newsfirstkannada.com

103 ದಿನ 6 ಬಳ್ಳಿಗಳು 8 ಕಲ್ಲಂಗಡಿ; ವಿಶ್ವದ ಅತ್ಯಂತ ಕೋಲ್ಡ್‌ ಪ್ರದೇಶದಲ್ಲಿ ವಾಟರ್​ಮೆಲನ್ ಬೆಳೆದ ವಿಜ್ಞಾನಿಗಳು

Share :

Published August 3, 2023 at 2:45pm

Update August 3, 2023 at 3:03pm

  ಯಾವ ಜೀವಿಯು ವಾಸಿಸಲು ಯೋಗ್ಯವಲ್ಲದ ಕೋಲ್ಡ್​ ಪ್ರದೇಶ

  ಕೇವಲ 6 ಬಳ್ಳಿಗಳಿಂದ ಕಲ್ಲಂಗಡಿ ಹಣ್ಣು ಫಲ ಪಡೆದ ವಿಜ್ಞಾನಿಗಳು

  ಅಂಟಾರ್ಟಿಕಾದಲ್ಲಿ ಸೂರ್ಯನ ಕಿರಣಗಳೇ ಬೀಳೋದಿಲ್ಲ ಗೊತ್ತಾ.?

ಅಂಟಾರ್ಟಿಕಾದ ವಿಶ್ವದ ಅತ್ಯಂತ ತಂಪು ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣಗಳನ್ನು ಬೆಳೆಯುವುದರ ಮೂಲಕ ರಷ್ಯಾದ ವಿಜ್ಞಾನಿಗಳು ಕೃಷಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದ್ದಾರೆ.

ಅಂಟಾರ್ಟಿಕಾದ ಪ್ರಿನ್ಸೆಸ್​ ಎಲಿಜಬೆತ್ ಪ್ರದೇಶದಲ್ಲಿ​ ರಷ್ಯಾದ ಸಂಶೋಧನಾ ಸಂಸ್ಥೆಯ ವೋಸ್ಟಾಕ್​ ಸ್ಟೇಷನ್​ ಇದೆ. ಇದು ಪ್ರಪಂಚದಲ್ಲಿಯೇ ಅತ್ಯಂತ ತಣ್ಣಗಿನ ಪ್ರದೇಶ ಅಂದರೆ ಇಲ್ಲಿ ಸುಮಾರು ಮೈನಸ್ 128.6 ಡಿಗ್ರಿಯಷ್ಟು ವಾತಾವರಣ ಇರುತ್ತದೆ. ಇಂತಹ ಪ್ರದೇಶದಲ್ಲಿ ಯಾವ ಜೀವಿಯು ಇರುವುದಿಲ್ಲ ಜೊತೆಗೆ ಯಾವುದೇ ಬೆಳೆ ಕೃಷಿ ಮಾಡಲು ಸಾಧ್ಯವಿಲ್ಲ. ಆದರೆ, ರಷ್ಯಾದ ವಿಜ್ಞಾನಿಗಳು ಇಲ್ಲಿ ಕಲ್ಲಂಗಡಿ ಬೀಜಗಳನ್ನು ನಾಟಿ ಮಾಡಿ ಬೆಳೆ ಬೆಳೆದಿರುವುದು ಕೃಷಿ ವಲಯದಲ್ಲೇ ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.

ಕಲ್ಲಂಗಡಿ ಹಣ್ಣುಗಳು

ವಿಜ್ಞಾನಿಗಳ ಈ ಪ್ರಯತ್ನವು ವೋಸ್ಟಾಕ್​ ಸ್ಟೇಷನ್​ನ ಹಸಿರುಮನೆಯಲ್ಲಿ ಮೊದಲು ಕಲ್ಲಂಗಡಿಯ ಬೀಜಗಳನ್ನು ನಾಟಿ ಮಾಡಿದ್ದು ಸೂರ್ಯ ಕಿರಣಗಳು ಬರದೆ ಇರುವ ಕಾರಣ ಕೃತಕ ಬೆಳಕನ್ನು ಹಾಯಿಸಿದ್ದಾರೆ. ಬಳಿಕ ಬೀಜಗಳು ಮೊಳಕೆ ಹೊಡೆದಿದ್ದು ಬಳ್ಳಿಯಾಗಿ ಕಲ್ಲಂಗಡಿಗಳ ಫಲ ಬಂದಿದೆ. ಇದಕ್ಕೆಲ್ಲ ಬರೋಬ್ಬರಿ 103 ದಿನಗಳ ಕಾಲ ಸಖತ್​ ಚಳಿಯಲ್ಲಿ ಸರ್ಕಸ್​ ಮಾಡಿದ ವಿಜ್ಞಾನಿಗಳು ಕೊನೆಗೆ 6 ಬಳ್ಳಿಗಳಿಂದ 8 ರಸಭರಿತವಾದ ಕಲ್ಲಂಗಡಿ ಫಲ ಪಡೆದುಕೊಂಡಿದ್ದಾರೆ.

ಮಾನವ ವಾಸಿಸಲು ಯೋಗ್ಯವಲ್ಲದ ಏಕೈಕ ಖಂಡ ಅಂಟಾರ್ಟಿಕಾ 

ವಿಶ್ವದಲ್ಲಿಯೇ ಮಾನವ ವಾಸಿಸದ ಖಂಡ ಅಂಟಾರ್ಟಿಕಾದಲ್ಲಿ ಕಲ್ಲಂಗಡಿ ಬೆಳೆಯುವಂತ ಅನುಕೂಲಕರವಾದ ಓಯಸಿಸ್​ ಅನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇನ್ನು ಬೆಳೆದಂತ ಕಲ್ಲಂಗಡಿಗಳು ಪ್ರತಿಯೊಂದು 1 ಕೆ.ಜಿ ಇದ್ದು 5 ಇಂಚುಗಳಷ್ಟು ದೊಡ್ಡದಾಗಿವೆ ಎಂದು ರಷ್ಯಾ ವಿಜ್ಞಾನಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ಕಲ್ಲಂಗಡಿಗೆ ಇತಿಹಾಸ ಕಾಲದಿಂದಲೂ ಭೂಮಿ ಮೇಲೆ ಇದೆ. ಇದನ್ನು 4,300 ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಸುಡಾನ್​ನಲ್ಲಿ ಕಂಡುಕೊಳ್ಳಲಾಯಿತು. ಸಂಶೋಧನೆ ಪ್ರಕಾರ ಈಜಿಪ್ಟ್​ ಸಮಾಧಿಗಳಲ್ಲಿ ಕಲ್ಲಂಗಡಿ ಬೀಜಗಳು ಪತ್ತೆಯಾಗಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

103 ದಿನ 6 ಬಳ್ಳಿಗಳು 8 ಕಲ್ಲಂಗಡಿ; ವಿಶ್ವದ ಅತ್ಯಂತ ಕೋಲ್ಡ್‌ ಪ್ರದೇಶದಲ್ಲಿ ವಾಟರ್​ಮೆಲನ್ ಬೆಳೆದ ವಿಜ್ಞಾನಿಗಳು

https://newsfirstlive.com/wp-content/uploads/2023/08/watermelons-_1.jpg

Load More