ವ್ಯಾಲೆಂಟೈನ್ ಡೇಗೆ ಗಿಫ್ಟ್​ ಕೊಟ್ಟ ಪೋರ್ಶ್​ ಕಾರು ತಿರಸ್ಕರಿಸಿದ ಪತ್ನಿ.. ರೊಚ್ಚಿಗೆದ್ದ ಪತಿ ಮಾಡಿದ್ದೇನು ಗೊತ್ತಾ?

author-image
Gopal Kulkarni
Updated On
ವ್ಯಾಲೆಂಟೈನ್ ಡೇಗೆ ಗಿಫ್ಟ್​ ಕೊಟ್ಟ ಪೋರ್ಶ್​ ಕಾರು ತಿರಸ್ಕರಿಸಿದ ಪತ್ನಿ.. ರೊಚ್ಚಿಗೆದ್ದ ಪತಿ ಮಾಡಿದ್ದೇನು ಗೊತ್ತಾ?
Advertisment
  • ವ್ಯಾಲೆಂಟೈನ್​ ಡೇಗೆ ಪತ್ನಿಗೆ ದುಬಾರಿ ಪೋರ್ಶ್​​ ಕಾರು ಗಿಫ್ಟ್ ನೀಡಿದ ಪತಿ
  • ಹಲವು ದಿನಗಳಿಂದ ನಡೆದಿದ್ದ ಜಗಳ ಕೊನೆಗೊಳಿಸಲು ಗಂಡನ ಪ್ರಯತ್ನ
  • ಪತಿ ನೀಡಿದ ಸರ್​ಪ್ರೈಸ್​ ಗಿಫ್ಟ್​ ಸ್ವೀಕರಿಸದ ಹೆಂಡತಿ, ಪತಿ ಮಾಡಿದ್ದೇನು?

ವ್ಯಾಲೆಂಟೈನ್​ ಡೇ ಬಂದ್ರೆ ಸಾಕು ಯಾವುದೇ ಹುಡುಗಿ ಇರಲಿ ಪತ್ನಿ ಇರಲಿ, ತನ್ನ ಪತಿ ಅಥವಾ ಗೆಳೆಯ ಏನು ಗಿಫ್ಟ್ ಕೊಡ್ತಾನೆ ಎಂದು ಕಾದು ಕುಳಿತಿರುತ್ತಾರೆ. ಅವನು ಏನಾದರೂ ವಿಶೇಷ ಗಿಫ್ಟ್​ ತಂದು ಕೊಟ್ಟು, ಮಂಡಿಯೂರಿ ಒಂದು ಗುಲಾಬಿ ಹೂ ಕೊಟ್ಟರೆ ಪತ್ನಿ ಆಗಲಿ ಅಥವಾ ಗೆಳತಿಯಾಗಲಿ ಅವಳ ಮೊಗದಲ್ಲಿಯೇ ಒಂದು ಗುಲಾಬಿ ಹೂವು ಅರಳಿಕೊಂಡು ಬಿಡುತ್ತದೆ. ಹೀಗಿರುವಾಗ ರಷ್ಯಾದಲ್ಲಿ ಇದಕ್ಕೆ ವಿರುದ್ಧವಾದ ಒಂದು ಘಟನೆ ನಡೆದಿದೆ.

ರಷ್ಯಾದಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ವ್ಯಾಲೆಂಟೈನ್​​ ಡೇಗೆ ಸರ್​ಪ್ರೈಸ್ ನೀಡಲು ಐಷಾರಾಮಿ ಹಾಗೂ ದುಬಾರಿಯಾದ ಪೋರ್ಶ್​ ಮಕಾನ್ ಕಾರನ್ನು ಗಿಫ್ಟ್​ ನೀಡಿದ್ದಾನೆ. ಪತ್ನಿ ಮಾತ್ರ ನನಗೆ ನಿನ್ನ ಗಿಫ್ಟ್​ ಬೇಕಿಲ್ಲ ಎಂದು ತಿರಸ್ಕರಿಸಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಪತಿ ಇಡೀ ಕಾರನ್ನು ಕಸದ ಗುಂಡಿಗೆ ತಂದು ಎಸೆದಿದ್ದಾನೆ. ಗಾರ್ಬೆಜ್ ಕಂಟೇನರ್​ನಲ್ಲಿ ಎಸೆದ ದುಬಾರಿ ಕಾರು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಮಾತ್ರವಲ್ಲ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ತಾಣವಾಗಿಯೂ ಕೂಡ ಅದು ಬದಲಾಗಿದೆ.

ಇದನ್ನೂ ಓದಿ:ಇವು ವಿಶ್ವದ ಟಾಪ್ 5 ಪುಟ್ಟ ಹಾಗೂ ಸುಂದರ ದೇಶಗಳು; ಪುಟಾಣಿ ದೇಶಗಳ ವಿಶೇಷತೆಗಳು ಏನು?

ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇತ್ತೀಚೆಗೆ ಪತಿ ಹಾಗೂ ಪತ್ನಿಯ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಬರುತ್ತಿದ್ದವಂತೆ. ಇದನ್ನು ತಣ್ಣಗೆ ಮಾಡಲು ಹಾಗೂ ಪತ್ನಿಯನ್ನು ಖುಷಿಪಡಿಸಲೆಂದೇ ಸುಮಾರು 27 ಲಕ್ಷ ರೂಪಾಯಿ ಬೆಲೆ ಬಾಳುವ ಪೋರ್ಶ್​ ಮಕಾನ್ ಕಾರನ್ನು ಸರ್​ಪ್ರೈಸ್​ ಹಾಗೂ ವ್ಯಾಲೆಂಟೈನ್​​ ಡೇ ಗಿಫ್ಟಾಗಿ ತಂದು ಕೊಟ್ಟಿದ್ದಾನೆ. ಆದ್ರೆ ಪತ್ನಿ ಮಾತ್ರ ಅದನ್ನು ಸ್ವೀಕರಿಸಲು ಒಪ್ಪಿಕೊಂಡಿಲ್ಲ. ಇದರಿಂದ ರೊಚ್ಚಿಗೆದ್ದ ಪತಿ ಇಡೀ ಕಾರನ್ನು ಕ್ರೇನ್ ಸಹಾಯದಿಂದ ಎತ್ತಿ ಗಾರ್ಬೆಜ್​ ಕಂಟೇನರ್​​ ಒಳಗೆ ಎಸೆದಿದ್ದಾನೆ.

publive-image

ಮಹಿಳಾ ದಿನಾಚರಣೆಯಂದು ಮನೆಯಲ್ಲಿ ಅಪಘಾತವಾಗಿ ಕೆಟ್ಟು ನಿಂತಿದ್ದ ಕಾರನ್ನು ರಿಪೇರಿ ಮಾಡಿಸಿ ಮಾರ್ಚ್​ 8 ರಂದು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಪತ್ನಿಗೆ ಅದನ್ನು ಗಿಫ್ಟ್ ಮಾಡಲು ಮೊದಲು ಪತಿ ಪ್ಲ್ಯಾನ್ ಮಾಡಿದ್ದನಂತೆ. ಆದರೆ ಅದು ತುಂಬಾ ಲೇಟಾಗುತ್ತೆ ಎಂದುಕೊಂಡು ವ್ಯಾಲೆಂಟೈನ್​ ಡೇ ದಿನವೇ ಅವಳಿಗೆ ಅಚ್ಚರಿ ಮೂಡವಂತೆ ಮಾಡಲು ಹಾಗೂ ಖುಷಿ ಪಡಿಸಲು ಈ ದುಬಾರಿ ಪೋರ್ಶ್ ಕಾರನ್ನು ಗಿಫ್ಟ್ ನೀಡಿದ್ದಾನೆ.

ಇದನ್ನೂ ಓದಿ:ಅಮೆರಿಕಾದಲ್ಲಿ ಘೋರ ದುರಂತ.. ಸಾವು-ಬದುಕಿನ ಮಧ್ಯೆ ಭಾರತೀಯ ವಿದ್ಯಾರ್ಥಿನಿ ಹೋರಾಟ; ಆಗಿದ್ದೇನು?

ಆದರೆ ಆತನ ಪತ್ನಿ ಹಾನಿಗೊಂಡ ಕಾರಿಗೆ ರೆಡ್ ರಿಬ್ಬನ್ ಸುತ್ತಿ ಮುಚ್ಚಿಟ್ಟು ಹಳೆಯ ಕಾರ್ ಗಿಫ್ಟ್ ನೀಡಿದ್ದಾನೆ ಎಂದು, ಅದನ್ನು ಮುಟ್ಟಿಯೂ ಕೂಡ ನೋಡದೆ, ನನಗೆ ಅವಮಾನ ಮಾಡಿದ್ದೀಯಾ ಎಂದು ವಾದಕ್ಕೆ ಬಿದ್ದಿದ್ದಾಳೆ. ಈ ಗಿಫ್ಟ್ ನನಗೇನು ಬೇಕಿಲ್ಲ ಎಂದು ಕಿಡಿಕಿಡಿಯಾಗಿದ್ದಾಳೆ. ಹೆಂಡತಿ ಖುಷಿಯಾಗುತ್ತಾಳೆ ಎಂದು ನಂಬಿದ್ದ ಪತಿ ಇದರಿಂದ ಬೇಸತ್ತಿದ್ದಾನೆ. ಅದನ್ನು ತಂದು ಕಸದ ತೊಟ್ಟಿಗೆ ಎಸೆದಿದ್ದಾನೆ. ದೊಡ್ಡದಾದ ಗಾರ್ಬೆಜ್​ ಕಂಟೆನರ್​ಗೆ ಕರೆಕ್ಟಾಗಿ ಹೊಂದಿಕೊಂಡು ಮೇಲೆ ನಿಂತಿರುವ ಕಾರು ಈಗ ದೊಡ್ಡ ಸದ್ದು ಮಾಡುತ್ತಿದೆ. ಹೋಗುವವರು ಬರುವವರು ಅದರ ಫೋಟೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ರಷ್ಯಾಗೆ ಬಂದ ಪ್ರವಾಸಿಗರಿಗೂ ಇದರ ಬಗ್ಗೆ ಕುತೂಹಲವುಂಟಾಗಿ ಇಲ್ಲಿಗೆ ಬಂದು ಹೀಗೆ ಅನಾಥವಾಗಿ ಬಿದ್ದ ಕಾರನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕಾರ್ಬೆಜ್ ಕಂಟೇನರ್ ಈಗ ಅಕ್ಷರಶಃ ಫೋಟೋ ಬೂತ್ ಆಗಿ ಬದಲಾಗಿದೆ.

publive-image

ಇಷ್ಟಾದರೂ ಇಂದಿಗೂ ಕೂಡ ಅದನ್ನು ವಾಪಸ್ ತೆಗೆದುಕೊಂಡು ಹೋಗಲು ಮಾಲೀಕ ಸಜ್ಜಾಗಿಲ್ಲ. ಆ ವ್ಯಕ್ತಿಯ ಸ್ನೇಹಿತ ಮಾಧ್ಯಮಗಳೊಂದಿಗೆ ಮಾತನಾಡಿದ್ದು. ತನ್ನ ಮದುವೆಯನ್ನು ಕೊನೆಯವರೆಗೆ ಉಳಿಸಿಕೊಳ್ಳಲು ನನ್ನ ಸ್ನೇಹಿತ ಮಾಡಿದ ಅಂತಿಮ ಕೆಲಸ ಎಂದರೆ ಅದು ಈ ದುಬಾರಿ ಕಾರನ್ನು ಖರೀದಿ ಮಾಡಿದ್ದು. ಆದರೆ ಇದು ಕೂಡ ಅವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಮಾಡಿತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment