಬಿದ್ದು ಪೊಲೀಸಪ್ಪ ದುರಂತ ಅಂತ್ಯ; ಹೆಂಡತಿ, ಇಬ್ಬರು ಮಕ್ಕಳು ಅನಾಥ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ