Advertisment

ಗುಹೆ ಲೇಡಿ ಮಕ್ಕಳು ಯಾರಿಗೆ ಸೇರಬೇಕು? ರಷ್ಯಾದ ಮಮ್ಮಿಗಾ, ಇಸ್ರೇಲ್​​ನ ಡ್ಯಾಡಿಗಾ? ಕೋರ್ಟ್​ನಲ್ಲಿ ಪುಟಾಣಿಗಳ ಭವಿಷ್ಯ..!

author-image
Ganesh
Updated On
2017ರಲ್ಲಿ ಪ್ರೀತಿ, ಇಬ್ಬರು ಮಕ್ಕಳು.. ಆಮೇಲೆ ನಿಗೂಢ ಕಣ್ಮರೆ.. ಗುಹೆ ಲೇಡಿ ಲವ್ ಕಹಾನಿ ರೋಚಕ..!
Advertisment
  • ಮಕ್ಕಳು ಬೇಕು ಅಂತಾ ಕೋರ್ಟ್‌ ಮೊರೆ ಹೋಗಿದ್ದಾನೆ!
  • ತಾಯಿ ರಷ್ಯಾ, ತಂದೆ ಇಸ್ರೇಲ್‌, ಬೆಳೆದಿದ್ದು ಭಾರತದಲ್ಲಿ!
  • ಫ್ಯಾಮಿಲಿ ಕೋರ್ಟ್‌ ತೀರ್ಪು ಏನಿರುತ್ತೆ? ಕೇಂದ್ರ ಏನು ಮಾಡುತ್ತೆ?

ಗೋಕರ್ಣದ ರಾಮತೀರ್ಥ ಅನ್ನೋ ಬೆಟ್ಟದಲ್ಲಿರೋ ಗುಹೆಯಲ್ಲಿ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಲಾಗಿತ್ತು. ಇದೀಗ ಆಕೆಗೆ ಓರ್ವ ಬಾಯ್​ಫ್ರೆಂಡ್ ಇರೋದು ಬೆಳಕಿಗೆ ಬಂದಿದ್ದು, ಆತ ಇಸ್ರೇಲ್​ನಿಂದ ಓಡೋಡಿ ಬಂದಿದ್ದಾನೆ.

Advertisment

ಸುದ್ದಿ ಕೇಳ್ತಾ ಇದ್ದಂತೆ ಓಡೋಡಿ ಬಂದ ಗೋಲ್ಡ್‌ ಸ್ಟೀನ್‌!

ಗೋಕರ್ಣದಲ್ಲಿ ರಷ್ಯಾ ಮಹಿಳೆಯ ರಕ್ಷಣೆ, ಇಬ್ಬರ ಮಕ್ಕಳು ಜೊತೆ ಆಕೆ ಗುಹೆಯಲ್ಲಿ ವಾಸವಾಗಿದ್ಲು ಅನ್ನೋದು ಸುದ್ದಿ ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗಿತ್ತು. ಅದು ಆಕೆಯ ಇಸ್ರೇಲ್ ಪ್ರಿಯಕರ ಗೋಲ್ಡ್‌ ಸ್ಟೀನ್‌ಗೂ ಗೊತ್ತಾಗುತ್ತೆ. ಹೀಗಾಗಿ ಆತ ತಡ ಮಾಡದೇ ನೇರವಾಗಿ ಭಾರತಕ್ಕೆ ಬಂದಿದ್ದಾನೆ. ತನ್ನ ಮಕ್ಕಳು ಮತ್ತು ಗೆಳತಿ ಇರೋ ಬೆಂಗಳೂರಿಗೆ ಬಂದು ಅಧಿಕಾರಿಗಳ ಜೊತೆ ಮಾತುಕತೆ ನಡೆಸ್ತಿದ್ದಾನೆ. ಅವು ತನ್ನದೇ ಮಕ್ಕಳು, ಅವಳೇ ತನ್ನ ಗೆಳತಿ ಅನ್ನೋದನ್ನ ಆತನ ಕೆಲವು ಫೋಟೋಗಳನ್ನ ಕೊಟ್ಟಿದ್ದಾನೆ. ಅದನ್ನ ನೋಡಿದ ಅಧಿಕಾರಿಗಳಿಗೂ ರಷ್ಯಾ-ಇಸ್ರೇಲ್‌ ಲವ್‌ ಸ್ಟೋರಿ ಕನ್ಫರ್ಮ್‌ ಆಗಿದೆ.

ಇದನ್ನೂ ಓದಿ: 2017ರಲ್ಲಿ ಪ್ರೀತಿ, ಇಬ್ಬರು ಮಕ್ಕಳು.. ಆಮೇಲೆ ನಿಗೂಢ ಕಣ್ಮರೆ.. ಗುಹೆ ಲೇಡಿ ಲವ್ ಕಹಾನಿ ರೋಚಕ..!

publive-image

ಆ ಸಂದರ್ಭದಲ್ಲಿ ಕಾಣಿಸ್ಕೊಂಡಿರೋ ಪ್ರಶ್ನೆ ಅಂದ್ರೆ, ಮಹಿಳೆ ಮತ್ತು ಮಕ್ಕಳನ್ನ ರಷ್ಯಾಗೆ ಕಳುಹಿಸ್ತಾರಾ? ಯಾವ್‌ ರೀತಿಯಲ್ಲಿ ಕಳುಹಿಸ್ತಾರೆ? ರಷ್ಯಾದಲ್ಲಿ ಆಕೆಯ ಫ್ಯಾಮಿಲಿ ಬಗ್ಗೆ ಏನಾದ್ರೂ ಮಾಹಿತಿ ಸಿಕ್ತಾ? ಇಂತಾ ಹತ್ತಾರು ಪ್ರಶ್ನೆಗಳು ಇದ್ವು. ಅದ್ಯಾವಾಗ ಇಸ್ರೇಲ್‌ನಲ್ಲಿದ್ದ ಡ್ರೋರ್‌ ಗೋಲ್ಡ್‌ ಸ್ಟೀನ್‌ ಓಡೋಡಿ ಬಂದ್ನೋ ಆ ಕ್ಷಣದಿಂದಲೇ ಇನ್ನೊಂದ್‌ ಪ್ರಶ್ನೆ ಹುಟ್ಟಿಕೊಂಡಿದೆ. ಅದೇನು ಅಂದ್ರೆ ಮಕ್ಕಳು ಮಹಿಳೆ ಜೊತೆ ರಷ್ಯಾಗೆ ಹೋಗ್ತಾರಾ? ಇಲ್ಲವೇ ಇಸ್ರೇಲ್‌ಗೆ ಪ್ರಯಾಣಿಸ್ತಾರಾ? ಅನ್ನೋದು.

Advertisment

ಮಹಿಳೆ ರಷ್ಯಾ ಪೌರತ್ವವನ್ನ ಹೊಂದಿರೋಳು.. ಆಕೆ 2016 ರಲ್ಲಿ ಭಾರತಕ್ಕೆ ಬಂದು ವಾಸದವಾದ್ವು. ಹಾಗೇ ಗೋಲ್ಡ್‌ ಸ್ಟೀನ್‌ ಇಸ್ರೇಲ್‌ ವ್ಯಕ್ತಿ. ಆತ 2017 ರಲ್ಲಿ ಭಾರತಕ್ಕೆ ಬಂದು ಆಮೇಲೆ 2021 ರಲ್ಲಿ ರಿಟರ್ನ್‌ ಇಸ್ರೇಲ್‌ಗೆ ಹೋಗಿರೋ ವ್ಯಕ್ತಿ. ಇನ್ನು ಇಬ್ಬರು ಮಕ್ಕಳು ಭಾರತದಲ್ಲಿಯೇ ಹುಟ್ಟಿ ಬೆಳದವ್ರು. ಹೀಗಾಗಿ ಮಕ್ಕಳಿಗೆ ಯಾವ ದೇಶದ ಪೌರತ್ವ ಸಿಗುತ್ತೆ? ಅವರನ್ನ ಇಸ್ರೇಲ್‌ಗೆ ಕಳುಹಿಸಲಾಗುತ್ತಾ? ಇಲ್ಲವೇ ರಷ್ಯಾಗೆ ಕಳುಹಿಸ್ತಾರಾ? ಅನ್ನೋದು. ಮುಖ್ಯವಾಗಿ ಇಂತವೊಂದು ಪ್ರಶ್ನೆ ಕಾಣಿಸ್ಕೊಳ್ಳುವುದುಕ್ಕೆ ಕಾರಣ, ಗೋಲ್ಡ್‌ ಸ್ಟೀನ್‌ ಮಕ್ಕಳನ್ನ ತನ್ನ ಸುಪರ್ದಿಗೆ ಕೊಡ್ಬೇಕು ಅಂತಾ ಬೇಡಿಕೆ ಇಟ್ಟಿರೋದು.

ನನ್ನ ಮಕ್ಕಳಿಗೆ ಶಿಕ್ಷಣ ಬೇಕು ಅಂದಿರೋ ಪ್ರಿಯಕರ

ರಷ್ಯಾ ಮಹಿಳೆ ಜೊತೆಗಿದ್ದ ಒಂದು ಮಗು 6 ವರ್ಷದ್ದು. ಅದರ ಹೆಸ್ರು ಪ್ರೇಮ, ಇನ್ನೊಂದು ಮಗ 4 ವರ್ಷದ್ದು. ಅದರ ಹೆಸ್ರು ಅಮಾ. ಈ ಇಬ್ಬರು ಮಕ್ಕಳನ್ನೂ ಆಕೆ ಇನ್ನೂವರೆಗೂ ಸ್ಕೂಲ್‌ಗೆ ಸೇರಿಸಿಲ್ಲ. ಇದು ಅಚ್ಚರಿಯಾದ್ರೂ ಸತ್ಯ. ಗೋವಾದಲ್ಲಿರುವಾಗ, ನೇಪಾಳದಲ್ಲಿ ವಾಸ ಮಾಡುವಾಗಲೂ ಮಕ್ಕಳನ್ನ ಸ್ಕೂಲ್‌ಗೆ ಕಳುಹಿಸಿಲ್ಲ. ತಾನೇ ಶಿಕ್ಷಣ ಕೋಡ್ತಾ ಇದ್ಲು. ಗುಹೆಯಲ್ಲಿ ಗೋಕರ್ಣ ಪೊಲೀಸ್ರು ಪರಿಶೀಲನೆ ನಡೆಸಿದ್ದ ವೇಳೆ ಮಕ್ಕಳ ಪುಸ್ತಕಗಳು ಪತ್ತೆಯಾಗಿದ್ವು. ಅವುಗಳನ್ನ ಮಕ್ಕಳಿಗೆ ಪ್ರತಿನಿತ್ಯ ಪಾಠ ಮಾಡೋದಕ್ಕಾಗಿಯೇ ತೆಗೆದ್ಕೊಂಡಿರೋ ಪುಸ್ತಕ ಅಂತಾನೇ ಹೇಳಿದ್ಲು. ಹೀಗಾಗಿಯೇ ಆಕೆ ಮಕ್ಕಳನ್ನ ಯಾವುದೇ ಸ್ಕೂಲ್‌ಗೆ ಸೇರಿಸಿದೆ ನಾತೇ ಶಿಕ್ಷಣ ಕೊಡ್ತಾ ಇದ್ಲು ಅನ್ನೋದ್‌ ಕನ್ಫರ್ಮ್‌ ಆಗಿತ್ತು. ಇದೀಗ ಗೋಲ್ಡ್‌ ಸ್ಟೀನ್‌ ತನ್ನ ಮಕ್ಕಳಿಗೆ ಶಿಕ್ಷಣ ಕೊಡಿಸ್ಬೇಕು. ಅವ್ರು ಗುಹೆಯಲ್ಲಿ ಇರ್ಬೇಕಾಗಿರೋ ಮಕ್ಕಳು ಅಲ್ಲ. ಉತ್ತಮ ಶಿಕ್ಷಣ ಹೊಂದಬೇಕಾದ ಮಕ್ಕಳು ಅಂತಾ ಕೋರ್ಟ್‌ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: Karnataka Rain: ಮಲೆನಾಡು, ಕರಾವಳಿ ಭಾಗದಲ್ಲಿ ಭಾರೀ ಮಳೆ.. ಶಾಲಾ-ಕಾಲೇಜುಗಳಿಗೆ ರಜೆ..!

Advertisment

publive-image

ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ನಲ್ಲಿ ಏನು ಅಂತಾ ಡಿಸೈಡ್‌ ಆಗುತ್ತೆ. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ. ಸಾಮಾನ್ಯವಾಗಿ ಮಕ್ಕಳ ಮೇಲೆ ಹಕ್ಕು ಇರೋದು ತಾಯಿಗೆ ಆಗಿರುತ್ತೆ. ಒಂದ್‌ ವೇಳೆ ತಾಯಿ ಏನಾದ್ರೂ ತನ್ನ ಮಕ್ಕಳನ್ನ ಸರಿಯಾಗಿ ನೋಡಿಕೊಳ್ತಾ ಇಲ್ಲ. ಅವ್ರಿಗೆ ಶಿಕ್ಷಣ ಕೊಡ್ತಾ ಇಲ್ಲ. ತಾಯಿ ಮಾನಸಿಕವಾಗಿದ್ದಾಳೆ ಅನ್ನೋದ್ ಏನಾದ್ರೂ ಕೋರ್ಟ್‌ನಲ್ಲಿ ಸಾಬೀತು ಆಯ್ತು ಅಂತಾದ್ರೆ ಆವಾಗ ಕೋರ್ಟ್‌ ತಂದೆಯ ಜೊತೆಗೆ ಮಕ್ಕಳನ್ನ ಕಳುಹಿಸೋ ಸಾಧ್ಯತೆ ಇರುತ್ತೆ.

ಅವರ ಕಿರಿಯ ಮಗಳು ಭಾರತದಲ್ಲೇ ಹುಟ್ಟಿದ್ದಾಳೆ. ದೊಡ್ಡ ಮಗಳು ಭಾರತಕ್ಕೆ ಬಂದಾಗ ಒಂದು ವರ್ಷದ ಮಗುವಾಗಿದ್ದಳು. ಕಳೆದ 6 ವರ್ಷಗಳಿಂದ ಅವರು ಭಾರತದಲ್ಲೇ ಇದ್ದಾರೆ.. ಇವರಿಗೆ ಇವರ ಮಕ್ಕಳ ಸೇಫ್ಟಿ, ವಿದ್ಯಾಭ್ಯಾಸದ ಬಗ್ಗೆ ಕಾಳಜಿ ಇದೆ. ಇಲ್ಲಿನ ಜನರ ಜೊತೆಗೆ ಮಕ್ಕಳೂ ಬೆರೆಯಬೇಕಾಗಿದೆ.. ಒಬ್ಬ ತಂದೆಯಾಗಿ ಇಷ್ಟೆಲ್ಲಾ ಆಸೆ ಇದ್ದರೂ ಮಕ್ಕಳನ್ನ ಮೀಟ್ ಮಾಡಲು ಆಗ್ತಿಲ್ಲ-ಬೀನಾ ಪಿಲ್ಲೈ, ವಕೀಲರು

ತಂದೆ ತಾಯಿ ಇಬ್ಬರೂ ಒಂದೇ ದೇಶದ ಪ್ರಜೆಗಳು ಆಗಿದ್ರೆ ನಿರ್ಧಾರ ಮಾಡೋದು ಸುಲಭ. ಇಲ್ಲಿ ತಾಯಿ ರಷ್ಯಾದವಳು, ತಂದೆ ಇಸ್ರೇಲ್‌, ಮಕ್ಕಳು ಬೆಳೆದಿದ್ದು ಭಾರತದಲ್ಲಿ. ಹೀಗಾಗಿ ಮಕ್ಕಳನ್ನ ಗೋಲ್ಡ್‌ ಸ್ಟೀನ್‌ ಜೊತೆ ಕಳುಹಿಸೋ ನಿರ್ಧಾರ ಏನಾಗುತ್ತೋ ಇಲ್ವೋ ಅನ್ನೋದು ಗೊತ್ತಿಲ್ಲ. ಈ ಬಗ್ಗೆ ಫ್ಯಾಮಿಲಿ ಕೋರ್ಟ್‌ ಏನು ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡ್ಬೇಕು. ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳುತ್ತೆ.

Advertisment

ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಹರ್ಷಿತಾ ಅದ್ಧೂರಿ ಸೀಮಂತ.. ತುಂಬು ಗರ್ಭಿಣಿಯ ಬ್ಯೂಟಿಫುಲ್​ ಫೋಟೋಸ್​ ನೋಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment