newsfirstkannada.com

ಈ ವಿಮಾನದಲ್ಲಿ 2 ಲಕ್ಸುರಿ ಬೆಡ್​ ರೂಮ್, ಬಾರ್, ಗ್ಲಾಸ್ ಪೋರ್ಟಲ್​.. ಇನ್ನೂ ಇನೇನ್ ಇದೆ..?

Share :

Published February 18, 2024 at 10:51am

    ಸೋಷಿಯಲ್​ ಮೀಡಿಯಾದಲ್ಲಿ ಸಖತ್ ಸೆನ್ಸೇಷನಲ್ ಪ್ಲೇನ್

    ಆನಂದ್ ಮಹಿಂದ್ರಾ ಶೇರ್ ಮಾಡಿರುವ ವಿಲ್ಲಾದ ವಿಮಾನ

    ನೋಡುಗರನ್ನು ಆಕರ್ಷಿಸುತ್ತದೆ ಪಕ್ಕದಲ್ಲಿನ ಸ್ವಿಮ್ಮಿಂಗ್ ಪೂಲ್

ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರ ಅವರು ಯಾವಗಲೂ ಇಂಜಿನೀಯರಿಂಗ್​ಗೆ ಸಂಬಂಧಿಸಿದ ಸುದ್ದಿಗಳನ್ನು ತಮ್ಮ ಸೋಷಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಪೋಸ್ಟ್​ ಮಾಡುತ್ತಿರುತ್ತಾರೆ. ಹಿಂದೂ ಮಹಾಸಾಗರ ಸಮುದ್ರದ ದಡದಲ್ಲಿ ಬೋಯಿಂಗ್​ 737 ವಿಮಾನವನ್ನೇ ಐಷಾರಾಮಿ ವಿಲ್ಲಾವಾಗಿ ನಿರ್ಮಾಣ ಮಾಡಿರುವ ವಿಡಿಯೋವೊಂದು ಹಂಚಿಕೊಂಡಿರುವುದು ಸಖತ್ ಸೆನ್ಷೇಷನಲ್ ಮೂಡಿಸಿದೆ. ಈ ವಿಲ್ಲಾದ ಸಂಪೂರ್ಣ ಮಾಹಿತಿ ಏನೆಂಬುದು ಇಲ್ಲಿದೆ.

ಹಿಂದೂ ಮಹಾಸಾಗರದ ಎತ್ತರದ ತಡದಲ್ಲಿ ಬೋಯಿಂಗ್ ವಿಮಾನವನ್ನು ಇರಿಸಿ ಅದನ್ನು ಸುಂದರ ವಿಲ್ಲಾವಾಗಿ ಮಾರ್ಪಾಡು ಮಾಡಲಾಗಿದೆ. ಹೊರ ಭಾಗದಲ್ಲಿ ಮಾತ್ರ ವಿಮಾನದಂತೆ ಕಂಡರೂ ಒಳಗೆ ಕ್ಲಾಸಿಕ್​ ರೂಮ್​ಗಳೊಂದಿಗೆ, ಎರಡು ಲಕ್ಸುರಿ ಬೆಡ್​ರೂಮ್​ ಹೊಂದಿದೆ. ವಿಮಾನವನ್ನು ಎತ್ತರದ ಸ್ಥಳದಲ್ಲಿ ಇರಿಸಿದ್ದರಿಂದ ಪಕ್ಕದಲ್ಲೇ ಸ್ವಿಮ್ಮಿಂಗ್ ಪೂಲ್ ಅನ್ನು ನಿರ್ಮಾಣದ ಆಕರ್ಷಣೆಯಂತು ನೋಡುಗರನ್ನು ಇನ್ನಷ್ಟು ಸೆಳೆಯುತ್ತದೆ.

ಈ ವಿಮಾನ ವಿಲ್ಲಾದಲ್ಲಿ ಎರಡು ಲಕ್ಸುರಿ ಬೆಡ್​ರೂಮ್​ಗಳ ಜೊತೆ ಬಾರ್, ಸೋಫಾ ಬೆಡ್​, ಗ್ಲಾಸ್ ಪೋರ್ಟಲ್​ ಇದೆ. ವಿಮಾನದ ಕಾಕ್​ಪೀಟ್​ ಅನ್ನು ದೊಡ್ಡ ಬಾತ್​ರೂಮ್​ ಆಗಿ ಪರಿವರ್ತಿಸಿದ್ದು ಸ್ನಾನ ಮಾಡುತ್ತ ಸಮುದ್ರದ ಸೌಂದರ್ಯವನ್ನು ಸವಿಯಬಹುದು. ಬೇಕಾದರೆ ಸೂರ್ಯನ ಕಿರಣಗಳು ವಿಮಾನದ ಒಳಗೆ ಬೀಳುತ್ತವೆ. ಆ ರೀತಿಯಾದ ತಂತ್ರಜ್ಞಾನ ಕೂಡ ಇದರಲ್ಲಿದೆ. ಇದನ್ನು ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಮನಮೋಹಕವಾಗಿ ನಿರ್ಮಾಣ ಮಾಡಲಾಗಿದೆ. ನವ ಜೋಡಿಗಳನ್ನು ಕೈಬೀಸಿ ಕರೆಯುವಂತೆ ಚೆಂದವಾಗಿದೆ.

ಇಷ್ಟೊಂದು ಅದ್ಭುತವಾದ ಆಲೋಚನೆ ಬಂದಿರೋದು ರಷ್ಯಾದ ಉದ್ಯಮಿ ಫೆಲಿಕ್ಸ್ ಡೆಮಿನ್ ಅವರಿಗೆ. ಕೆಟ್ಟು ಹೋಗಿದ್ದ ಈ ಬೋಯಿಂಗ್ 737 ವಿಮಾನವನ್ನು 2021ರಲ್ಲಿ ಖರೀದಿ ಮಾಡಿದ್ದ ಫೆಲಿಕ್ಸ್ ಡೆಮಿನ್, ಬಳಿಕ ಕೆಲ ದಿನಗಳ ನಂತರ ಅದನ್ನು ಇಂಡೋನೇಷ್ಯಾದ ಬಾಲಿಯಲ್ಲಿರುವ ವಿಶಿಷ್ಟವಾದ ನ್ಯಾಂಗ್ ನ್ಯಾಂಗ್ ಬಂಡೆಗಳ ಮೇಲೆ ಸ್ಥಳಾಂತರ ಮಾಡಿದರು. ನೂರಾರು ಆಲೋಚನೆಗಳ ನಂತರ ವಿಮಾನದಲ್ಲಿ ಐಷಾರಾಮಿ ವಿಲ್ಲಾ ಸಿದ್ಧವಾಯಿತು. ನಿರ್ಮಾಣದ ಎಲ್ಲ ಕೆಲಸಗಳು ಮುಗಿದ ಮೇಲೆ 2023ರಲ್ಲಿ ಅಧಿಕೃತವಾಗಿ ಓಪನಿಂಗ್ ಪಡೆದುಕೊಂಡಿತು. ಸದ್ಯ ವಿಶ್ವದ ಶ್ರೇಷ್ಠ ಹೋಟೆಲ್​ಗಳ ಸಾಲಿನಲ್ಲಿ ಈ ವಿಮಾನದ ವಿಲ್ಲಾ ಕೂಡ ಒಂದಾಗಿದೆ ಎನ್ನುವುದು ಇಲ್ಲಿ ಗುರುತಿಸಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಿಮಾನದಲ್ಲಿ 2 ಲಕ್ಸುರಿ ಬೆಡ್​ ರೂಮ್, ಬಾರ್, ಗ್ಲಾಸ್ ಪೋರ್ಟಲ್​.. ಇನ್ನೂ ಇನೇನ್ ಇದೆ..?

https://newsfirstlive.com/wp-content/uploads/2024/02/Plane_Luxury-Villa.jpg

Load More