newsfirstkannada.com

VIDEO: ಉಕ್ರೇನ್‌ ಕೈದಿಗಳಿದ್ದ ರಷ್ಯಾದ ವಿಮಾನ ಪತನ; 70ಕ್ಕೂ ಹೆಚ್ಚು ಮಂದಿ ಸಾವು

Share :

Published January 24, 2024 at 4:38pm

Update January 24, 2024 at 4:51pm

    ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡ ಇಲ್ಯುಶಿನ್ Il-76 ಮಿಲಿಟರಿ ವಿಮಾನ

    ಪತನಗೊಂಡ ವಿಮಾನದಲ್ಲಿ ಉಕ್ರೇನ್‌ ಯುದ್ಧ ಕೈದಿಗಳ ಸಾಗಿಸಲಾಗುತ್ತಿತ್ತು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ವಿಮಾನ ಪತನದ ವಿಡಿಯೋ

ಮಾಸ್ಕೋ: 65 ಉಕ್ರೇನಿಯನ್ ಯುದ್ಧ ಕೈದಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವು ಬೆಲ್ಗೊರೊಡ್ ಪ್ರದೇಶದಲ್ಲಿ ಪತನಗೊಂಡಿದೆ. ಪತನಗೊಂಡ ವಿಮಾನದಲ್ಲಿ ಉಕ್ರೇನ್‌ ಯುದ್ಧ ಕೈದಿಗಳನ್ನು ಸಾಗಿಸಲಾಗುತ್ತಿತ್ತು.

ವಿಮಾನದಲ್ಲಿ 74 ಉಕ್ರೇನ್‌ ಯುದ್ಧ ಕೈದಿಗಳ ಜೊತೆಗೆ ಆರು ಸಿಬ್ಬಂದಿಗಳು ಹಾಗೂ ಇತರ ಮೂವರು ವ್ಯಕ್ತಿಗಳು ಇದ್ದರು ಎಂದು ರಾಜ್ಯ ಸುದ್ದಿ ಸಂಸ್ಥೆ ಆರ್‌ಐಎ ವರದಿ ಮಾಡಿದೆ. ಇನ್ನು, ರಷ್ಯಾದ ಇಲ್ಯುಶಿನ್ Il-76 ಮಿಲಿಟರಿ ಸಾರಿಗೆ ವಿಮಾನವು ಯಾವ ಕಾರಣಕ್ಕೆ ವಿಮಾನ ಪತನಗೊಂಡಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ವಿಮಾನದಲ್ಲಿ ಯಾರೆಲ್ಲಾ ಇದ್ದರು ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಘಟನಾ ಸ್ಥಳಕ್ಕೆ ತುರ್ತು ಕಾರ್ಯಪಡೆ ಭೇಟಿ ಕೊಟ್ಟಿದೆ. ರಷ್ಯಾದ ಇಲ್ಯುಶಿನ್ Il-76 ಮಿಲಿಟರಿ ಸಾರಿಗೆ ವಿಮಾನವು ಪತನಗೊಳ್ಳುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಉಕ್ರೇನ್‌ ಕೈದಿಗಳಿದ್ದ ರಷ್ಯಾದ ವಿಮಾನ ಪತನ; 70ಕ್ಕೂ ಹೆಚ್ಚು ಮಂದಿ ಸಾವು

https://newsfirstlive.com/wp-content/uploads/2024/01/plane-1.jpg

Load More